ಶಿವಮೊಗ್ಗ : ಕೊರೊನಾ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತಾ ಹುಡುಕಿಕೊಂಡು ಬರಲ್ಲ. ಜನ ದೊಡ್ಡ ಸಂಖ್ಯೆಯಲ್ಲಿ ಸೇರಿಕೊಳ್ಳುವುದರಿಂದ ಅವರಲ್ಲಿ ಕಂಡು ಬರುತ್ತಿದೆ. ಕೇಸು ಯಾರಿಗೆ ಹಾಕಬೇಕು, ಬಿಡಬೇಕು ಅಂತಾ ಸಂಬಂಧಪಟ್ಟ ಇಲಾಖೆ ಗಮನ ಹರಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಈ ಕುರಿತು ಮಾತನಾಡಿದ ಅವರು, ಬಿಜೆಪಿ ಅವರ ಮೇಲೂ ಕೇಸು ಹಾಕಲಿ, ಬೇಡ ಎನ್ನುವುದಿಲ್ಲ. ಸಾಮೂಹಿಕವಾಗಿ ಜನರ ಆರೋಗ್ಯದ ಮೇಲೆ ಸಮಸ್ಯೆ ಉಂಟು ಮಾಡಿದವರ ಮೇಲೆ ಕೇಸ್ ಹಾಕಲಿ ಎಂದರು.
ಜನಾಶೀರ್ವಾದ ಯಾತ್ರೆ ಮಾಡಿದಾಗ ಕೋವಿಡ್ ಹರಡಿತು ಎಂದಾದರೆ ಅಂದೇ ಕೇಸ್ ಹಾಕಬೇಕಿತ್ತು. ಎಲ್ಲಾ ಶಾಲೆಗಳ ಮಕ್ಕಳಿಗೆ ತೊಂದರೆ ಆಗ್ತಾ ಇದೆ. ಅದಕ್ಕೆ ಕಾಂಗ್ರೆಸ್ ಬಿಜೆಪಿಯ ಮೇಲೆ, ಬಿಜೆಪಿ ಕಾಂಗ್ರೆಸ್ ಮೇಲೆ ಆಪಾದನೆ ಮಾಡುವುದನ್ನು ಬಿಟ್ಟು ಎಲ್ಲರೂ ಜಾಗೃತರಾಗಿರಬೇಕು ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಶಾಲೆಗಳಿಗೆ ರಜೆ ನೀಡಬೇಕು ಎಂದು ಹೇಳಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ರಜೆ ನೀಡುವ ಕುರಿತು ನೋಡೋಣ. ಆದರೆ, ಮಕ್ಕಳು ಶಾಲೆಗೆ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಕೋವಿಡ್ ಸಂಖ್ಯೆ ಜಾಸ್ತಿಯಾದ ಕಾರಣ ರಜೆ ನೀಡಲಾಗಿದೆ. ರಾಜ್ಯದ ಇತರೆಡೆ ರಜೆ ನೀಡಲಾಗುತ್ತಿದೆ ಎಂದರು.
ಓದಿ: ಅಪರಾಧದಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿ ಮೇಲೆ ಕಠಿಣ ಕ್ರಮ : ಸಚಿವ ಆರಗ ಎಚ್ಚರಿಕೆ