ETV Bharat / state

'ಹೆಚ್​ಡಿಕೆ - ಸಿದ್ದರಾಮಯ್ಯಗೆ ಆರ್​ಎಸ್​ಎಸ್​ ಬಗ್ಗೆ ಟೀಕೆ ಮಾಡಿಲ್ಲ ಎಂದರೆ ತಿಂದಿರುವ ಅನ್ನ ಕರಗುವುದಿಲ್ಲ'

ಪ್ರಾಮಾಣಿಕ ಕಣ್ಣಿಂದ ನೋಡಿದರೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುತ್ತಿರುವ ಸಂಸ್ಥೆ ಆರ್​ಎಸ್​ಎಸ್​ ಎಂಬುದು ಗೊತ್ತಾಗುತ್ತೆ ಎಂದು ಹೆಚ್​ಡಿಕೆಗೆ ಸಚಿವ ಕೆ.ಎಸ್​ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

k-s-eshwarappa
ಸಚಿವ ಕೆ.ಎಸ್​ ಈಶ್ವರಪ್ಪ
author img

By

Published : Oct 7, 2021, 9:18 PM IST

ಶಿವಮೊಗ್ಗ: ಹೆಚ್​.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಆರ್​ಎಸ್​ಎಸ್​ ಬಗ್ಗೆ ಟೀಕೆ ಮಾಡಿಲ್ಲ ಎಂದರೆ ತಿಂದಿರುವ ಅನ್ನ ಕರಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್​ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಆರ್​ಎಸ್​ಎಸ್​ನಲ್ಲಿ ತರಬೇತಿ ತೆಗೆದುಕೊಂಡು ಐಎಎಸ್‌, ಐಪಿಎಸ್​​​ನ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಇಡೀ ದೇಶದಲ್ಲಿ ಆರ್​ಎಸ್​ಎಸ್​ನ ಆಡಳಿತವೇ ನಡೆಯುತ್ತಿದೆ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳುತ್ತಾರೆ.

ಸಚಿವ ಕೆ.ಎಸ್​ ಈಶ್ವರಪ್ಪ

ಹೌದು, ದೇಶದ ಎಲ್ಲ ಕಡೆಯಲ್ಲೂ ಆರ್​ಎಸ್​ಎಸ್​ ಇದೆ. ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಹಾಗೂ ನಾನು ಸಹ ಆರ್​ಎಸ್​ಎಸ್​ನವನು. ಆದರೆ, ಇವರೇಕೆ ಉರಿದು ಬೀಳುತ್ತಾರೆ ಗೊತ್ತಿಲ್ಲ ಎಂದರು.

ಆರ್​ಎಸ್​ಎಸ್​ ವಿದ್ಯಾಕ್ಷೇತ್ರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದೆ. ದೇಶದ ಪ್ರತಿಹಳ್ಳಿಯಲ್ಲೂ ಸಂಘಟನೆ​ ಇದೆ. ಈ ಕುಮಾರಸ್ವಾಮಿ ಅವರಿಗೆ ಮೆದುಳಿನ ಮೇಲೆ ಪೂರೆ ಬಂದಿದೆ. ಅವರು ಪ್ರಾಮಾಣಿಕ ಕಣ್ಣಿಂದ ನೋಡಿದರೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುತ್ತಿರುವ ಸಂಸ್ಥೆ ಎಂಬುದು ಗೊತ್ತಾಗುತ್ತೆ ಎಂದು ಟಾಂಗ್ ನೀಡಿದರು.

ಇವರಿಗೆಲ್ಲ ಈಗ ಭಯ ಶುರುವಾಗಿದೆ

ಇವರಿಗೆ ಇಡೀ ದೇಶದಲ್ಲಿ ಆರ್​ಎಸ್​ಎಸ್​ ಬೆಳೆಯುತ್ತಿರುವುದರಿಂದ ನಮ್ಮ ಕಥೆ ಮುಗಿಯಿತು ಅಂತಾ ಭಯ ಹುಟ್ಟಿದೆ. ಹಾಗಾಗಿ, ಹೇಳುತ್ತಾರೆ. ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಈಗ ಎಲ್ಲಿದೆ?. ಮುಂದೆಯೂ ಹೀಗೆ ಆರ್​ಎಸ್​ಎಸ್​ ಬಗ್ಗೆ ಆಪಾದನೆ ಮಾಡಿದರೆ ಕಾಂಗ್ರೆಸ್ ದೇಶದಲ್ಲಿಯೇ ನಿರ್ನಾಮ ಆಗುತ್ತೆ ಎಂದು ಭವಿಷ್ಯ ನುಡಿದರು.

ಉತ್ತರ ಪ್ರದೇಶದಲ್ಲಿ ಆ ರೀತಿ ಘಟನೆ ನಡೆಯಬಾರದಿತ್ತು. ಯಾರು ತಪ್ಪಿತಸ್ಥರಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಆದರೆ, ಈ ಘಟನೆಯನ್ನ ಹಿಡಿದುಕೊಂಡು ರಾಜಕಾರಣ ಮಾಡಲು ಉಪಯೋಗಿಸುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್​ ಪಕ್ಷ ಈ ಘಟನೆಯನ್ನು ದುರುಪಯೋಗ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈಶ್ವರಪ್ಪ

ನಮ್ಮ ಪಕ್ಷ ಚುನಾವಣೆಗೆ ಸನ್ನದ್ಧವಾಗಿದೆ

ಎರಡು ಉಪ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಈಗಾಗಲೇ ರೆಡಿ ಇದೆ. ಎರಡು ಕಡೆಯಲ್ಲೂ ನಾವು ಗೆಲ್ಲುತೇವೆ. ಈ ಕಾಂಗ್ರೆಸ್ ಪಕ್ಷದವರ ಪರಿಸ್ಥಿತಿ ಹೇಗಿದೆ ಎಂದರೆ ಹಿಂದೂಗಳು ನಮಗೆ ವೋಟ್​ ಕೊಡಲ್ಲ, ಮುಸ್ಲಿಮರು ವೋಟ್​ ಕೊಡುತ್ತಾರೆ. ಆದರೆ, ಬೇರೆ ಪಕ್ಷದಲ್ಲಿ ಮುಸ್ಲಿಮರು ನಿಂತು ಬಿಟ್ಟರೆ ಆವಾಗ ನಮಗೆ ವೋಟ್​ ಕೊಡಲ್ಲ ಎನ್ನುವ ಗೊಂದಲದಲ್ಲಿದ್ದಾರೆ. ನಾವು ಹೆಮ್ಮೆಯಿಂದ ಹೇಳುತ್ತೇವೆ. ಹಿಂದೂಗಳು ನಮಗೆ ವೋಟ್​ ಕೊಟ್ಟು ಎರಡು ಕಡೆ ಗೆಲ್ಲಿಸುತ್ತಾರೆ ಎಂದರು.

ಓದಿ: ಕುಮಾರಸ್ವಾಮಿಗೆ ಬುದ್ಧಿ ಭ್ರಮಣೆಯಾಗಿದೆ: ರೇಣುಕಾಚಾರ್ಯ ವಾಗ್ದಾಳಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.