ETV Bharat / state

ನಿಮ್ಮ ಮಕ್ಕಳಿಗೆ ಬುದ್ಧಿ ಹೇಳದಿದ್ದರೆ ಅರೆಸ್ಟ್​ ಆಗ್ತಾರೆ: ಈಶ್ವರಪ್ಪ ಎಚ್ಚರಿಕೆ

author img

By

Published : Oct 25, 2022, 4:12 PM IST

ಶಿವಮೊಗ್ಗದಲ್ಲಿ ಪಿಎಫ್ಐ ಸಂಘಟನೆ ಇನ್ನೂ ಜೀವಂತವಾಗಿದೆಯೇ ಇಲ್ಲವೋ ಎಂಬುದನ್ನು ಪೊಲೀಸರು ಗಮನಿಸಬೇಕಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿ ಕೆಲ ಗೂಂಡಾಗಳಿಗೆ ಪೊಲೀಸರನ್ನು ಕಂಡರೆ ಭಯವಿಲ್ಲದಂತಾಗಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ನಿನ್ನೆ ರಾತ್ರಿ ಪ್ರಕಾಶ್ ಹಾಗೂ ಹರ್ಷನ ಮನೆ ಬಳಿ ಬಂದು ಗಲಾಟೆ ಮಾಡಿದವರ ವಿರುದ್ಧ ಹರಿಹಾಯ್ದ ಅವರು, ಹರ್ಷನ ಕೊಲೆ ಪ್ರಕರಣವನ್ನು ಎನ್​ಐಎಗೆ ವಹಿಸಿದ ಬಳಿಕ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ನಿನ್ನೆ ರಾತ್ರಿ ಘಟನೆಯಲ್ಲಿ‌ ಲಾಂಗು- ಮಚ್ಚು ಬಳಸದೆ ಕಲ್ಲು ತೂರಾಟ ನಡೆಸಿದ್ದಾರೆ. ನಿನ್ನೆ ನಡೆದ ಘಟನೆಯಲ್ಲಿ ಪಿಎಫ್​ಐ ಕೈವಾಡವಿದೆಯೋ ಅಥವಾ ಬೇರೆ ಯಾವುದಾದರೂ ಸಂಘಟನೆಯ ಕೈವಾಡವಿದೆಯೇ ಎಂಬುದರ ಬಗ್ಗೆ ತನಿಖೆಯಿಂದ ಹೊರಬರಬೇಕಿದೆ ಎಂದರು.

ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಪೊಲೀಸರು ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಬೇಕಿದೆ. ಸರ್ಕಾರ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಿದೆ. ಮೊನ್ನೆ ನಡೆದ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ. ಅಲ್ಲಿ‌ ಸಾವಿರಾರು ಮಂದಿ ಭಾಗವಹಿಸಿದ್ದರು ಸಹ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಾರ್ಯಕ್ರಮಕ್ಕೆ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗಿಯಾಗಿ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಯಾರು ಪ್ರಚೋದನಕಾರಿಯಾಗಿ ಮಾತನಾಡಿಲ್ಲ. ಪ್ರಕಾಶ ಹಿಂದೂ ಅಂತ ಹಲ್ಲೆ ನಡೆಸಲಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು.

ಗಲಭೆ ಸೃಷ್ಟಿಸುವ ಗೂಂಡಾಗಳ ವಿರುದ್ಧ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಗುಡುಗು

ಬುದ್ಧಿ ಹೇಳದಿದ್ದರೆ ಅರೆಸ್ಟ್​ ಆಗ್ತಾರೆ: ಶಿವಮೊಗ್ಗದಲ್ಲಿ ಪಿಎಫ್ಐ ಸಂಘಟನೆ ಇನ್ನೂ ಜೀವಂತವಾಗಿದೆಯೇ ಇಲ್ಲವೋ ಎಂಬುದನ್ನು ಪೊಲೀಸರು ಗಮನಿಸಬೇಕಿದೆ. ಮುಸಲ್ಮಾನ ಹಿರಿಯರು ಅವರ ಮಕ್ಕಳಿಗೆ ಬುದ್ಧಿ ಹೇಳಬೇಕಿದೆ. ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸದಂತೆ ತಿಳಿ ಹೇಳಬೇಕಿದೆ. ನೀವು ಬುದ್ಧಿ ಹೇಳದಿದ್ದರೆ ನಿಮ್ಮ ಮಕ್ಕಳು ಅರೆಸ್ಟ್​ ಆಗ್ತಾರೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸುತ್ತಾರೆ ಎಂದು ಈಶ್ವರಪ್ಪ ಎಚ್ಚರಿಸಿದರು.

ಬೆದರಿಕೆ ಹಾಕಿದವರಿಗೆ ಕಠಿಣ ಶಿಕ್ಷೆ ಆಗಬೇಕಿದೆ: ಶಿವಮೊಗ್ಗದಲ್ಲಿ ಹಿಂದುತ್ವದ ಜಾಗೃತಿಯಾಗುವುದನ್ನು ಕಂಡು ಸಹಿಸದೆ ಇರುವವರು ಮಾಡಿದ ದುಷ್ಕೃತ್ಯ ಇದಾಗಿದೆ. ಹಿಂದೂ ಸಮಾಜ ಇಂತಹ ದುಷ್ಕೃತ್ಯವನ್ನು ಸಹಿಸುವುದಿಲ್ಲ. ಹರ್ಷನ ಮನೆ ಬಳಿಗೆ ಹೋಗಿ ಬೆದರಿಕೆ ಹಾಕಿದವರನ್ನು ಬಂಧಿಸಬೇಕಿದೆ. ಬೆದರಿಕೆ ಹಾಕಿದವರಿಗೆ ಕಠಿಣ ಶಿಕ್ಷೆ ಆಗಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.

ಓದಿ: ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಎರಡು ಪ್ರಕರಣ ನಡೆದಿದ್ದು ದೂರು ದಾಖಲಾಗಿವೆ: ಎಸ್​ಪಿ ಮಿಥುನ್​ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.