ಶಿವಮೊಗ್ಗ: ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರ ಪರ ತೀರ್ಪು ಬರಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಮಾಜಿ ಸ್ವೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಏಜೆಂಟ್ ರೀತಿ, ಸಿದ್ದರಾಮಯ್ಯ ಕೈಗೊಂಬೆಯಾಗಿ ಈ ಹಿಂದೆ ವರ್ತಿಸಿದ್ದರು. ಶಾಸಕರ ರಾಜೀನಾಮೇ ವಿಚಾರದಲ್ಲಿ ಸ್ಪೀಕರ್ ಅವರು ರಾಜೀನಾಮೆಯನ್ನು ಅಂಗೀಕರಿಸಬೇಕಿತ್ತು, ಇಲ್ಲವೇ ತಿರಸ್ಕರಿಸಬೇಕಿತ್ತು. ಅದರೆ ಅವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಸ್ವೀಕರ್ ನಿರ್ಧಾರವೇ ಸಂವಿಧಾನಕ್ಕೆ ವಿರುದ್ದವಾದುದು ಎಂದರು.
ಒಂದು ವೇಳೆ ತೀರ್ಪು ಅನರ್ಹರ ಪರವಾಗಿ ಬರದಿದ್ದರೆ ಅವರ ಜೊತೆ ಸಮಾಲೋಚಿಸಿಯೇ ಟಿಕೇಟ್ ನೀಡಲು ಚಿಂತನೆ ಮಾಡಲಾಗುವುದು. ಈ ಸರಕಾರ ಬರುವುದಕ್ಕೆ ಪ್ರಮುಖ ಕಾರಣ ಅನರ್ಹ ಶಾಸಕರು. ಉಪ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗೆಲ್ಲುತ್ತೇವೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.