ETV Bharat / state

ಕೈ​​ ಸಹವಾಸ ಸಾಕಾಗಿದೆ ಎಂದು ಜೆಡಿಎಸ್​ನವರು ನನ್ನ ಬಳಿ ಹೇಳಿಕೊಂಡಿದ್ದಾರೆ: ಈಶ್ವರಪ್ಪ - news kannada

ಸಿಎಂ ಕುಮಾರಸ್ವಾಮಿರವರು ಸಹ ನನ್ನ ಬಳಿ, ನಮಗೆ ಯಾವಾಗ ಕಾಂಗ್ರೆಸ್​ನಿಂದ ಮುಕ್ತಿ ಸಿಗುತ್ತದೆಯೋ ಎಂದು ಹಣೆ ಚಚ್ಚಿಕೊಂಡಿದ್ದಾರೆ ಎಂದು ಈಶ್ವರಪ್ಪ ಬಾಂಬ್​ ಸಿಡಿಸಿದ್ದಾರೆ.

ಈಶ್ವರಪ್ಪ
author img

By

Published : Feb 23, 2019, 8:21 PM IST

ಶಿವಮೊಗ್ಗ: ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕ ಜೆಡಿಎಸ್ ಶಾಸಕರು ಹಾಗೂ ಮಂತ್ರಿಗಳಿಗೆ ಕಾಂಗ್ರೆಸ್ ಸಹವಾಸ ಸಾಕಾಗಿದೆ ಎಂದು ನನ್ನ ಬಳಿ ಹೇಳಿ ಕೊಂಡಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಾಂಬ್​ ಸಿಡಿಸಿದ್ದಾರೆ.

ಈಶ್ವರಪ್ಪ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅನೇಕ ಜೆಡಿಎಸ್ ಶಾಸಕರು ಹಾಗೂ ಮಂತ್ರಿಗಳು ಕಾಂಗ್ರೆಸ್ ಸಹವಾಸ ಸಾಕಾಗಿದೆ ಎಂದು ಹೇಳಿ ಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿರವರು ಸಹ ನನ್ನ ಬಳಿಯಲ್ಲಿ ನಮಗೆ ಯಾವಾಗ ಕಾಂಗ್ರೆಸ್​ನಿಂದ ಮುಕ್ತಿ ಸಿಗುತ್ತದೆಯೋ ಎಂದು ಹಣೆ ಚಚ್ಚಿಕೊಂಡಿದ್ದಾರೆ. ಈ ಕುರಿತು ನೀವು ಪ್ರಶ್ನೆ ಮಾಡಿದ್ರೆ ಅವರು ಏನೂ ಉತ್ತರ ಕೊಡೋದಿಲ್ಲ. ನಾನು ಹಾಗೆಯೇ ಹೇಳಿಲ್ಲ ಎಂದು ಹೇಳಬಹುದು. ಆದ್ರೆ ಎಲ್ಲಾರಿಗೂ ಒಂದು ಮನಃಸಾಕ್ಷಿ ಇರುತ್ತದೆ ಅಲ್ಲವೇ ಎಂದು ಪ್ರಶ್ನೆ ಮಾಡಿದರು.

ಸಣ್ಣ ನೀರಾವರಿ ಸಚಿವ ಪುಟ್ಟರಾಜು ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ಕಾಂಗ್ರೆಸ್​ನವರಷ್ಟು ಕಾಟ ಯಾರೂ ಕೂಡಲಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅತೃಪ್ತ ಶಾಸಕರು ಮುಂಬೈನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಾವು ಆಪರೇಷನ್ ಕಮಲಕ್ಕೆ ಸಿಲುಕಿಲ್ಲ ಅಂತ ಕೂಡ ಹೇಳಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಮಾಡಿದ್ದ ಆರೋಪ ತಪ್ಪು. ಹೀಗಾಗಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Intro:ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ಮಂತ್ರಿಗಳಿಗೆ ಕಾಂಗ್ರೆಸ್ ಸಹವಾಸ ಸಾಕಾಗಿದೆ ಎಂದು ನನ್ನ ಹೇಳಿ ಕೊಂಡಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮೈತ್ರಿ ಸರ್ಕಾರ ಶೇಕ್ ಹಾಕುವಂತಹ ಹೇಳಿಕೆ ನೀಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅನೇಕ ಜೆಡಿಎಸ್ ಶಾಸಕರು ಹಾಗೂ ಮಂತ್ರಿಗಳು ಕಾಂಗ್ರೆಸ್ ಸಹವಾಸ ಸಾಕಾಗಿದೆ ಎಂದು ಹೇಳಿ ಕೊಂಡಿದ್ದಾರೆ ಎಂದರು.

Body:ಇನ್ನೂ ಸಿಎಂ ಕುಮಾರಸ್ವಾಮಿರವರು ಸಹ ನನ್ನ ಬಳಿಯಲ್ಲಿ ನಮಗೆ ಯಾವಾಗ ಕಾಂಗ್ರೆಸ್ ನಿಂದ ಋಣಮುಕ್ತಿ ಸಿಗುತ್ತದೆಯೂ ಎಂದು ಹಣೆಯನ್ನು ಚಚ್ಚಿ ಕೊಂಡಿದ್ದಾರೆ. ಈ ಕುರಿತು ನೀವು ಪ್ರಶ್ನೆ ಮಾಡಿದ್ರೆ ಅವರು ಏನೂ ಉತ್ತರ ಕೊಡೂದಿಲ್ಲ. ನಾನು ಹಾಗೆಯೇ ಹೇಳಿಲ್ಲ ಎಂದು ಹೇಳಬಹುದು. ಆದ್ರೆ ಎಲ್ಲಾರಿಗೂ ಒಂದು ಮನಸಾಕ್ಷಿ ಇರುತ್ತದೆ ಅಲ್ಲವೆ ಎಂದು ಪ್ರಶ್ನೆ ಮಾಡಿದರು.

Conclusion:ಸಣ್ಣ ನೀರಾವರಿ ಸಚಿವ ಪುಟ್ಟರಾಜು ರವರು ಬಿಜೆಪಿ ಜೊತೆ ಸಂಮಿಶ್ರ ಸರ್ಕಾರ ರಚನೆ ಮಾಡಿದಾಗ ಕಾಂಗ್ರೆಸ್ ನವರಷ್ಟು ಕಾಟ ಕೂಡಲಿಲ್ಲ ಎಂದು ಹೇಳಿದ್ದಾರೆ ಎಂದರು. ಅಪರೇಷನ್ ಕಮಲ ಆಡಿಯೋ ವಿಚಾರದಲ್ಲಿ ನಾವು ಸದನ ಸಮಿತಿ ಇಲ್ಲ, ನ್ಯಾಯಾಂಗ ತನಿಖೆ ಎಂದು ಒತ್ತಾಯ ಮಾಡಿದ್ವಿ, ಆದ್ರೆ ಸಿದ್ದರಾಮಯ್ಯನವರು ಪ್ರಕರಣದಲ್ಲಿ ಕುಮಾರಸ್ವಾಮಿರವರು ಸಹ ಆಡಿಯೋ ಮಾಡಿಸಿದ್ದೆ ನಾನು ಎಂದು ಹೇಳಿದ ಕಾರಣ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಎಸ್ಐಟಿ ತನಿಖೆ ಮಾಡಿಸಲು ಸಿದ್ದರಾಮಯ್ಯನವರು ಒತ್ತಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಅತೃಪ್ತ ಶಾಸಕರು ಮುಂಬೈನಲ್ಲಿ ಕುಳಿತು ಕೊಂಡು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಾವು ಆಪರೇಷನ್ ಕಮಲಕ್ಕೆ ಸಿಲುಕಿಲ್ಲ ಅಂತ ಹೇಳಿದ್ದಾರೆ. ಇದರಿಂದ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಆರೋಪ ಮಾಡಿದ್ದು ತಪ್ಪು ಎಂದು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.