ಶಿವಮೊಗ್ಗ : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬಾರದೆಂಬ ಷಡ್ಯಂತ್ರ ನಡೆಸಲಾಗುತ್ತಿದೆ. ಸರ್ಕಾರ ಒಂದೋ ಪಂಚಮಸಾಲಿಗಳಿಗೆ ಮೀಸಲಾತಿ ನೀಡಿ, ಇಲ್ಲವಾದಲ್ಲಿ ಮೀಸಲಾತಿ ನೀಡುವುದಿಲ್ಲ ಎಂದು ಹೇಳಲಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.
ಶಿವಮೊಗ್ಗದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಷಡ್ಯಂತ್ರಕ್ಕೆ ಬಲಿಯಾಗದೆ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಘೋಷಿಸಬೇಕು. ಕಾಣದ ಕೈಗಳು ಮೀಸಲಾತಿ ಘೋಷಿಸುವಲ್ಲಿ ಷಡ್ಯಂತ್ರ ಮಾಡುತ್ತಿವೆ. ಪಂಚಮಸಾಲಿ ಲಿಂಗಾಯತಕ್ಕೆ ಬಹಿರಂಗವಾಗಿ ಬೆಂಬಲ ನೀಡದೇ ಹೋದರೆ ಮುಂಬರುವ ಚುನಾವಣೆಗೆ ತೊಂದರೆ ಆಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಆಗಸ್ಟ್ 25 ರಂದು ಶಿವಮೊಗ್ಗದಲ್ಲಿ ಪಂಚಮಸಾಲಿ ಸಮುದಾಯದವರು ಶಿವಪ್ಪನಾಯಕ ವೃತ್ತದಲ್ಲಿ ಕಾರ್ಯಕ್ರಮ ನಡೆಸಿ, ಅಲ್ಲಿಂದ ಯಡಿಯೂರಪ್ಪನವರಿಗ ಜ್ಞಾಪನ ಪತ್ರವನ್ನು ನೀಡಲಾಗುವುದು. ಅಷ್ಟರ ಒಳಗೆ ನಮಗೆ ಸಿಎಂ ನಮಗೆ ಮೀಸಲಾತಿ ನೀಡಬೇಕಿದೆ. ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದರು.
ಇದನ್ನೂ ಓದಿ : ಪಂಚಮಸಾಲಿ 2ಎ ಮೀಸಲಾತಿ ಹೋರಾಟ: ಸಿಎಂಗೆ ಗಡುವು ನೆನಪಿಸಿದ ಪಂಚಮಸಾಲಿಪೀಠ ಶ್ರೀ