ಶಿಕಾರಿಪುರ(ಶಿವಮೊಗ್ಗ): ಶಿಕಾರಿಪುರ ಪಟ್ಟಣದ ದೊಡ್ಡಪೇಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಸಮುದಾಯ ಭವನವನ್ನು ಸಂಸದ ಬಿ ವೈ ರಾಘವೇಂದ್ರ ಉದ್ಟಾಟಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಮೊದಲು ಜನರು ಬೋರ್ವೆಲ್ ನೀರು ಕುಡಿಯುತ್ತಿದ್ದರು. ಆದರೆ ಇಂದು ಅಂಜನಪುರ ಜಲಾಶಯದಿಂದ ಕುಡಿಯುವ ನೀರನ್ನು ಒದಗಿಸಿ ಒಳಚರಂಡಿ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿರುವ ಬಿ ಎಸ್ ಯಡಿಯೂರಪ್ಪನವರು ಶಿಕಾರಿಪುರ ತಾಲೂಕಿನ ಜಕಣಾಚಾರಿ ಎಂದು ಬಣ್ಣಿಸಿದರು.
ಹಿಂದೆಯೂ ಸಹ ಜನ ತೆರಿಗೆ ಕಟ್ಟುತ್ತಿದ್ದಿರಿ, ಈಗಲೂ ಕಟ್ಟುತ್ತಿದ್ದಿರ. ನಿಮಗೆ ಅಗ ಸಿಗದ ಸೌಲಭ್ಯ ಈಗ ಯಾಕೆ ಸಿಗುತ್ತಿದೆ ಎಂದು ಯೋಚಿಸಿ ಎಂದರು. ಇನ್ನೂ ಕೆಲವೇ ದಿನಗಳಲ್ಲಿ ವಿಮಾನ ನಿಲ್ದಾಣ ಪೂರ್ಣವಾಗಿ ಅದಷ್ಟು ಬೇಗ ವಿಮಾನ ನಿಲ್ದಾಣ ಉದ್ಟಾಟನೆ ಆಗಲಿ. ಶಿವಮೊಗ್ಗದಿಂದ ದೆಹಲಿ, ದೆಹಲಿಯಿಂದ ಶಿವಮೊಗ್ಗ, ಶಿವಮೊಗ್ಗ ದಿಂದ ಬೆಂಗಳೂರು ಹೀಗೆ ವಿಮಾನಗಳು ಶಿವಮೊಗ್ಗಕ್ಕೆ ಬರಲಿವೆ ಎಂದು ತಿಳಿಸಿದರು. ನಿಮ್ಮ ಆಶೀರ್ವಾದದಿಂದ ನಾನು ಸಂಸದನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬಿ ವೈ ರಾಘವೇಂದ್ರ ಅವರು ಇದೇ ವೇಳೆ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ:ಗಂಗಾಮತ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನದ ಭರವಸೆ