ETV Bharat / state

ಸಿ.ಟಿ ರವಿ ಒಬ್ಬ ಅರೆಹುಚ್ಚ, ಲಂಡನ್‌ಗೆ ಕಳುಹಿಸಿ ಹುಚ್ಚು ಬಿಡಿಸುತ್ತೇವೆ: ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್​ - ಶಿವಮೊಗ್ಗ ಕಾಂಗ್ರೆಸ್

ಕಾಂಗ್ರೆಸ್​ ಹಾಗೂ ರಾಜೀವ್ ಗಾಂಧಿ ಮತ್ತು ನೆಹರು ಬಗ್ಗೆ ತೀಕ್ಷ್ಣ ಮಾತುಗಳಿಂದ ಟೀಕೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಐವೈಸಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಕಿಡಿ ಕಾರಿದ್ದಾರೆ.

iyc-national-president-srinivas
ಐವೈಸಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್​
author img

By

Published : Aug 19, 2021, 12:01 PM IST

ಶಿವಮೊಗ್ಗ: ಸಿ.ಟಿ ರವಿ ಒಬ್ಬ ಅರೆಹುಚ್ಚ. ಅವರಿಗೆ ಮಂತ್ರಿಸ್ಥಾನ ಸಿಕ್ಕಿಲ್ಲವೆಂದು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಯೂತ್​​ ಕಾಂಗ್ರೆಸ್​​​​ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್​ ಬಿ.ವಿ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಗಾಂಧಿ ಪರಿವಾರದವರ ಬಗ್ಗೆ ಈ ರೀತಿ ಹೇಳಿಕೆ ಕೊಟ್ಟರೆ ಮಂತ್ರಿ ಸ್ಥಾನ ಸಿಗುವುದು ಖಚಿತ. ಹಾಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಆರ್​​​​ಎಸ್​​​ಎಸ್‌ನವರನ್ನು ಖುಷಿಪಡಿಸಲು ಈ ಮಾತುಗಳನ್ನು ಆಡುತ್ತಿದ್ದಾರೆ. ಅವರಿಗೇನಾದರೂ ಮಾನ- ಮರ್ಯಾದೆ ಇದ್ದರೆ ರಾಜೀವ್ ಗಾಂಧಿ, ನೆಹರು ಬಗ್ಗೆ ತಿಳಿದುಕೊಳ್ಳಲಿ ಎಂದರು.

ಯೂತ್​​ ಕಾಂಗ್ರೆಸ್​​​​ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್​

ಈ ದೇಶಕ್ಕಾಗಿ ಅವರು ಹನ್ನೊಂದು ವರ್ಷಗಳ ಕಾಲ ಜೈಲುವಾಸ ಮಾಡಿದ್ದಾರೆ. ಅದನ್ನೆಲ್ಲಾ ಮರಿಬಾರ್ದು. ಅವರಿಗೆ ಹುಚ್ಚು ಹಿಡಿದಿರುವುದು ಖಚಿತವಾಗಿದೆ. ಇವರ ಹುಚ್ಚು ಸರಿಮಾಡಲು ಎಷ್ಟೇ ಖರ್ಚಾದರೂ ಪರವಾಗಿಲ್ಲ, ಲಂಡನ್ ನಾ ಬ್ರಾಂಡ್ ಮೋರ್ ಆಸ್ಪತ್ರೆಗೆ ಕಳುಹಿಸಿ ಹುಚ್ಚು ಬಿಡಿಸುವ ಕೆಲಸ ಮಾಡುತ್ತೇವೆ ಎಂದರು.

ಇಬ್ಬರು ಪ್ರಧಾನಿಗಳು ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಬಗ್ಗೆ ಹೀಗೆ ಮಾತನಾಡುತ್ತಾರೆ ಎಂದರೆ ಇವರಿಗೆಷ್ಟು ಕೀಳು ಮಟ್ಟದ ಯೋಚನೆಗಳಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ದೆವ್ವದ ಬಾಯಿಂದ ಬೈಬಲ್': ಸಂಸದ ಹನುಮಂತಯ್ಯ, ಎಂಎಲ್​ಸಿ ಹರಿಪ್ರಸಾದ್ ಟೀಕಿಸಿದ ಕಾರ್ಣಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.