ಶಿವಮೊಗ್ಗ: ಸೊರಬ ತಾಲೂಕಿನ ಬಹು ದಿನಗಳ ಬೇಡಿಕೆಯಾಗಿರುವ ಮೂಗೂರು ಏತ ನೀರಾವರಿ ಯೋಜನಾ ಸ್ಥಳವನ್ನು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಇಂದು ಪರಿಶೀಲಿಸಿದರು.
ಸೊರಬ ತಾಲೂಕಿಗೆ ಭೇಟಿ ನೀಡಿದ್ದ ಸಚಿವರು, ಏತ ನೀರಾವರಿ ಯೋಜನಾ ಸ್ಥಳವನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಸುಮಾರು 105 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದಾಗಿ ಸೊರಬದ ಮಳೆಯಾಶ್ರಿತ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು ಸಹಾಯಕವಾಗುತ್ತದೆ.
ಈ ಯೋಜನೆಯಿಂದ ತಾಲೂಕಿನ 40 ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬಹುದಾಗಿದೆ. ಇದಕ್ಕಾಗಿ ಸಾಕಷ್ಟು ರಾಜಕೀಯ ಹೋರಾಟಗಳು ಸಹ ನಡೆದಿದ್ದವು. ಈ ವೇಳೆ ಮಾಧುಸ್ವಾಮಿಗೆ ಶಾಸಕ ಕುಮಾರ್ ಬಂಗಾರಪ್ಪ ಯೋಜನೆಯ ಕುರಿತು ವಿವರ ನೀಡಿದರು. ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.