ETV Bharat / state

ಕಿಮ್ಮನೆಗೆ ಕಿಮ್ಮತ್ತು ಕೊಡದ ಜನ: ಶಿವಮೊಗ್ಗದಲ್ಲಿ ಒಂದು ಮತದಿಂದ ಗೆದ್ದವರೇ ಜಾಸ್ತಿ!

ಶಿಮಮೊಗ್ಗ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಇದರಲ್ಲಿ ಕೆಲವರು ಜಯ ಮಾಲೆಯನ್ನು ಹಾಕಿಕೊಂಡರೆ, ಮತ್ತೆ ಕೆಲವರು ಸೋತು ಮನೆ ಕಡೆ ಮುಖ ಮಾಡಿದರು. ಇನ್ನು ಜಿಲ್ಲೆಯಲ್ಲಿ ನಡೆದ ಮತ ಎಣಿಕೆ ಕುರಿತ ಮಾಹಿತಿ ಇಂತಿದೆ.

ಶಿವಮೊಗ್ಗ
shimoga city
author img

By

Published : Dec 31, 2020, 7:43 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕೆಲವರು ಗೆಲುವಿನ ನಗೆ ಬೀರಿದ್ದು, ಕೆಲವರು ಸೋತು ಮನೆಗೆ ಹಿಂತಿರುಗಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೀಸು ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸ್ಪರ್ಧಿಸಿದ್ದರು. ಇವರ ಭೂಮಿಯನ್ನು ಅರಣ್ಯಾಧಿಕಾರಿಗಳು ತೆರವು ನಡೆಸಿ ಅಡಿಕೆ ಸಸಿ ನಾಶಗೊಳಿಸಲಾಗಿತ್ತು‌. ಇದನ್ನು ಖಂಡಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬೀಸು ಗ್ರಾಮದಿಂದ ತೀರ್ಥಹಳ್ಳಿಯ ಅರಣ್ಯ ಇಲಾಖೆ ಕಚೇರಿವರೆಗೂ ಪಾದಯಾತ್ರೆ ನಡೆಸಿದ್ದರು. ಆದರೆ ಬೀಸು ಗ್ರಾಮದ ಜನ ಕಿಮ್ಮನೆ ರತ್ನಾಕರ್​​ರವರ ಪಾದಯಾತ್ರೆ ತಿರಸ್ಕಾರಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸುಪ್ರೀತ ರಂಜನ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಿತ್ರರವರ ವಿರುದ್ಧ ಸೋತಿದ್ದಾರೆ.

ಒಂದು ಮತದಲ್ಲಿ ಗೆದ್ದವರಿವರು:

  • ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅನೇಕ ಕಡೆ ಒಂದೇ ಮತದಿಂದ ಗೆಲುವಿನ ನಗೆ ಬಿರಿದ್ದಾರೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಇಂತಿದೆ.
  • ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಸಿರಿಯೂರು ಗ್ರಾಮದಲ್ಲಿ ಸುಭದ್ರ ಬಾಯಿ 330 ಹಾಗೂ ಉಮಾ ಬಾಯಿಗೆ 329 ಮತಗಳು ಬಿದ್ದಿದ್ದವು. ನಂತರ ಮರು ಎಣಿಕೆ ಮಾಡಲಾಯಿತು. ಈ ವೇಳೆ ಸುಭದ್ರ ಬಾಯಿ ಅವರು ಎರಡು ಮತಗಳ ಅಂತರದಿಂದ ಜಯ ಸಾಧಿಸಿದರು.
  • ದಡಮಘಟ್ಟ ಗ್ರಾಮ ಪಂಚಾಯಿತಿಯಲ್ಲಿ ರಸುಲ್ ಸಾಬ್ 255 ಮತ ಹಾಗೂ ಅಕ್ಬರ್ ಸಾಬ್ ಅವರಿಗೆ 254 ಮತಗಳು ಬಂದಿದ್ದವು.‌ ಆದರೆ ಮರು ಎಣಿಕೆಗೆ ಕಾಲಾವಕಾಶ ಮುಗಿದ ಕಾರಣ ಮರು ಎಣಿಕೆ ನಡೆಯಲಿಲ್ಲ.‌
  • ಇನ್ನು ಸೀತರಾಮಪುರ‌ ಗ್ರಾಮ ಪಂಚಾಯಿತಿಯ ಮುಳ್ಳಕೆರೆಯಲ್ಲಿ ಮೊಹಮ್ಮದ್​​​ರವರು 1 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.‌ ಅದರಂತೆ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಹಳದಮ್ಮರವರು 1 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
  • ಹೊಸನಗರದ ಸೂನ್ಲೆ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯಿತಿ ಸದಸ್ಯೆ ಮಾಲತಿರವರು ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಶಿಕಾರಿಪುರದ ಕುಸ್ಕೂರು ಗ್ರಾಮ ಪಂಚಾಯಿತಿಯಲ್ಲಿ ಸಹ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ.
  • ತೀರ್ಥಹಳ್ಳಿ ತಾಲೂಕಿನ ಹೊದಲ ಅರಳಪುರ ಗ್ರಾಮ ಪಂಚಾಯಿತಿಗೆ ಗಂಡ-ಹೆಂಡತಿ ಆಯ್ಕೆಯಾಗಿದ್ದಾರೆ. ವಿನಾಯಕ ಆಚಾರಿ ಹೊದಲ ಅರಳಪುರ ಕ್ಷೇತ್ರದಿಂದ ಆಯ್ಕೆಯಾಗಿದ್ರೆ,‌ ಇವರ ಪತ್ನಿ ನಿಶ್ಚಿತರವರು ಎರಗುಡ್ಡೆ ಗ್ರಾಮದಿಂದ ಆಯ್ಕೆಯಾಗಿದ್ದಾರೆ.
  • ಬೆಜ್ಜುವಳ್ಳಿ ಗ್ರಾಮ ಪಂಚಾಯಿತಿಗೆ ಮಹೇಶ್ ಹಾಗೂ ಹರೀಶ್ ಎಂಬ ಸಹೋದರರಿಬ್ಬರು ಆಯ್ಕೆಯಾಗಿದ್ದಾರೆ. ಕೈಮರಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಾರಾಯಣ್ ಹಾಗೂ ಶಾರದರವರು ತಲಾ ಒಂದು ಮತಗಳಿಂದ ಜಯಗಳಿಸಿದ್ದಾರೆ.
  • ‌ಸಾಗರ ತಾಲೂಕು ಮಾಲ್ವೆ ಗ್ರಾಮ ಪಂಚಾಯಿತಿನಲ್ಲಿ ಮೂವರಿಗೆ 76 ಮತಗಳು ಬಿದ್ದಿದ್ದವು. ನಂತರ ನಾಗರಾಜ್ ಕೆ.ಎನ್ ರವರು ಲಾಟರಿಯ ಮೂಲಕ ಜಯಶಾಲಿಗಳಾದರು.
  • ಜಿಲ್ಲೆಯ ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿ ಮತ ಎಣಿಕೆ ಮುಕ್ತಾಯವಾಗಿದೆ. ಉಳಿದ ಯಾವ ತಾಲೂಕಿನ ಮತ ಎಣಿಕೆ ಇನ್ನೂ ಮುಕ್ತಾಯವಾಗಿಲ್ಲ. ಹೊಸನಗರದ ಹರತಾಳು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಗಳಿಸಿದೆ. ಇದು ಶಾಸಕ ಹರತಾಳು ಹಾಲಪ್ಪನವರ ಸ್ವ ಗ್ರಾಮವಾಗಿದೆ. ಅದೇ ರೀತಿ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ರವರ ಗ್ರಾಮದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.