ETV Bharat / state

ಮೈಸೂರು: ಕೆಂಪೇಗೌಡನಹುಂಡಿ ಗ್ರಾಮದಲ್ಲಿ ದಂಪತಿ ಆತ್ಮಹತ್ಯೆ‌

ಸೆ.15ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಇದೇ ಗ್ರಾಮದ ನಾಗೇಶ್​ ಎಂಬವರು ತಮ್ಮ ಸಾವಿಗೆ ಈ ದಂಪತಿಯೇ ಕಾರಣ ಎಂದು ಪತ್ರ ಬರೆದಿಟ್ಟಿದ್ದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Nov 6, 2024, 6:50 AM IST

ಮೈಸೂರು: ಆತ್ಮಹತ್ಯೆ ಪ್ರಚೋದನೆ ಪ್ರಕರಣಕ್ಕೆ ಹೆದರಿದ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ತಾಲೂಕು ಕೆಂಪೇಗೌಡನಹುಂಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಕೆಂಪೇಗೌಡನಹುಂಡಿ ನಿವಾಸಿ ಕುಮಾರ್(35) ಮತ್ತು ಪತ್ನಿ ಮೋನಿಷಾ(28) ಆತ್ಮಹತ್ಯೆ ಮಾಡಿಕೊಂಡವರು.

ಸೆ.15ರಂದು ಇದೇ ಗ್ರಾಮದ ನಾಗೇಶ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಕುಮಾರ್ ಮತ್ತು ಮೋನಿಷಾ ಕಾರಣ ಎಂದು ಪತ್ರ ಬರೆದಿಟ್ಟಿದ್ದರು. ಈ ಸಂಬಂಧ ದಂಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಊರು ಬಿಟ್ಟಿದ್ದ ಇವರು, ಮಂಗಳವಾರ ಊರಿಗೆ ಬಂದಾಗ ನಾಗೇಶ್ ಕುಟುಂಬದವರು ಜಗಳವಾಡಿದ್ದಾರೆ. ಇದರಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿ ತಹಶೀಲ್ದಾರ್​ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.