ETV Bharat / state

ಸಾಗರದಲ್ಲಿ ಕೋವಿಡ್ ವಾರ್ಡ್​ನಿಂದ ಟೀ ಕುಡಿಯಲು ಹೊರ ಬಂದ ವೃದ್ಧ : ಮುಂದೇನಾಯ್ತು?

ಕೋವಿಡ್ ವಾರ್ಡ್​ನಿಂದ ಸೋಂಕಿತ ವೃದ್ಧನೋರ್ವ ಹೊರಬಂದು ನಂತರ ಸ್ಥಳೀಯರ ಸಮಯಪ್ರಜ್ಞೆಯಿಂದ ಪುನಃ ವಾರ್ಡ್​ಗೆ ಸ್ಥಳಾಂತರಿಸಿರುವ ಘಟನೆ ಸಾಗರದಲ್ಲಿ ನಡೆದಿದೆ.

author img

By

Published : May 5, 2021, 4:28 PM IST

infected-man-came-out-from-covid-center-in-sagara
ಕೋವಿಡ್ ವಾರ್ಡ್​ನಿಂದ ಹೊರ ಬಂದಿದ್ದ ಸೋಂಕಿತ

ಶಿವಮೊಗ್ಗ: ಕೋವಿಡ್ ವಾರ್ಡ್​ನಿಂದ ಸೋಂಕಿತ ವ್ಯಕ್ತಿ ಹೊರಕ್ಕೆ ಬಂದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ್ದ ಘಟನೆ ಜಿಲ್ಲೆಯ ಸಾಗರದಲ್ಲಿ ತಾಲೂಕಿನಲ್ಲಿ ನಡೆದಿದೆ.

ಸಾಗರದ ಸರ್ಕಾರಿ ಕೋವಿಡ್ ವಾರ್ಡ್​ನಿಂದ ಹೊರ ಬಂದಿದ್ದ (60 ವರ್ಷ) ವೃದ್ಧನನ್ನು ಶಿವಪ್ಪ ನಾಯಕ ವೃತ್ತದಲ್ಲಿ ಪತ್ತೆ ಮಾಡಿದ ಸ್ಥಳೀಯ ಜಮೀಲ್ ಪ್ರಶ್ನಿಸಿದ್ದಾರೆ. ಆಗ ಉತ್ತರಿಸಿರುವ ಸೋಂಕಿತ, ನಾನು ಆಸ್ಪತ್ರೆಯಲ್ಲಿದ್ದೆ, ಚಹಾ ಕುಡಿಯಲು ಹೊರ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ತಕ್ಷಣ ಜಮೀಲ್ ಅವರು ಪೊಲೀಸರು ಹಾಗೂ ಆರೋಗ್ಯ ಇಲಾಖೆಗೆ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಆಸ್ಪತ್ರೆಯಿಂದ ಆ್ಯಂಬುಲೆನ್ಸ್​ ಮೂಲಕ ಬಂದ ಸಿಬ್ಬಂದಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಕೋವಿಡ್ ವಾರ್ಡ್​ನಿಂದ ಹೊರ ಬಂದಿದ್ದ ಸೋಂಕಿತ

ಕೋವಿಡ್ ವಾರ್ಡ್​ ಆಸ್ಪತ್ರೆಯಿಂದ ವೃದ್ಧ ಹೇಗೆ ಹೊರಬಂದಿದ್ದಾನೆ ಎಂಬುದು ಸ್ಥಳೀಯರಿಗೆ ಗೊಂದಲವಾಗಿದೆ. ಆ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸದ್ಯ ಸ್ಥಳೀಯರ ಸಮಯಪ್ರಜ್ಞೆಯಿಂದ ಸೋಂಕು ಹರಡುವುದು ತಪ್ಪಿದೆ.

ಓದಿ: ಕೊರೊನಾ ವಿಚಾರದಲ್ಲಿ ಸರ್ಕಾರ ಎಡವಿದೆ: ಕುಮಾರಸ್ವಾಮಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.