ETV Bharat / state

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ‌ ನಿರ್ಣಯದಲ್ಲಿ ಸೋತ ಹಾಲಿ ಅಧ್ಯಕ್ಷರು: ಮಂಜುನಾಥ ಗೌಡ ಬಣಕ್ಕೆ ಜಯ - etv bharat kannda

ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ‌ ನಿರ್ಣಯದಲ್ಲಿ ಹಾಲಿ ಅಧ್ಯಕ್ಷರು ಸೋತಿದ್ದು, ಪ್ರಭಾರ ಅಧ್ಯಕ್ಷರಾಗಿ ಹೆಚ್ ಎಲ್ ಷಡಾಕ್ಷರಿ ಆಯ್ಕೆಯಾಗಿದ್ದಾರೆ.

incumbent-chairman-lost-in-no-confidence-motion-against-dcc-bank-chairman-in-shivamogga
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ‌ ನಿರ್ಣಯದಲ್ಲಿ ಸೋತ ಹಾಲಿ ಅಧ್ಯಕ್ಷರು: ಮಂಜುನಾಥ ಗೌಡ ಬಣಕ್ಕೆ ಜಯ
author img

By

Published : Jul 28, 2023, 8:13 PM IST

ಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಹೆಚ್ ಎಲ್ ಷಡಾಕ್ಷರಿ

ಶಿವಮೊಗ್ಗ: ಭಾರಿ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ. ಪ್ರಭಾರ ಅಧ್ಯಕ್ಷರಾಗಿ ಹೆಚ್.ಎಲ್. ಷಡಾಕ್ಷರಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಅವರ ವಿರುದ್ಧ ಇಂದು ಡಿಸಿಸಿ ಬ್ಯಾಂಕ್ ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ನಿರ್ಣಯವನ್ನು ಮತಕ್ಕೆ ಹಾಕಿದಾಗ, 13 ಮಂದಿ ಮತದಾನದಲ್ಲಿ ಭಾಗವಹಿಸಿದ್ದರು. ಒಬ್ಬರು ಮುಚ್ಚಿದ ಲಕೋಟೆಯಲ್ಲಿ ಮತ ನೀಡಿದರು.

ಅವಿಶ್ವಾಸ ನಿರ್ಣಯದ ಪರ 9 ಮತಗಳು ಹಾಗೂ ಅಧ್ಯಕ್ಷರ ಪರ 3 ಮತಗಳು ಚಲಾಯಿಸಲ್ಪಟ್ಟವು. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರಲಿಲ್ಲ. ಅಧ್ಯಕ್ಷರ ಪರವಾಗಿ ಬಿ.ಡಿ. ಭೂಕಾಂತ್, ಅಗಡಿ ಅಶೋಕ್ ಮತ್ತು ಅಧ್ಯಕ್ಷ ಚನ್ನವೀರಪ್ಪ ಮತ ಚಲಾಯಿಸಿದ್ದರು. ಅವಿಶ್ವಾಸ ನಿರ್ಣಯದ ಪರವಾಗಿ ಹೆಚ್.ಎಲ್. ಷಡಾಕ್ಷರಿ, ಹೆಚ್.ಎನ್. ವಿಜಯದೇವ್. ದುಗ್ಗಪ್ಪಗೌಡ, ವೆಂಕಟೇಶ್, ಎಸ್.ಪಿ. ದಿನೇಶ್, ಯೋಗೀಶ್, ಶ್ರೀಪಾದ ರಾವ್ ನಿಸರಾಣಿ, ಪರಮೇಶ್ ಮತ ಚಲಾಯಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವೆಂಕಟಾಚಲಪತಿ ಕಾರ್ಯನಿರ್ವಹಿಸಿದ್ದರು.

ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ಷಡಾಕ್ಷರಿರವರನ್ನು ಇತರ ನಿರ್ದೇಶಕರು ಅಭಿನಂದಿಸಿದರು. ಈ ವೇಳೆ, ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸೇರಿದಂತೆ ಇತರರು ಅಭಿನಂದಿಸಿದರು. ಡಿಸಿಸಿ ಬ್ಯಾಂಕ್​ನಲ್ಲಿ ಹಾಲಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು, ಶಾಸಕರಾದ ಸಂಗಮೇಶ್ ಹಾಗೂ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ನಡೆಸಲಾಯಿತು.

ರೈತರಿಗಾಗಿ ಕೆಲಸ‌ ಮಾಡುತ್ತೇನೆ- ಷಡಾಕ್ಷರಿ: ನಮ್ಮ ಅವಿಶ್ವಾಸ ನಿರ್ಣಯಕ್ಕೆ ಶ್ರೀಪಾದ ನಿಸರಾಣಿ ಹಾಗೂ ಯೋಗೀಶ್ ಅವರು ಸಹಕಾರ ನೀಡಿದರು. ಇದರಿಂದ ಇಂದು ನಮಗೆ ಜಯ ಲಭಿಸಿದೆ. ಹಾಲಿ ಅಧ್ಯಕ್ಷ ಚನ್ನವೀರಪ್ಪನವರಿಗೆ ಬಹುಮತ ಇರಲಿಲ್ಲ. ಅವರು ಗೌರವಯುತವಾಗಿ ರಾಜೀನಾಮೆ ನೀಡಬೇಕಿತ್ತು. ಆದರೆ, ಅವರು ರಾಜೀನಾಮೆ ನೀಡದ ಕಾರಣ ಅವಿಶ್ವಾಸ ನಿರ್ಣಯಕ್ಕೆ ಹಾಕಬೇಕಾಯಿತು. ನಮಗೆ ಜಯ ಲಭಿಸಿದೆ. ನಾನು ಪ್ರಭಾರ ಅಧ್ಯಕ್ಷನಾಗಿ ಎಲ್ಲಿವರೆಗೂ ಇರುತ್ತಾನೆಯೋ‌ ಅಲ್ಲಿಯ ವರೆಗೆ ರೈತರಿಗಾಗಿ ಕೆಲಸ‌ ಮಾಡುತ್ತೆನೆ ಎಂದು ಡಿಸಿಸಿ ಬ್ಯಾಂಕಿನ ಪ್ರಭಾರಿ ಅಧ್ಯಕ್ಷರಾದ ಷಡಾಕ್ಷರಿ ತಿಳಿಸಿದರು.

ನಂತರ ಮಾತನಾಡಿದ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ, ಕಾಂಗ್ರೆಸ್ ಸರ್ಕಾರ ಬಂದಾಗ ಡಿಸಿಸಿ ಬ್ಯಾಂಕ್​ನ ಅಧ್ಯಕ್ಷರು ಕೆಳಗೆ ಇಳಿಯಬಹುದೇನೂ ಎಂದು ತಿಳಿದುಕೊಂಡಿದ್ದೆವು. ಆದರೆ ಅವರು ರಾಜೀನಾಮೆ ನೀಡಿರಲಿಲ್ಲ. ಬ್ಯಾಂಕ್​ನ 9 ನಿರ್ದೇಶಕರುಗಳು ಅಧ್ಯಕ್ಷರ ವಿರುದ್ದ ಮತ ಹಾಕಿ ಇಂದು ಅವಿಶ್ವಾಸ ನಿರ್ಣಯ ಮಾಡಿದ್ದಾರೆ. ಚನ್ನ ವೀರಪ್ಪನವರ ಪರವಾಗಿ ಕೇವಲ ಮೂವರು ಮತ ಹಾಕಿದ್ದಾರೆ. 9 ಜನ ನಿರ್ದೇಶಕರಿಗೆ ಸಾಕಷ್ಟು ಅಮೀಷಾ, ಇಡಿ ದಾಳಿಯ ಬೆದರಿಕೆ ಹಾಕಿದ್ದರು ಸಹ ನಮ್ಮ ಪರವಾಗಿ ಇಂದು ಮತ ನೀಡಿದ್ದಾರೆ ಎಂದರು.

ಡಿಸಿಸಿ ಬ್ಯಾಂಕಿನ ಪ್ರಭಾರ ಎಂಡಿ ವಾಸುದೇವ್ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ನ 7 ಜನ ನಿರ್ದೇಶಕರುಗಳು ಅಧ್ಯಕ್ಷರಾಗಿದ್ದ ಚನ್ನವೀರಪ್ಪನವರ ವಿರುದ್ದ ಅವಿಶ್ವಾಸ ಮತ ನಿರ್ಣಯಕ್ಕೆ ಪತ್ರ ನೀಡಿದ್ದರು. ಅದರಂತೆ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಕಳುಹಿಸಲಾಗಿತ್ತು. ಇಂದು ಸಕ್ಷ‌ಮ‌ ಪ್ರಾಧಿಕಾರದವರು ಚುನಾವಣೆ ನಡೆಸಲು ಅಧಿಕಾರಿಗಳನ್ನು ಕಳುಹಿಸಿದ್ದರು. ಅದರಂತೆ ಇಂದು ಚುನಾವಣೆ ನಡೆಯಿತು. 12 ಜನ ನಿರ್ದೆಶಕರಲ್ಲಿ 9 ಜನ ಚನ್ನವೀರಪ್ಪ ಅವರ ವಿರುದ್ದ ಮತ ಹಾಕಿದ್ದಾರೆ. 3 ಜನ ಚನ್ನವೀರಪ್ಪ ಅವರ ಪರ ಮತ ಹಾಕಿದ್ದಾರೆ. ಉಪಾಧ್ಯಕ್ಷರಾದ ಷಡಾಕ್ಷರಿ ರವರು ಹಂಗಾಮಿ ಅಧ್ಯಕ್ಷರಾಗಿರುತ್ತಾರೆ. ಮುಂದಿನ 15 ದಿನಗಳಲ್ಲಿ ಅಧ್ಯಕ್ಷರ ಚುನಾವಣೆ ನಡೆಸಲಾಗುವುದು. ನಿರ್ದೇಶಕರ ಅವಧಿ ಇನ್ನೂ 9 ತಿಂಗಳುಗಳ ಕಾಲ ಇದೆ ಎಂದು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್​ನಲ್ಲಿ ಅಧ್ಯಕ್ಷರು ಬದಲಾವಣೆ ಆಗುತ್ತಿದ್ದಂತಯೇ ಡಿಸಿಸಿ ಬ್ಯಾಂಕ್​ನ ಮಾಜಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ರವರ ಅಭಿಮಾನಿಗಳು ಬ್ಯಾಂಕ್‌ ಹೊರಗೆ ಪಟಾಕಿ‌ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ: ಬಿಎಂಟಿಸಿಯಿಂದ 921 ಎಲೆಕ್ಟ್ರಿಕ್ ಪ್ರೊಟೊಟೈಪ್ ಬಸ್​ಗೆ ಚಾಲನೆ: 13,000 ಸಿಬ್ಬಂದಿ ನೇಮಕಾತಿಗೆ ಅನುಮತಿ: ರಾಮಲಿಂಗಾ ರೆಡ್ಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.