ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮತ್ತೆ 4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಕಿತರ ಸಂಖ್ಯೆ 104 ಕ್ಕೆ ಏರಿಕೆಯಾಗಿದೆ.
P- 7571 ಹಾಗೂ P-7572 ರವರಿಗೆ P-6149 ರ ಸಂಪರ್ಕದಿಂದ ಕೊರೊನಾ ಸೂಂಕು ಹರಡಿದೆ. ಇನ್ನೂ ಈ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಕುಂಬಾರ ಗುಂಡಿ ಹಾಗೂ ತುಮಕೂರು ಶ್ಯಾಮರಾಯ ರಸ್ತೆ ಸಹ ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ.
ಇನ್ನುಳಿದಂತೆ P-7573 5 ವರ್ಷದ ಹೆಣ್ಣು ಮಗುವಿಗೆ ತೀವ್ರ ಉಸಿರಾಟದ ತೂಂದರೆಯಿಂದ SARI ಪ್ರಕರಣದಡಿ ಮೆಗ್ಗಾನ್ಗೆ ದಾಖಲು ಮಾಡಲಾಗಿದೆ. P-7574 5 ವರ್ಷದ ಗಂಡು ಮಗು ತಂದೆ- ತಾಯಿಯ ಜೊತೆ ಮಹಾರಾಷ್ಟ್ರದಿಂದ ವಾಪಸ್ ಆಗಿತ್ತು.
ಜಿಲ್ಲೆಯಲ್ಲಿ ಇಂದು ಒಂದೇ ದಿನ 15 ಜನ ಬಿಡುಗಡೆಯಾಗಿದ್ದಾರೆ. ಇದು ಜಿಲ್ಲೆಯ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ 104 ಪ್ರಕರಣದಲ್ಲಿ 69 ಜನ ಬಿಡುಗಡೆಯಾಗಿದ್ದು, ಸದ್ಯ 35 ಪ್ರಕರಣಗಳು ಸಕ್ರೀಯವಾಗಿದೆ.