ETV Bharat / state

ಸರಿಯಾಗಿ ಕಾರ್ಯನಿರ್ವಹಿಸದ ಆಂತರಿಕ ಭದ್ರತಾ ವಿಭಾಗ: ಬೀಗ ಹಾಕಿಸಿದರಾ ಭಾಸ್ಕರ್​ ರಾವ್ ? - haskar Rao, ADGP, Internal Security Division

ಮೊನ್ನೆ ಶಿವಮೊಗ್ಗಕ್ಕೆ ಬಂದಿದ್ದ ಭಾಸ್ಕರ್ ರಾವ್ ಅವರು ಆಂತರಿಕ ಭದ್ರತಾ ವಿಭಾಗ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಚೇರಿ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ತೃಪ್ತಿಯಾಗದೇ ನಿಮಗೆ ಕಚೇರಿ ಏಕೆ ಬೇಕು ಅಂತ ಬೀಗ ಹಾಕಿಸಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆಂತರಿಕ ಭದ್ರತಾ ವಿಭಾಗ
ಆಂತರಿಕ ಭದ್ರತಾ ವಿಭಾಗ
author img

By

Published : Dec 24, 2020, 8:03 PM IST

ಶಿವಮೊಗ್ಗ: ಸಮಾಜದಲ್ಲಿ‌ ನಡೆಯುವ ದುಷ್ಕೃತ್ಯಗಳನ್ನು ಪತ್ತೆ ಹಚ್ಚಿ, ಮುಂದೆ ನಡೆಯಬಹುದಾದ ವಿದ್ವಂಸಕ ಕೃತ್ಯಗಳನ್ನು ತಡೆಯಲು ಗೃಹ ಇಲಾಖೆಯು ಕೆಲ ಜಿಲ್ಲೆಗಳಲ್ಲಿ ವಿಶೇಷವಾಗಿ ಆಂತರಿಕ ಭದ್ರತಾ ವಿಭಾಗ ಸ್ಥಾಪನೆ ಮಾಡಿರುತ್ತದೆ. ಇಂತಹ ಒಂದು ಕಚೇರಿ ಶಿವಮೊಗ್ಗದಲ್ಲೂ ಸಹ ಇತ್ತು. ಆದರೆ, ಅದು ಮೊನ್ನೆಯಿಂದ ಬಂದ್ ಆಗಿದೆ. ಈ ಕಚೇರಿಯನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರು ಬಂದ್ ಮಾಡಿಸಿದ್ದಾರೆ ಎನ್ನಲಾಗ್ತಿದೆ.

ಸರಿಯಾಗಿ ಕಾರ್ಯನಿರ್ವಹಿಸದ ಆಂತರಿಕ ಭದ್ರತಾ ವಿಭಾಗ

ಹೌದು, ಮೊನ್ನೆ ಶಿವಮೊಗ್ಗಕ್ಕೆ ಬಂದಿದ್ದ ಭಾಸ್ಕರ್ ರಾವ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಚೇರಿ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ತೃಪ್ತಿಯಾಗದೇ ನಿಮಗೆ ಕಚೇರಿ ಏಕೆ ಬೇಕು ಅಂತ ಬೀಗ ಹಾಕಿಸಿ ಹೋಗಿದ್ದಾರೆ ಎನ್ನಲಾಗ್ತಿದೆ. ಮಂಗಳೂರಿನಲ್ಲಿ ದೇಶ ದ್ರೋಹಿ ಗೋಡೆ ಬರಹದ ಹಿಂದೆ ಇದ್ದ ಓರ್ವನಿಗೆ ತೀರ್ಥಹಳ್ಳಿಯಲ್ಲಿ ಆಶ್ರಯ ನೀಡಿದ್ದವನನ್ನು ಬಂಧಿಸಲಾಗಿದೆ.‌

ಓದಿ:ಶಿವಮೊಗ್ಗಕ್ಕೆ ಬ್ರಿಟನ್​ನಿಂದ 23 ಜನ ಆಗಮಿಸಿದ್ದಾರೆ: ಸಚಿವ ಈಶ್ವರಪ್ಪ

ಅಲ್ಲದೇ ಡಿಸೆಂಬರ್ ಮೊದಲ ವಾರದಲ್ಲಿ ಶಿವಮೊಗ್ಗದ ಹಳೆ ಭಾಗದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಸರಿಯಾಗಿ ಮಾಹಿತಿ ತಿಳಿಯದ ಹಿನ್ನೆಲೆ ಕಚೇರಿಗೆ ಬೀಗ ಹಾಕಿಸಿದ್ದಾರೆ ಎನ್ನಲಾಗಿದೆ. ಆಂತರಿಕ ಭದ್ರತಾ ಕಚೇರಿಯಲ್ಲಿ ಓರ್ವ ಇನ್​​ಸ್ಪೆಕ್ಟರ್ ಹಾಗೂ ಇಬ್ಬರು ಸಿಬ್ಬಂದಿಗಳಿದ್ದಾರೆ. ಸದ್ಯ ಇಲ್ಲಿನ ಸಿಬ್ಬಂದಿ ಪೊಲೀಸ್ ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.