ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಅಮೃತ ಯೋಜನೆಯ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣ ಮಾಡದೆ ಹೋದ್ರೆ, ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯ ಇಂಜಿನಿಯರ್ ವಿರುದ್ದ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್ ಇಂಜಿನಿಯರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ನಗರಾಭಿವೃದ್ದಿ ಖಾತೆ ಸಚಿವರು ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ನಡೆದ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಯೋಜನೆಯ ಸಭೆ ನಡೆಸಿದರು.
ಈ ವೇಳೆ ಅಮೃತ್ ಯೋಜನೆಯ ಕಾಮಗಾರಿಯು ಪೂರ್ಣಗೊಳ್ಳದೆ ಇರುವುದನ್ನು ಪಾಲಿಕೆ ಸದಸ್ಯರು ಸಚಿವರ ಗಮನಕ್ಕೆ ತಂದಾಗ ಪುಲ್ ಗರಂ ಆದ ಬಸವರಾಜ್ ಅವರು ಯಾಕೆ ಕಾಮಗಾರಿ ಪೂರ್ಣ ಮಾಡಿಲ್ಲ. ಯಾರು ಮುಖ್ಯ ಇಂಜಿನಿಯರ್ ಎಂದು ಕೇಳಿದಾಗ ಅವರು ಸಭೆಗೆ ಬಂದಿಲ್ಲ ಎಂದಾಗ ಮುಂದಿನ ಸಭೆಯಲ್ಲಿ ಎಲ್ಲಾರನ್ನು ಕರೆಯಿಸಿ ಎಂದು ಆಯುಕ್ತರಿಗೆ ಸೂಚಿಸಿದರು.
ನಾನು ಜೂನ್ 1 ರಂದು ಮತ್ತೆ ಶಿವಮೊಗ್ಗಕ್ಕೆ ಬರುತ್ತೇನೆ. ಆಗ ಇಲ್ಲಿನ ಎಲ್ಲಾ ಸಮಸ್ಯೆಯನ್ನು ಆಲಿಸುತ್ತೇನೆ ಎಂದು ಪಾಲಿಕೆ ಸದಸ್ಯರಿಗೆ ತಿಳಿಸಿದರು. ಇನ್ನೂ ಸಭೆಗೆ ಬಾರದ ಮುಖ್ಯ ಇಂಜಿನಿಯರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಬೇಸರ ವ್ಯಕ್ತಪಡಿಸಿದರು. ನಗರಾಭಿವೃದ್ದಿ ಖಾತೆ ಸಚಿವರು ನಡೆಸುವ ಸಭೆಗೆ ಬಾರದೆ ಇರುವಷ್ಟು ಇಂಜಿನಿಯರ್ ಬ್ಯೂಸಿಯಾಗಿದ್ದಾರಾ ಎಂದು ಬೇಸರ ವ್ಯಕ್ತಪಡಿಸಿದರು.