ಶಿವಮೊಗ್ಗ : ರಫೇಲ್ ಹಗರಣದಲ್ಲಿ ಸುಪ್ರೀಂಕೋರ್ಟ್ ದಾಖಲೆಗಳ ಪರಿಶೀಲನೆಗೆ ಒಪ್ಪಿಕೊಂಡಿದೆ. ಈ ಹಗರಣದ ತನಿಖೆಯಾದ್ರೇ ಪ್ರಧಾನಿ ನರೇಂದ್ರ ಮೋದಿಯವರು ಜೈಲಿಗೆ ಹೋಗುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಬಂಡವಾಳಷಾಹಿಗಳ ಜತೆಗೆ ಕೈಜೋಡಿಸಿ ರಫೇಲ್ ಯುದ್ದ ವಿಮಾನದ ಖರೀದಿಯಲ್ಲಿ ಗೋಲ್ ಮಾಲ್ ಮಾಡಿದ್ದು, ಅವರು ಹಗರಣದಲ್ಲಿ ಮಧ್ಯವರ್ತಿಯಾಗಿದ್ದಾರೆ ಎಂದು ಆರೋಪಿಸಿದರು.
ಐಟಿ ಬಿಜೆಪಿಯ ಇಲಾಖೆಯಾಗಿದೆ. ವಿರೋಧಿಗಳ ಮನೆ ಮೇಲೆ ದಾಳಿ ನಡೆಸುವುದು ಸರಿಯಲ್ಲ. ಯಡಿಯೂರಪ್ಪನವರ ಮನೆಯಿಂದ ಶಾಸಕರ ಖರೀದಿಗೆ ಕೋಟಿ ಕೋಟಿ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಐಟಿ ಇಲಾಖೆ ಪತ್ರ ಬರೆದಿದ್ದೆ. ಆದರೆ, ಏನೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಐಟಿಯ ಬಾಲಕೃಷ್ಣ ಬಿಜೆಪಿ ಪಾರ್ಟಿಯವರಂತೆ ವರ್ತಿಸುತ್ತಿದ್ದಾರೆ ಎಂದರು.
ಕಾಶ್ಮೀರದಲ್ಲಿ ಅರಾಜಕತೆ ಸೃಷ್ಟಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಮೋದಿ ಗೆದ್ದು ಬರಬೇಕು ಅಂತಾ ಪಾಕ್ ಪ್ರಧಾನಿ ಹೇಳ್ತಾ ಇದ್ದಾರೆ ಅಂದ್ರೇ, ಮೋದಿಗೂ ಅವರಿಗೂ ಏನೋ ಸಂಬಂಧವಿರಬೇಕು ಎಂದರು.
ಮಂಡ್ಯದಲ್ಲಿ ಇರುವ ಗೊಂದಲವನ್ನು ಸರಿಪಡಿಸಲಾಗುತ್ತದೆ. ನಾಡಿದ್ದು ದೇವೆಗೌಡರು ಹಾಗೂ ಸಿದ್ದರಾಮಯ್ಯನವರು ಒಟ್ಟಿಗೆ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ನಂತರ ರಾಹುಲ್ ಗಾಂಧಿಯವರು ಮಂಡ್ಯ, ಕೋಲಾರ ಹಾಗೂ ಚಿತ್ರದುರ್ಗದಲ್ಲಿ ಬಹಿರಂಗ ಸಮಾವೇಶ ಮಾಡಲಿದ್ದಾರೆ ಎಂದರು.