ETV Bharat / state

ನನ್ನ ಹೆಸರೇಳಿ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ: ಕೆ.ಎಸ್ ಈಶ್ವರಪ್ಪ

ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹ ಮಾಡುತ್ತಿರುವುದು ಗೊತ್ತಾಯ್ತು. ಯಾರು ಹಣ ಕಳೆದುಕೊ‌ಂಡಿದ್ದಾರೋ ಅವರೇ ಬಂದು ನಿಮ್ಮ ಹೆಸರು ಹೇಳಿಕೊಂಡು ಮೊಸ ಮಾಡಿದ್ದಾರೆ ಎಂದು ಹೇಳಿದರು ಎಂಬ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಮಾಹಿತಿ ನೀಡಿದರು.

I suggested to take stern action against those who defrauded  on my name: KS Eshwarappa
ಕೆ.ಎಸ್ ಈಶ್ವರಪ್ಪ
author img

By

Published : Oct 6, 2021, 7:07 PM IST

Updated : Oct 6, 2021, 7:44 PM IST

ಶಿವಮೊಗ್ಗ: ನನ್ನ ಹೆಸರು ಹೇಳಿ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್​ ರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ತಮ್ಮ ಹೆಸರು ಹೇಳಿ 36 ಲಕ್ಷ ವಂಚಿಸಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರೋ ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹ ಮಾಡುತ್ತಿರುವುದು ಗೊತ್ತಾಯ್ತು. ಯಾರು ಹಣ ಕಳೆದುಕೊ‌ಂಡಿದ್ದಾರೋ ಅವರೇ ಬಂದು ನಿಮ್ಮ ಹೆಸರು ಹೇಳಿಕೊಂಡು ಮೊಸ ಮಾಡಿದ್ದಾರೆ ಎಂದು ಹೇಳಿದರು. ತಕ್ಷಣವೇ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಹೇಳಿ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ.

ಕೆ.ಎಸ್ ಈಶ್ವರಪ್ಪ

ಈಗಾಗಲೇ ಇಬ್ಬರನ್ನೂ ಬಂಧಿಸಿದ್ದಾರೆ ಎನ್ನುವುದು ಗೊತ್ತಾಗಿದೆ. ಈ ರೀತಿ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ತಿಳಿಸಿದ್ದೇನೆ ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು.

ಉಪ ಚುನಾವಣೆಯಲ್ಲಿ ನಾವ್ ಗೆಲ್ತೀವಿ:

ಎರಡು ಉಪಚುನಾವಣೆಯ ಅಭ್ಯರ್ಥಿಗಳನ್ನು ಇವತ್ತು ಅಥವಾ ನಾಳೆಯೊಳಗಾಗಿ ಅಭ್ಯರ್ಥಿ ಹೆಸರು ಘೋಷಣೆ ಆಗುತ್ತೆ. ಎರಡೂ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಘಟನೆ ಚೆನ್ನಾಗಿದೆ. ಒಳ್ಳೆಯ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುತ್ತೇವೆ ಹಾಗೂ ನಾವೆಲ್ಲರೂ ಸೇರಿ ಚುನಾವಣೆ ಪ್ರಚಾರ ಮಾಡಿ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Oct 6, 2021, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.