ETV Bharat / state

ಅಧಿವೇಶನವನ್ನು ಸಮರ್ಥವಾಗಿ ಎದುರಿಸುತ್ತೇನೆ : ಗೃಹ ಸಚಿವ ಆರಗ ಜ್ಞಾನೇಂದ್ರ - ಸಚಿವ ಆರಗ ಜ್ಞಾನೇಂದ್ರ ಲೇಟೆಸ್ಟ್ ನ್ಯೂಸ್

ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ವೇಗವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸ್​ ಇಲಾಖೆ ಬಗ್ಗೆ ಹೆಮ್ಮೆ ಇದೆ. ಈಗ ಇರುವ ಕಾನೂನಿನಲ್ಲಿಯೇ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ..

Minister Araga jnanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Sep 11, 2021, 10:54 PM IST

ಶಿವಮೊಗ್ಗ : ನಾನು ಇಷ್ಟು ದಿನ ಅಧಿವೇಶನದಲ್ಲಿ ಪ್ರಶ್ನೆ ಕೇಳುವ ಸ್ಥಾನದಲ್ಲಿದ್ದೆ. ಈಗ ಪ್ರಶ್ನಗೆ ಉತ್ತರ ನೀಡುವ ಸ್ಥಾನದಲ್ಲಿದ್ದೇನೆ. ತುಂಬಾ ಸಂತೋಷವಾಗುತ್ತದೆ. ಅಧಿವೇಶನವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸದನದಲ್ಲಿ ಮೊದಲ ಬಾರಿಗೆ ಸಚಿವನಾಗಿ ಪಾಲ್ಗೊಳ್ತಿರುವ ಕುರಿತು ಆರಗ ಜ್ಞಾನೇಂದ್ರ ಮಾತನಾಡಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ನಾನು ಮಂತ್ರಿಯಾದ ಮೇಲೆ‌‌‌‌ ಮೊದಲ ಅಧಿವೇಶನ. ನನ್ನ ಹಿಂದೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪನವರಿದ್ದಾರೆ. ನಾನು ಈಗಾಗಲೇ ಗೃಹ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು.

ಸಾರ್ವಜನಿಕರ ಸಹಕಾರ ಮುಖ್ಯ : ಮಾದಕ ವಸ್ತುಗಳ ಸಾಗಾಟ, ಮಾರಾಟದ ಬಗ್ಗೆ ನಮ್ಮ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ. ಪ್ರತಿವರ್ಷ ಟನ್ ಗಟ್ಟಲೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಗಾಂಜಾ ಎಲ್ಲಾ ಕಡೆ ಇದೆ. ಇದನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.

ಕಾನೂನಿನಂತೆ ಆರೋಪಿಗಳಿಗೆ ಶಿಕ್ಷೆ : ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ವೇಗವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸ್​ ಇಲಾಖೆ ಬಗ್ಗೆ ಹೆಮ್ಮೆ ಇದೆ. ಈಗ ಇರುವ ಕಾನೂನಿನಲ್ಲಿಯೇ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು.

ಪಾಲಿಕೆ ಮೈತ್ರಿ ವಿಚಾರ : ಮಹಾನಗರ ಪಾಲಿಕೆಗಳಲ್ಲಿನ ಮೈತ್ರಿಯ ಕುರಿತು ನಮ್ಮ ವರಿಷ್ಠರು ಗಮನ ಹರಿಸುತ್ತಿದ್ದಾರೆ ಎಂದರು.

ಓದಿ: ವಿಧಾನಪರಿಷತ್​​​ ಸಭಾನಾಯಕನಾಗಿ ಕೋಟಾ ಶ್ರೀನಿವಾಸ ಪೂಜಾರಿ ನಾಮನಿರ್ದೇಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.