ಶಿವಮೊಗ್ಗ: ಹೈದರಾಬಾದ್ ದಿಶಾ ಆರೋಪಿಗಳ ಎನ್ಕೌಂಟರ್ ಹಿನ್ನೆಲೆಯಲ್ಲಿ ಇಂದು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಕಸ್ತೂರಿ ಬಾ ಬಾಲಕಿಯರ ಕಾಲೇಜಿನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಇಂದು ಬೆಳ್ಳಂ ಬೆಳಗ್ಗೆ ಹೈದರಾಬಾದ್ ಪೊಲೀಸರು ದಿಶಾ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದು, ಇಂದು ಜಯ ಕರ್ನಾಟಕ ಸಂಘಟನೆ ನಗರದ ಕಸ್ತೂರಿ ಬಾ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಮ್ಮ ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೈದರಾಬಾದ್ ಪೊಲೀಸರ ಈ ದಿಟ್ಟ ಕಾರ್ಯದಿಂದ ಸಂತ್ರಸ್ಥೆ ಕುಟುಂಬಕ್ಕೆ ನೆಮ್ಮದಿ ತಂದಿದೆ ಎಂದು ವಿದ್ಯಾರ್ಥಿನಿಯರು ಅಭಿಪ್ರಾಯ ಹಂಚಿಕೊಂಡರು.