ETV Bharat / state

ಭಕ್ತರ ಇಷ್ಟಾರ್ಥ ಈಡೇರಿಸುವ ವಡನಬೈಲು ಪದ್ಮಾವತಿ ದೇವಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ವಿಶೇಷತೆ ಗೊತ್ತೇ? - ಈಟಿವಿ ಭಾರತ ಕರ್ನಾಟಕ

Vadanabailu Shri Padmavati Devi Temple: ಭಕ್ತರ ಇಷ್ಟಾರ್ಥವನ್ನು ದಯಪಾಲಿಸುವ ವಡನಬೈಲು ಶ್ರೀ ಪದ್ಮಾವತಿ ದೇವಿಯ ದರ್ಶನ ಪಡೆಯಲು ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.

hundreds-of-devotees-visiting-vadanabailu-padmavati-temple-in-shivamogga
ಶಿವಮೊಗ್ಗ: ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ವಡನಬೈಲು ಪದ್ಮಾವತಿ ದೇವಿ: ಇಲ್ಲಿನ ವಿಶೇಷತೆ ಏನು ಗೊತ್ತಾ?
author img

By

Published : Aug 11, 2023, 6:28 PM IST

Updated : Aug 11, 2023, 8:04 PM IST

ವಡನಬೈಲು ಪದ್ಮಾವತಿ ದೇವಿ ಮಹಾತ್ಮೆ

ಶಿವಮೊಗ್ಗ: ದೇವರಿಗೆ ಹರಕೆ ಹೊತ್ತವರು ಸೀರೆ, ಬಂಗಾರ ಸೇರಿದಂತೆ ನಾನಾ ರೀತಿಯ ಬೆಲೆಬಾಳುವ ವಸ್ತುಗಳನ್ನು ಅರ್ಪಿಸಿ ಹರಕೆ ತೀರಿಸುವುದನ್ನು ನೋಡಿದ್ದೇವೆ. ಆದರೆ, ಶಿವಮೊಗ್ಗ ಜಿಲ್ಲೆಯ ಈ ಶಕ್ತಿದೇವಿಗೆ ಭಕ್ತರು ಬಳೆಗಳನ್ನು ಹರಕೆಯಾಗಿ ಒಪ್ಪಿಸುತ್ತಾರೆ. ಜಿಲ್ಲೆಯ ಸಾಗರ ತಾಲೂಕಿನ ಜೋಗ ಪಟ್ಟಣದ ಪಕ್ಕದಲ್ಲಿರುವ ವಡನಬೈಲು ಗ್ರಾಮದಲ್ಲಿ ನೆಲೆಸಿರುವ ಶ್ರೀ ಪದ್ಮಾವತಿ ದೇವಿಗೆ ಭಕ್ತರು ಬಳೆಯನ್ನು ಹರಕೆ ರೂಪದಲ್ಲಿ ಸಮರ್ಪಿಸುತ್ತಾರೆ. ಲಿಂಗನಮಕ್ಕಿ ಜಲಾಶಯದ ಸಮನಾಂತರ ಅಣೆಕಟ್ಟೆಯಾದ ತಲಕಳಲೆ ಹಿನ್ನೀರಿನ ಪ್ರದೇಶದಲ್ಲಿರುವ ಪದ್ಮಾವತಿ ದೇವಿ 'ಬಳೆ ಪದ್ಮಾವತಿ ದೇವಿ' ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ.

ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯ ಮಾತ್ರವಲ್ಲದೇ, ದೇಶದ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸುತ್ತಾರೆ. ಲಿಂಗನಮಕ್ಕಿ ಅಣೆಕಟ್ಟೆಯಿಂದ ಮುಳುಗಡೆಯಾದ ಹೆಬ್ಬೈಲು ಗ್ರಾಮದಲ್ಲಿ ನೆಲೆಸಿರುವ ಪದ್ಮಾವತಿ ದೇವಿಯು 'ಹೆಬ್ಬೈಲಮ್ಮ' ಎಂದೇ ಪ್ರಸಿದ್ಧಿ ಪಡೆದಿದ್ದಳು. ಹೆಬ್ಬೈಲು ಮುಳುಗಡೆಯಾದ ನಂತರ ಕೆಪಿಸಿಯವರು ಪದ್ಮಾವತಿ ಅಮ್ಮನವರನ್ನು ಪೂಜಿಸುತ್ತಿರುವ ವೀರ ರಾಜಯ್ಯ ಜೈನ್‌ ಅವರ ತಂದೆ ಈ ಜಾಗದಲ್ಲಿ ಬಂದು ನೆಲೆಸುತ್ತಾರೆ. ಅವರು ತಮ್ಮ ಜೊತೆಗೇ ದೇವಿಯನ್ನೂ ತಂದು ಈ ಜಾಗದಲ್ಲಿ ಪ್ರತಿಷ್ಠಾಪಿಸಿದ್ದರು.

ದೇವಿಯ ಬಳಿ ಭಕ್ತರು ಮದುವೆ, ಮಕ್ಕಳು, ಆಸ್ತಿ ಸೇರಿದಂತೆ ನಾಗದೋಷದ ಕುರಿತ ಸಮಸ್ಯೆಗಳ ನಿವಾರಣೆಗೆ ಆಗಮಿಸುತ್ತಾರೆ. ಮದುವೆ, ಮಕ್ಕಳಾಗದವರು ಬಂದು ಬಳೆ ಹರಕೆ ಹೊತ್ತುಕೊಳ್ಳುತ್ತಾರೆ. ಮದುವೆ ಆಗದವರು 1,008 ಬಳೆ ಹರಕೆ ಹೊರುತ್ತಾರೆ. ಮಕ್ಕಳಾಗದವರು ಮಕ್ಕಳಷ್ಟು ತೂಕದ ಬಳೆ ನೀಡುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಇನ್ನು, ಆಸ್ತಿ ವಿಚಾರಕ್ಕೆ ಹರಕೆ ಹೊತ್ತವರು ಭೂತಪ್ಪನವಿಗೆ ಬೂದು ಕುಂಬಳಕಾಯಿ ಹರಕೆ ಸಲ್ಲಿಸುತ್ತಾರೆ. ನಾಗದೋಷ ಇರುವವರು ನಾಗ ಪೂಜೆಯ ಮೂಲಕ ದೋಷ ಪರಿಹರಿಸಿಕೊಳ್ಳುತ್ತಾರೆ.

ದೇವಾಲಯಕ್ಕೆ ಹೀಗೆ ಬನ್ನಿ..: ಶಿವಮೊಗ್ಗದಿಂದ ಸಾಗರ, ಸಾಗರದಿಂದ ಜೋಗ ಪಟ್ಟಣ, ಜೋಗ ಪಟ್ಟಣದಿಂದ ಶರಾವತಿ ವಿದ್ಯುತ್ ಗಾರಕ್ಕೆ ಹೋಗುವ ಮಾರ್ಗದಲ್ಲಿ ಸಾಗಬೇಕು. ಸ್ವಂತ ವಾಹನದಲ್ಲಿ ಹೋಗುವವರು ಕೆಪಿಸಿಯವರು ನೀಡುವ ಪಾಸ್ ಪಡೆಯಬೇಕು. ವಾಪಸ್ ಆಗುವಾಗ ಪಾಸ್ ವಾಪಸ್ ಮಾಡಬೇಕು. ಇಲ್ಲಿಗೆ ಬಸ್ ಸೌಲಭ್ಯ ಇದೆ. ಜೋಗದ ಅಭಿವೃದ್ಧಿಗಾಗಿ ತಲಕಳಲೆ ಡ್ಯಾಂನಲ್ಲಿ ಜಲಕ್ರೀಡೆಗೆ ಅವಕಾಶ ಕಲ್ಪಿಸಲಾಗಿದೆ.

ವಡನಬೈಲಿನಲ್ಲಿ ರಾಜ ವೀರಯ್ಯ ಜೈನ್ ಅವರ ಮನೆಯ ಮುಂದೆ ಹಂಚಿನ ಮನೆಯಲ್ಲಿ ಮೂಲ ಸ್ಥಾನವಿದೆ. ಈಗ ವಿಶಾಲವಾಗಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲಿ ನಾಗ ದೇವನ ಗುಡಿ ಹಾಗೂ ಪ್ರಸಾದ ನಿಲಯವಿದೆ. ಪದ್ಮಾವತಿ ದೇವಿಯನ್ನು ವೀರ ರಾಜಯ್ಯ ಜೈನ್ ಅವರ ಕುಟುಂಬ ಆರಾಧಿಸಿಕೊಂಡು ಬರುತ್ತಿದೆ.

ದೇವಿ ವಡನಬೈಲಿಗೆ ಬಂದು ನೆಲೆಸಿದ ಕುರಿತು ವೀರ ರಾಜಯ್ಯ ಜೈನ್ ಮಾತನಾಡಿ, "ನಮ್ಮ ಮೂಲ ಊರು ಹೆಬ್ಬೈಲು. ಅದು ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾಯಿತು. 1952ರಲ್ಲಿ ನಮ್ಮ ತಂದೆ ಮನೆ ದೇವರ ಮೂರ್ತಿಯನ್ನು ತಂದು ಇಲ್ಲಿಟ್ಟು ತೀರಿ ಹೋದರು.‌ ನಾನು ದೇವರ ಪೂಜೆಗೆ ಹೋಗುತ್ತಿರಲಿಲ್ಲ. 1965ರಲ್ಲಿ ನಾನು ಕೆಪಿಸಿ ಉದ್ಯೋಗಿಯಾಗಿ ಸೇರ್ಪಡೆಗೊಂಡೆ. ಕೆಪಿಸಿ ಉದ್ಯೋಗಿಯಾಗಿ ಸೇರಿದ ನಂತರ ಕೆಲಸಕ್ಕೆ ಹೋಗುತ್ತಿದ್ದಂತೆಯೇ ನಾನು ತಲೆ ತಿರುಗಿ ಬೀಳುತ್ತಿದ್ದೆ. ಈ ಕುರಿತು ಬೇರೆ ಕಡೆ ವಿಚಾರಿಸಿದಾಗ ಅದು ಮನೆ ದೇವರ ತೊಂದರೆ ಎಂದು ತಿಳಿಯಿತು" ಎಂದರು.

"ನಂತರ ನಾನು ಮನೆ ದೇವರ ಪೂಜೆ ಮಾಡಲು ನಿರ್ಧರಿಸಿದೆ. ಹಿಂದೆ ನಮ್ಮ ತಂದೆ ಪೂಜೆ ಮಾಡುವಾಗ ದೇವಿಯ ಬಳಿ ಹುತ್ತ ಬೆಳೆದು ಅದರಲ್ಲಿ ಹಾವು ಇರುತ್ತಿತ್ತು. ಅದೇ ರೀತಿ ನಾನು ಪೂಜೆ ಮಾಡಿದ ಒಂದು ವಾರದ ಹಿಂದೆ ನಮ್ಮ ತಂದೆ ಪೂಜೆ ಮಾಡಿದಾಗ ಇದ್ದ ಹಾವು ಬಂದರೆ, ನಾನು ಪೂಜೆ ಮುಂದುವರೆಸುತ್ತೇನೆ ಎಂದು ಕೇಳಿಕೊಂಡೆ. ಅದರಂತೆ ಒಂದು ವಾರ ಬಿಟ್ಟು ಹೋದಾಗ ಅಲ್ಲಿ ಹುತ್ತ ಬೆಳೆದು ಹಾವು ಬಂದಿತ್ತು" ಎಂದು ತಿಳಿಸಿದರು.

"ಅಂದಿನಿಂದ ನಾನು ಕೆಪಿಸಿ ಉದ್ಯೋಗ ಬಿಟ್ಟು ದೇವರ ಪೂಜೆ ಪ್ರಾರಂಭಿಸಿದೆ. ಇದಾದ ನಂತರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿದರು. ಇಲ್ಲಿಗೆ ನಾಗದೋಷದ ಬಗ್ಗೆ, ಪುತ್ರ ಸಂತಾನಕ್ಕಾಗಿ ಬಂದು ಬಳೆ ತೂಕ ನೀಡುತ್ತಾರೆ. ಬಹಳ ಜನಕ್ಕೆ ಅನುಕೂಲವಾಗಿದೆ. ಪ್ರತಿದಿನ ಇಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ. ದೇವರು ಬಳೆ ಪದ್ಮಾವತಿ ಅಂತನೇ ಪ್ರಸಿದ್ಧಿ. ಇಲ್ಲಿಗೆ ಬರುವವರು ಮುಖ್ಯವಾಗಿ ಬಳೆ ಹರಕೆ ಮಾಡಿಕೊಳ್ಳುತ್ತಾರೆ" ಎಂದರು.

"ಇಲ್ಲಿ ಸಂತಾನ, ಆಸ್ತಿ, ಕೋರ್ಟ್ ಕೇಸ್ ಬಗ್ಗೆ ಹರಕೆ ಮಾಡಿಕೊಂಡು ಹೋಗುತ್ತಾರೆ. ಭಕ್ತರ ಇಷ್ಟಾರ್ಥ ನೆರವೇರಿದ ನಂತರ ಬಂದು ಬಳೆ ನೀಡುತ್ತಾರೆ. ಕೆಲವರು ಅನ್ನಸಂರ್ಪಣೆ ಮಾಡುವ ಬಗ್ಗೆ ಹರಕೆ ಮಾಡಿಕೊಂಡು ಹೋಗುತ್ತಾರೆ.‌ ಇಲ್ಲಿ ಹುತ್ತದ ಪ್ರಸಾದ ನೀಡುತ್ತೇವೆ. ಆ ಪ್ರಸಾದದಿಂದ ಜನರಿಗೆ ಒಳ್ಳೆದಾಗುತ್ತದೆ. ಭಕ್ತರು ನಮ್ಮ ರಾಜ್ಯವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಬರುತ್ತಾರೆ" ಎಂದು ಅವರು ಹೇಳಿದರು.

ದೇವಾಲಯದ ಕಾರ್ಯದರ್ಶಿ ದರ್ಶನ್ ಮಾತನಾಡಿ, "ಶರಾವತಿ ಹಿನ್ನೀರಿನಲ್ಲಿ‌ ಈಗ ಮುಳುಗಿರುವ ಹೆಬ್ಬೈಲು ಗ್ರಾಮದ ಹೆಬ್ಬೈಲು ಅಮ್ಮನಾಗಿದ್ದ ದೇವಿ ಮುಳುಗಡೆಯಾದ ನಂತರ ಸರ್ಕಾರದವರು ನೀಡಿದ ಜಾಗಕ್ಕೆ ಬಂದು ಇಲ್ಲಿ ನೆಲೆಸಿದ್ದಾರೆ. ಮೂಲ ಸ್ಥಳದಿಂದ ಬರುವಾಗ ಒಂದು ಸಣ್ಣ ವಿಗ್ರಹವನ್ನು ಮಾತ್ರ ತರಲಾಗಿತ್ತು. ವಿಗ್ರಹ ಇಟ್ಟ ಸ್ಥಳದಲ್ಲಿಯೇ ಹುತ್ತ ಬೆಳೆಯಲು ಪ್ರಾರಂಭಿಸುತ್ತದೆ. ಇಲ್ಲಿ ಮೊದಲು ಕುಟುಂಬದವರು ಸರಿಯಾಗಿ ಪೂಜೆ ಮಾಡದೆ ಹಾಗೆಯೇ ಬಿಟ್ಟಿದ್ದರು. ನಂತರ ಅವರಿಗೆ ಸಮಸ್ಯೆಗಳು ಹೆಚ್ಚಾದಾಗ, ಮನೆ ದೇವರ ಪೊಜೆ ಸಲ್ಲಿಸಲು ಮುಂದಾದರು. ಬಳಿಕ ಅವರಿಗೆ ಒಳ್ಳೆಯದಾಯಿತು" ಎಂದರು.

ಸೊಲ್ಲಾಪುರದ ಭಕ್ತರಾದ ಅಶ್ವಿನಿ ಗಾಂಧಿ ಮಾತನಾಡಿ, "ನಮ್ಮ ಮಗನಿಗೆ ಮೂರು ತಿಂಗಳಿನಿಂದ ಅನಾರೋಗ್ಯ ಇತ್ತು. ಇದರಿಂದ ಸುಸ್ತು ಎನ್ನುತ್ತಿದ್ದ. ಸಾಕಷ್ಟು ವೈದ್ಯರನ್ನು ಕಂಡರೂ ಯಾವುದೇ ಸಮಸ್ಯೆ ಬಗೆಹರಿಯಲಿಲ್ಲ. ಕೊನೆಗೆ ಪದ್ಮಾವತಿ ಅಮ್ಮನವರಲ್ಲಿ ಬೇಡಿಕೊಂಡಿದ್ದೆವು. ಐದು ಶುಕ್ರವಾರ ಮನೆಯಲ್ಲಿಯೇ ವಿಶೇಷ ಪೂಜೆ ಹಾಗೂ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಬರುವುದಾಗಿ ಹರಕೆ ಹೊತ್ತ ಮರುದಿನವೇ ಮಗ ಗುಣಮುಖರಾದರು. ಇದರಿಂದ ಹರಕೆ ಸಲ್ಲಿಸೋಕೆ ಕುಟುಂಬಸಮೇತ ಬಂದಿದ್ದೇವೆ" ಎಂದು ಹೇಳಿದರು.

Last Updated : Aug 11, 2023, 8:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.