ಶಿವಮೊಗ್ಗ: ಬಿಡಾದಿ ದನದ ಮೇಲೆ ಬಿಸಿ ನೀರು ಎರಚಿರುವ ಅಮಾನವೀಯ ಘಟನೆ ಸಾಗರದಲ್ಲಿ ನಡೆದಿದೆ. ಬಿಸಿ ನೀರು ಹಾಕಿದ ಪರಿಣಾಮ ದನದ ಬೆನ್ನು ಭಾಗದ ಚರ್ಮ ಸಂಪೂರ್ಣ ಸುಟ್ಟು ಹೋಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ದನ ಬೀದಿಯಲ್ಲಿ ಓಡಾಡುವುದನ್ನು ನೋಡಿದ ಸಾಗರ ಬಜರಂಗದಳದ ಕಾರ್ಯಕರ್ತರು ದನವನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ವಾಹನದಲ್ಲಿ ದನವನ್ನು ಸಾಗರದ ಪುಣ್ಯಕೋಟಿ ಗೋ ಆಶ್ರಮಕ್ಕೆ ತಂದು ಬಿಡಲಾಗಿದೆ. ಬಿಡಾಡಿ ದನದ ಮೇಲೆ ಬಿಸಿ ನೀರು ಎರಚಿದ ಕಿಡಿಗೇಡಿಗಳನ್ನು ಬಂಧಿಸಿ, ಸೂಕ್ತ ಕ್ರಮ ಜರುಗಿಸಬೇಕೆಂದು ಬಜರಂಗದಳ ಆಗ್ರಹಿಸಿದೆ.