ಶಿವಮೊಗ್ಗ: ಪೊಲೀಸರು ತಮ್ಮ ಸಂಯಮ ವರ್ತನೆಯಿಂದ ಹುಬ್ಬಳ್ಳಿಯನ್ನು ಮತ್ತೊಂದು ಕೆ.ಜಿ.ಹಳ್ಳಿ ಹಾಗೂ ಡಿ.ಜೆ ಹಳ್ಳಿ ಆಗುವುದನ್ನು ತಡೆದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರ ಬೆನ್ನು ತಟ್ಟಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಗಲಭೆ ನಡೆಸಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಪೊಲೀಸರು ಗಲಭೆ ನಡೆಸಿದವರನ್ನು ಬಂಧಿಸಿ ಅವರ ವಿರುದ್ಧ ಮತ್ತು ಮುಸ್ಲಿಂ ಧರ್ಮೀಯ ನಿಂದನೆ ಮಾಡುವ ಪೊಸ್ಟ್ ಮಾಡಿದವನ ವಿರುದ್ಧವೂ ಕ್ರಮ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು.
ಸಿಸಿಟಿವಿ ಮತ್ತು ಇತರೆ ಬೇರೆ ಸಾಕ್ಷ್ಯಾಧಾರಗಳನ್ನು ಅವಲಂಬಿಸಿ ಸುಮಾರು 80 ಜನರನ್ನು ಬಂಧಿಸಲಾಗಿದೆ. ಇವರನ್ನೆಲ್ಲಾ ವಿಚಾರಣೆಗೆ ಒಳಪಡಿಸಲಾಗಿದೆ. ಕೋಮುಗಲಭೆಯನ್ನು ಸೃಷ್ಠಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ. ಎಲ್ಲಾ ಸಮುದಾಯದವರು ಸಂಯಮ ತಾಳಬೇಕು ಎಂದು ಮನವಿ ಮಾಡಿಕೊಂಡಿಕೊಂಡರು.
ಎಲ್ಲಾ ಧರ್ಮದ ಹಿರಿಯರು ಕುಳಿತು ಮಾತನಾಡುವ ಅವಶ್ಯಕತೆ ಇದೆ. ಈ ಗಲಭೆಯಲ್ಲಿ ಸುಮಾರು 8 ಜನ ಪೊಲೀಸರು ಗಾಯಗೊಂಡಿದ್ದಾರೆ. ಇನ್ಸ್ಪೆಕ್ಟರ್ ಹಾಗೂ ಹೆಡ್ ಕಾನ್ಸ್ಟೇಬಲ್ ಗ್ರೇಡ್ನವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಿನ್ನೆ ದಿನ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೇನೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ವಿಡಿಯೋ ಹರಿಬಿಟ್ಟಿದ್ದ ಆರೋಪಿಗೆ ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ
ಕೋಮು ಸೌಹಾರ್ದ ಹಾಳು ಮಾಡುವ ಯತ್ನ : ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ರಕ್ಷಣೆ ಮಾಡುವವರ ಮೇಲೆಯೇ ಹಲ್ಲೆ ನಡೆಸುವ ಮೂಲಕ ಕೋಮು ಸೌಹರ್ದತೆಯನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಷಾದ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಗಲಭೆ ಪ್ರಕರಣದಲ್ಲಿ ಯಾರ್ಯಾರು ವಿನಾಃಕಾರಣ ಭಾಗಿಯಾಗಿದ್ದರೋ ಬಹುತೇಕ ಜನರನ್ನು ಬಂಧಿಸಲಾಗಿದೆ. ಸಮಗ್ರವಾದ ತನಿಖೆಯಾಗಬೇಕಿದೆ ಎಂದು ಹೇಳಿದರು.
ಯಾವ ಕಾರಣಕ್ಕೆ ಗಲಭೆ ಉಂಟು ಮಾಡ್ತಾ ಇದ್ದಾರೆ, ಅವರು ಕೋಮು ಸೌಹರ್ದತೆಯನ್ನು ಹಾಳು ಮಾಡುವ ಪ್ರಯತ್ನ ಮಾಡ್ತಾ ಇದ್ದಾರೆ. ಅವರ ಮೇಲೆ ಉಗ್ರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ರು ಒತ್ತಾಯ ಮಾಡಿದ್ದಾರೆ. ಈ ರಾಜ್ಯದ ಸಿಎಂ ಸಹ ಬಿಗಿಯಾದ ಕ್ರಮ ತೆಗೆದುಕೊಳ್ಳವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.