ETV Bharat / state

ಮಲೆನಾಡಿನಲ್ಲಿ ಮತ್ತೆ ಚುರುಕುಗೊಂಡ ಮಳೆ: ನದಿ ಪಾತ್ರದ ಪ್ರದೇಶಗಳಲ್ಲಿ ಕಟ್ಟೆಚ್ಚರ - Heavy Rain in the Shimogga

ಮಲೆನಾಡಿನಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಜಿಲ್ಲೆಯಲ್ಲಿನ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, 27 ಸಾವಿರ‌ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೆ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ಮಲೆನಾಡಿನಲ್ಲಿ ಮತ್ತೆ ಚುರುಕುಗೊಂಡ ಮಳೆ
ಮಲೆನಾಡಿನಲ್ಲಿ ಮತ್ತೆ ಚುರುಕುಗೊಂಡ ಮಳೆ
author img

By

Published : Aug 17, 2020, 4:25 PM IST

Updated : Aug 17, 2020, 5:10 PM IST

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಳೆ ಮತ್ತೆ ಚುರುಕುಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಬಿಡುವು‌ ನೀಡಿದ್ದ ಮಳೆ ನಿನ್ನೆಯಿಂದ ಮತ್ತೆ ಪ್ರಾರಂಭವಾಗಿದೆ. ನಿನ್ನೆ ಬೆಳಗ್ಗೆಯಿಂದ ಸಂಜೆ ತನಕ ಮಳೆ ಬಿಡದೆ ಸುರಿದಿದ್ದು, ಇಂದೂ ಮಳೆಯಾಗುತ್ತಿದೆ.

ಮಲೆನಾಡಿನಲ್ಲಿ ಮತ್ತೆ ಚುರುಕುಗೊಂಡ ಮಳೆ

ಜಿಲ್ಲೆಯಲ್ಲಿನ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಇಲ್ಲಿಗೆ 27 ಸಾವಿರ‌ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಭದ್ರಾ ಅಣೆಕಟ್ಟು ತುಂಬಲು ಇನ್ನೂ 5 ಅಡಿ ಮಾತ್ರ ಬಾಕಿ ಇದೆ. ಇಲ್ಲಿಗೆ 11 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಅದೇ ರೀತಿ‌ ಲಿಂಗನಮಕ್ಕಿ ಜಲಾಶಯಕ್ಕೆ 62 ಸಾವಿರ ಕ್ಕೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಇಲ್ಲಿಂದ‌ ವಿದ್ಯುತ್ ಬಳಕೆಗೆ ನೀರು ಬಿಡುತ್ತಿಲ್ಲ.

ಭದ್ರಾ ನದಿಗೆ ಯಾವಾಗ ಬೇಕಾದರೂ ಸಹ ನೀರು ಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದೇ ರೀತಿ ಸಾಗರ, ಸೊರಬ, ಹೊಸನಗರದಲ್ಲಿ ಸಹ ನದಿ ಪಾತ್ರದ ಜನತೆಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲಾಡಳಿತ ಪ್ರವಾಹಕ್ಕೆ ಸಂಪೂರ್ಣ ಸಿದ್ಧತೆ ನಡೆಸಿದೆ.

Last Updated : Aug 17, 2020, 5:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.