ಶಿವಮೊಗ್ಗ: 17 ದಿನಗಳಹಿಂದೆ ಯಾವುದೇ ಮಾಹಿತಿ ನೀಡದೆ ತಮ್ಮ ಮನೆಗಳನ್ನು ಪಲಿಕೆ ತೆರವುಗೊಳಿಸಿದ್ದು ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಹಸಿರು ಗಿಡ ಗ್ರಾಮದ ನಿವಾಸಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಸಿರುಗಿಡ ಗ್ರಾಮದಲ್ಲಿ ವಾಸವಾಗಿದ್ದ 13 ಕುಟುಂಬಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದು, ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಮಾಡದೇ ನಮ್ಮನ್ನು ಬೀದಿಗೆ ತಂದಿದ್ದಾರೆ . ಮನೆಗಳನ್ನು ತೆರವುಗೊಳಿಸಿದ ಜಾಗದಲ್ಲಿ ಟೆಂಟ್ಗಳನ್ನು ಹಾಕಿಕೊಂಡಿದ್ದೆವು. ಆದರೆ ರಾತ್ರಿ ಸುರಿದ ಮಳೆಗೆ ಎಲ್ಲವು ಹಾಳಾಗಿ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ. ಅಲ್ಲದೇ 17 ದಿನಗಳಿಂದ ಮಕ್ಕಳು ಶಾಲೆಗೆ ಹೋಗಿಲ್ಲ. ಪ್ರತಿದಿನ ಅಲ್ಲಿ ಇಲ್ಲಿಂದ ಊಟ ತಂದು ಕೊಡುತ್ತಿದ್ದಾರೆ. ಅದನ್ನೇ ನೆಚ್ಚಿಕೊಂಡು ಎಷ್ಟು ದಿನ ಬದುಕನ್ನು ನಡೆಸಲಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹಾಗಾಗಿ ನಮಗೆ ಬೇರೆಡೆ ಮನೆ ಮಾಡಿಕೊಡುವವರೆಗೆ ಜಿಲ್ಲಾಧಿಕಾರಿ ಕಚೇರಿಯನ್ನು ಬಿಟ್ಟು ಹೋಗಲ್ಲ, ನಮಗೆ ಪರಿಹಾರಬೇಕು ಎಂದು ಪಟ್ಟು ಹಿಡಿದಿದ್ದಾರೆ.