ETV Bharat / state

ಸರ್ಕಾರ ಉರ್ದು ಶಾಲೆಗಳನ್ನು ಕಡೆಗಣಿಸುತ್ತಿದೆ: ಸರ್ಕಾರದ ವಿರುದ್ಧ ಖಾದರ್ ಅಸಮಾಧಾನ

ಸರ್ಕಾರಿ ಮತ್ತು ಅನುದಾನಿತ ಉರ್ದು ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಉರ್ದು ಶಾಲೆಗಳನ್ನು ಆರಂಭ ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಉರ್ದು ವೆಲ್ಫೇರ್ ಡೆವಲಪ್ಮೆಂಟ್ ಚಾರಿಟಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಸಿ.ಎಂ. ಖಾದರ್ ಆಗ್ರಹಿಸಿದ್ದಾರೆ.

author img

By

Published : Oct 18, 2020, 10:07 AM IST

CM Khadar
ಸರ್ಕಾರ ಉರ್ದು ಶಾಲೆಗಳನ್ನು ಕಡೆಗಣಿಸುತ್ತಿದೆ: ಸಿ.ಎಂ. ಖಾದರ್

ಶಿವಮೊಗ್ಗ: ಸರ್ಕಾರ ಉರ್ದು ಶಾಲೆಗಳನ್ನು ಕಡೆಗಣಿಸುತ್ತಿದೆ ಎಂದು ಆಲ್ ಇಂಡಿಯ ಉರ್ದು ವೆಲ್ಫೇರ್ ಡೆವಲಪ್ಮೆಂಟ್ ಚಾರಿಟಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಸಿ.ಎಂ. ಖಾದರ್ ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಪ್ರವೇಶ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಾಗಾಗಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಿದೆ. ಸುಮಾರು 4,950 ಉರ್ದು ಶಾಲೆಗಳಿದ್ದು, 6 ಲಕ್ಷ ಶಿಕ್ಷಕರಿದ್ದಾರೆ. ಇವರೆಲ್ಲ ಬೀದಿಪಾಲಾಗುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಸರ್ಕಾರಿ ಮತ್ತು ಅನುದಾನಿತ ಉರ್ದು ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಉರ್ದು ಶಾಲೆಗಳನ್ನು ಆರಂಭ ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದರು.

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ 7, ಶಿವಮೊಗ್ಗದಲ್ಲಿ 8 ಪೂರ್ವ ಶಿಕ್ಷಣ ಕೇಂದ್ರಗಳನ್ನು ತೆರೆಯಲಾಗಿದೆ. ಆರಂಭವಾದ ಕೇವಲ 4 ತಿಂಗಳಲ್ಲಿ ಅನುದಾನ ನಿಲ್ಲಿಸಲಾಗಿದೆ. ಆದ್ದರಿಂದ ಕನ್ನಡ ಮತ್ತು ಉರ್ದು ಸೇರಿದಂತೆ ಸರ್ಕಾರಿ ಶಾಲೆಗಳು ಉಳಿಯಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಅಂಗನವಾಡಿಗಳನ್ನು ತೆರೆಯಬೇಕು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಮುಸ್ಲಿಂ ಮಕ್ಕಳ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಕುರಿತು ಇರುವ ಯೋಜನೆಗಳನ್ನು ಪರಿಷ್ಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.