ETV Bharat / state

ಶಿವಮೊಗ್ಗ: ರೌಡಿ ಶೀಟರ್​ ಮನೋಜ್​ ಶೆಟ್ಟಿ ಮೇಲೆ ಕುಳ್ಳ ಕಿರಣ್​ ಗ್ಯಾಂಗ್​ ಹಲ್ಲೆಗೆ ಯತ್ನ - rowdi sheater Manoj Shetty

ನಗರದಲ್ಲಿ ದುಷ್ಕರ್ಮಿಗಳ ತಂಡವೊಂದು ರೌಡಿಶೀಟರ್ ಮನೋಜ್ ಶೆಟ್ಟಿ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.

Gang attack
ಯತ್ನ
author img

By

Published : May 6, 2020, 10:52 AM IST

ಶಿವಮೊಗ್ಗ: ದುಷ್ಕರ್ಮಿಗಳ ತಂಡವೊಂದು ಮಂಗಳವಾರ ತಡರಾತ್ರಿ ರೌಡಿ ಶೀಟರ್​ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಶಿವಮೊಗ್ಗದ ಭಾರತೀ ನಗರದಲ್ಲಿ ನಡೆದಿದೆ.

ರೌಡಿಶೀಟರ್ ಮನೋಜ್ ಶೆಟ್ಟಿ (32) ಎಂಬಾತನ ಮೇಲೆ ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕುಳ್ಳ ಕಿರಣ್​ ಗ್ಯಾಂಗ್​ ಈ ಕೃತ್ಯ ಎಸಗಿದೆ.

ಹಲ್ಲೆ ನಡೆಸಿ ಗಾಡಿಯಲ್ಲಿ ಹೋಗುತ್ತಿರುವ ದುಷ್ಕರ್ಮಿಗಳು

ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮನೋಜ್ ಶೆಟ್ಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.