ETV Bharat / state

ಸತತ ನಾಲ್ಕು ಗಂಟೆ ಕಾರ್ಯಾಚರಣೆ: ಭದ್ರಾವತಿಯಲ್ಲಿ ಕೊನೆಗೂ ಸೆರೆಸಿಕ್ಕಿತು ಚಿರತೆ - Cheeta was captured by forest officials at Badravati

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವಿಐಎಸ್​ಎಲ್​ ವಸತಿ ಬಡಾವಣೆ ಬಳಿ ಬುಧವಾರ ಬೆಳಗ್ಗೆ ಚಿರತೆಯೊಂದು ಮಹಿಳೆಯ ಮೇಲೆ ಎಗರಿ ಗಾಯಗೊಳಿಸಿತ್ತು. ಸತತ ನಾಲ್ಕು ತಾಸು ಕಾರ್ಯಾಚರಣೆ ನಡೆಸಿ, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದಾರೆ.

Cheeta was captured by forest officials at Badravati
ಕೊನೆಗೂ ಬೋನ್​ಗೆ ಸೆರೆ ಸಿಕ್ಕ ಚಿರತೆ
author img

By

Published : Jun 22, 2022, 3:43 PM IST

ಶಿವಮೊಗ್ಗ: ಭದ್ರಾವತಿ ತಾಲೂಕಿನ ವಿಐಎಸ್​ಎಲ್ ವಸತಿ ಬಡಾವಣೆಯ ಜನರಲ್ಲಿ ಭಯವನ್ನುಂಟು ಮಾಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಬುಧವಾರ ಬೆಳಗ್ಗೆ ವಸತಿ ಬಡಾವಣೆಯ ಬಳಿ ಮಹಿಳೆಯ ಮೇಲೆ ಎಗರಿ ಗಾಯಗೊಳಿಸಿದ್ದ ಚಿರತೆಯು, ನಂತರ ಅಲ್ಲಿಯೇ ಮನೆಗಳ ಹಿಂಭಾಗ ಅಡಗಿ ಕುಳಿತಿತ್ತು. ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು ಮೊದಲು ಚಿರತೆ ಎಲ್ಲೂ ಹೋಗದಂತೆ, ಅದರ ಬಳಿ ಜನ ಸೇರದಂತೆ ರಸ್ತೆಗಳಿಗೆ ಬ್ಯಾರಿಕೇಟ್ ಹಾಕಿದ್ದರು.

ಕೊನೆಗೂ ಬೋನಿನಲ್ಲಿ ಸೆರೆಯಾದ ಚಿರತೆ

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪಶು ವೈದ್ಯ ವಿನಯ್​ ಅವರು ಸ್ಥಳಕ್ಕೆ ಆಗಮಿಸಿ, ಚಿರತೆ ಇರುವ ಜಾಗವನ್ನು ಗುರುತಿಸಿದರು. ಸುತ್ತ ಬಲೆಯನ್ನು ಹಾಕಿ ಚಿರತೆ ಎಲ್ಲೂ ಹೋಗದಂತೆ ಮಾಡಿದರು. ಬಳಿಕ ಅರವಳಿಕೆ ಚುಚ್ಚು ಮದ್ದನ್ನು ಗನ್​ನಲ್ಲಿ ಡಾಟ್ ಮಾಡಿದರು. ಚಿರತೆ ಕ್ಷಣ ಮಾತ್ರದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿತು. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ಅದನ್ನು ಹಿಡಿದು‌ ಬೋನಿಗೆ ಹಾಕಿದ್ದಾರೆ.

ಚಿರತೆಯು 5 ರಿಂದ 6 ವರ್ಷದ್ದು ಎನ್ನಲಾಗ್ತಿದೆ. ಚಿರತೆಯು ಸದ್ಯ ಆರೋಗ್ಯವಾಗಿದೆ. ಇದನ್ನು ಪುನಃ ಕಾಡಿಗೆ ಬಿಡುವ ಚಿಂತನೆಯಲ್ಲಿ ಅರಣ್ಯ ಇಲಾಖೆ ಇದೆ ಎನ್ನಲಾಗಿದೆ. ಸದ್ಯ ಚಿರತೆ ಕಾರ್ಯಾಚರಣೆಯು ನಾಲ್ಕು ಗಂಟೆಯಲ್ಲಿ ಅಂತ್ಯವಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಭದ್ರಾವತಿ: ವಿಐಎಸ್ಎಲ್ ವಸತಿ ಗೃಹದ ಬಳಿ ಮಹಿಳೆ ಮೇಲೆ ಎಗರಿದ ಚಿರತೆ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.