ETV Bharat / state

ದಶಕಗಳ ಹೋರಾಟಕ್ಕೆ ಸಿಕ್ಕ ಪ್ರತಿಫಲ: ಶರಾವತಿ ಮುಳುಗಡೆ ನಿರಾಶ್ರಿತರ ಬದುಕಿನಲ್ಲಿ ಬಂತು ಪವರ್

author img

By

Published : Dec 10, 2022, 1:57 PM IST

ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಮಯದಲ್ಲಿ ಮುಳುಗಡೆಯಾದ ಗ್ರಾಮದ ಜನರಿಗೆ ಪುನರ್ವಸತಿ ಕಲ್ಪಿಸುವುದಾಗಿ ಹೇಳಿ ಅರಣ್ಯ ಪ್ರದೇಶದಲ್ಲಿ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಎಂಬ ಜಾಗವನ್ನು ಸರ್ಕಾರ ನೀಡಿತ್ತಾದರೂ. ಸೌಲಭ್ಯಗಳನ್ನು ಇನ್ನೂ ಕಂಡಿಲ್ಲ. ನಾಳೆ ಈ ಗ್ರಾಮಸ್ಥರಿಗೆ ವಿದ್ಯುತ್​ ನೀಡುವ ಯೋಜನೆಗೆ ಶಂಕುಸ್ಥಾಪನೆ ನೆರವೇರುತ್ತಿದೆ.

Etv Bharatfoundation-stone-for-electricity-connection-project-in-shivamogga
Etv Bharatದಶಕಗಳ ಹೋರಾಟಕ್ಕೆ ಸಿಕ್ಕ ಪ್ರತಿಫಲ

ಶಿವಮೊಗ್ಗ: ನಾಡಿಗೆ ಬೆಳಕು ನೀಡಲು ಹೋಗಿ ಅಂದು ತಮ್ಮ ನೆಲೆ ಕಳೆದುಕೊಂಡವರ ಬದುಕಲ್ಲಿ ಬಂತು ಪವರ್. ಇದು ದಶಕಗಳ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಇದು ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶ. ಈ ಅಭಯಾರಣ್ಯ ಪ್ರದೇಶಕ್ಕೆ ಹೋಗಬೇಕಾದರೆ ಅರಣ್ಯ ಇಲಾಖೆಯವರ ಅನುಮತಿ ಪಡೆಯಬೇಕು. ಇಂತಹ ಅರಣ್ಯ ಪ್ರದೇಶದಲ್ಲಿ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಎಂಬ ಅವಳಿ ಗ್ರಾಮಗಳಿವೆ. ಈ ಗ್ರಾಮಗಳು ಶಿವಮೊಗ್ಗ ನಗರದಿಂದ 20 ಕಿಮೀ ದೂರದಲ್ಲಿದೆ.

ಈ ಗ್ರಾಮಗಳಿಗೆ ವಿದ್ಯುತ್ ಸೇರಿದಂತೆ ನಾಗರಿಕ ಸೌಲಭ್ಯಗಳಾದ ರಸ್ತೆ, ನೀರು‌ ಒದಗಿಸಬೇಕಂದು ಅವಳಿ ಗ್ರಾಮಗಳ ಗ್ರಾಮಸ್ಥರು ಕಳದ ಆರು ದಶಕಗಳಿಂದ ಹೋರಾಟ ನೆಡೆಸಿದ್ದರು. ಇದರ ಫಲವಾಗಿ ಅವಳಿ ಗ್ರಾಮಗಳಿಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸಲು ಹೈ‌ ಕೋರ್ಟ್ ಆದೇಶ ನೀಡಿದೆ. ಇದಕ್ಕಾಗಿ ಸರ್ಕಾರ ಸುಮಾರು 3.60 ಕೋಟಿ ರೂ ವೆಚ್ಚದಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲು ತೀರ್ಮಾನ ಮಾಡಿದೆ.

ಶರಾವತಿ ಹಿನ್ನೀರಲ್ಲಿ ಮುಳುಗಡೆಯಾದ ಸಂತ್ರಸ್ತರ ಬದುಕಿನಲ್ಲಿ ಬಂತು ಪವರ್

ನಾಡಿಗೆ ಬೆಳಗು ನೀಡಲು ಜನರನ್ನು ಕತ್ತಲಲ್ಲಿಟ್ಟ ಸರ್ಕಾರಗಳು: ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆ ಮಾಡಬೇಕೆಂಬ ಬಯಕೆಯಿಂದ ಅಂದು ಮೈಸೂರು ಸರ್ಕಾರ ನಿರ್ಧಾರ ಮಾಡಿತು. ಇದಕ್ಕಾಗಿ 1960 ರಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಪ್ರಾರಂಭಿಸುತ್ತಿದ್ದಂತಯೇ ಮುಳುಗಡೆಯಾದ ಗ್ರಾಮದವರನ್ನು ನಗರ ಪ್ರದೇಶದಲ್ಲಿನ ಕಸ ತುಂಬಿ‌ಕೊಂಡು ಬರುವಂತೆ ಕರೆ ತಂದು ದಟ್ಡ ಕಾನನದ ನಡುವೆ ಬಿಟ್ಟು ಹೋದರು. ಮುಳುಗಡೆಯಿಂದ ಕಳೆದು ಕೊಂಡ ಜಮೀನು ಹಾಗೂ ಮನೆಗೆ ಸರಿಸಮಾನವಾಗಿ ಭೂಮಿಯನ್ನು ನೀಡುವುದಾಗಿ ಕರೆ ತಂದು ಬಿಟ್ಟು ಹೋಗಿದ್ದು ಬಿಟ್ಟರೆ, ಬೇರೆ ಯಾವ ಸೌಲಭ್ಯವನ್ನು ನೀಡಲಿಲ್ಲ.

ಅಂದು ಕಾಡು ಪ್ರಾಣಿಗಳ ಹಾವಳಿಯ ನಡುವೆ ನೆಲೆ ನಿರ್ಮಾಣ ಮಾಡಿಕೊಂಡು, ಕೃಷಿ ಭೂಮಿ ಮಾಡಿಕೊಂಡ ಜನರ ಜೀವನ ಒಂದು ಸಾಹಸ. ನಂತರ ಹೋರಾಟ ಪ್ರಜ್ಞೆ ಬೆಳೆದು ತಮಗೆ ನಾಗರಿಕ ಸೌಲಭ್ಯ ನೀಡಿ ಎಂದು ಪ್ರತಿಭಟನೆ ನಡೆಸಿದ್ದರು. ಇದರ ಫಲವಾಗಿ ಇವರಿಗೆ 1984 ರಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲು ಸರ್ಕಾರ ಅನುಮತಿ ನೀಡಿತ್ತು. ಇದರಿಂದ ಸರ್ವೆ ನಡೆಸಿ,‌ ವಿದ್ಯುತ್ ಕಂಬ, ಟಿಸಿಯನ್ನು ಹಾಕುವಾಗ ಅರಣ್ಯ ಇಲಾಖೆಯವರು ಇದು ಅಭಯಾರಣ್ಯವಾದ ಕಾರಣ ವಿದ್ಯುತ್ ಸಂಪರ್ಕ ನೀಡಲು ಆಗಲ್ಲ ಎಂದು ಹೇಳಿದಾಗ ಜನ ನಿರಾಶೆ ಅನುಭವಿಸಿದ್ದರು.‌

ಹೈಕೋರ್ಟ್ ಆದೇಶ ಮೇರೆಗೆ ವಿದ್ಯುತ್ ಸಂಪರ್ಕ: ದಶಕಗಳ ಹೋರಾಟದ ಫಲವಾಗಿ ಈಗ ಎರಡು ಗ್ರಾಮಗಳಿಗೆ ವಿದ್ಯುತ್ ನೀಡುವಂತೆ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರವು 3.60 ಕೋಟಿ ರೂನಲ್ಲಿ ವನ್ಯಜೀವಿಗಳಿಗೆ ಅನಾನುಕೂಲವಾಗದಂತೆ ಭೂಗತ ಕೇಬಲ್​ಗೆ ಅನುನತಿ ನೀಡಿದೆ. ಸುಮಾರು‌11.5 ಕಿಮೀ ದೂರ ಭೂಗತ ಕೇಬಲ್ ಅಳವಡಿಸುವ ಯೋಜನೆಗೆ ನಾಳೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ಶಂಕುಸ್ಥಾಪನೆ ನಡೆಯಲಿದೆ.

ನಮ್ಮನ್ನು ಲಾರಿಯಲ್ಲಿ ಕಸ ತುಂಬಿದ ಹಾಗೆ ತುಂಬಿ ಕೊಂಡು ಬಂದು ಬಿಟ್ಟು ಹೋಗಿದ್ದರು. ನಾವು ಆಗ ಸಣ್ಣ ವಯಸ್ಸಿನವರು, ಅಂದಿನಿಂದ ನಾವು ಬೆಳಕು ಇಲ್ಲದೆ ಕತ್ತಲೆಯಲ್ಲಿಯೇ ಇದ್ದೇವೆ. ಮೂಲಸೌಕರ್ಯಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದೇವೆ. ಈಗ ವಿದ್ಯುತ್ ಸಂಪರ್ಕ ಬರುತ್ತಿದೆ. ಈಗ ನಮ್ಮ ಮೊಮ್ಮಮ್ಮಕ್ಕಳ ಕಾಲವಧಿಯಲ್ಲಿ ವಿದ್ಯುತ್ ನೋಡುತ್ತಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಹಾಲಪ್ಪ.

ಇದನ್ನೂ ಓದಿ: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಹೊಣೆ ನನ್ನದು ಮಾಜಿ ಸಿಎಂ ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.