ETV Bharat / state

ಯಾವ ಆರ್​ಎಸ್​ಎಸ್​ನವರೂ ಗೂಂಡಾಗಳ ಬೆದರಿಕೆಗೆ ಹೆದರಲ್ಲ: ಕೆ ಎಸ್ ಈಶ್ವರಪ್ಪ ಟಾಂಗ್​ - ಕಲ್ಬುರ್ಗಿಯಲ್ಲಿ ಓಬಿಸಿ ಸಮಾವೇಶ

ಪಿಎಫ್ಐ ರಾತ್ರಿ ವೇಳೆ ಹೇಡಿಗಳ ತರ 'ನಾವು ಬರುತ್ತೇವೆ, ಚಡ್ಡಿಗಳಿಗೆ ಉತ್ತರ ಕೊಡುತ್ತೇವೆ' ಎಂದು ರಸ್ತೆ ಮೇಲೆ ಬರೆದಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅವರು ತಿಳಿಸಿದ್ದಾರೆ.

ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ
ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ
author img

By

Published : Oct 4, 2022, 3:15 PM IST

ಶಿವಮೊಗ್ಗ: ಪಿಎಫ್ಐ ಬ್ಯಾನ್ ಆದ ಮೇಲೆ ಅವರು ರಸ್ತೆ ಮೇಲೆ 'ನಾವು ಮತ್ತೆ ಬರುತ್ತೇವೆ, ಚಡ್ಡಿಗಳಿಗೆ ಉತ್ತರ ಕೊಡುತ್ತೇವೆ' ಅಂತ ಬರೆದಿದ್ದಾರೆ. ಯಾವ ಆರ್​ಎಸ್​ಎಸ್​ನವರು ಇವರ ಗೂಂಡಾ ಬರಹಕ್ಕೆ ಹೆದರಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಿಎಫ್ಐ ಬರಹಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅವರು ಮಾತನಾಡಿದರು

ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪಿಎಫ್ಐ ನವರು ರಾತ್ರಿ ವೇಳೆ ಹೇಡಿಗಳ ತರ ಬರೆದಿದ್ದಾರೆ. ಇದಕ್ಕೆ ನಾವು ಬಗ್ಗಲ್ಲ. ಪಿಎಫ್​ಐ ಜೊತೆ ಸೇರಿಕೊಂಡು ರಾಷ್ಟ್ರದ್ರೋಹಿ ಚಟುವಟಿಕೆ ನಡೆಸಿ ಅರೆಸ್ಟ್ ಆಗಿ ಜೈಲಿಗೆ ಹೋಗಿ ತಮ್ಮ ಜೀವನವನ್ನೆ ಕಳೆದುಕೊಳ್ಳುತ್ತಾರೆ. ದಾರಿ ತಪ್ಪಿರುವ ಮುಸ್ಲಿಂ ಗೂಂಡಾಗಳು ಮತ್ತೆ ರಾಷ್ಟ್ರೀಯ ವಾಹಿನಿ ಕಡೆ ಬರಬೇಕು ಎಂದು ಮುಸ್ಲಿಂ ಹಿರಿಯರು ಬುದ್ದಿ ಹೇಳಬೇಕು ಎಂದು ಮನವಿ ಮಾಡಿದರು.

ಮುಸ್ಲಿಂರಲ್ಲಿ ನಡೆಯುವ ಇಂತಹ ಚಟುವಟಿಕೆಗಳಿಗೆ ದೇಶ ಭಕ್ತ ಮುಸ್ಲಿಂರಿಗೆ ಬೇಸರ ತಂದಿದೆ. ಪಿಎಫ್​ಐ ನವರು ರಾಷ್ಟ್ರದ್ರೋಹ ನಡೆಸಿ ಈಗ ಬ್ಯಾನ್ ಆಗಿ ತಪ್ಪು ಮಾಡಿದ್ದಾರೆ. ಈ ಒಂದು ಕುಮ್ಮಕ್ಕಿನಿಂದ ಪಿಎಫ್ಐಗೆ ಯಾರ್ಯಾರು ಬೆಂಬಲ ನೀಡಿದ್ದರೂ ಅವರಿಂದ ಯುವಕರೆಲ್ಲ ಹಾಳಾಗಿ ಹೋಗಿದ್ದಾರೆ. ಅವರೆನ್ನೆಲ್ಲಾ ಇವತ್ತು ಅರೆಸ್ಟ್ ಮಾಡಲಾಗಿದೆ. ಇದನ್ನು ಒಬ್ಬ ಕಾಂಗ್ರೆಸ್ ನವರು ಸಹ ಖಂಡಿಸಿಲ್ಲ.

ಪಿಎಫ್ಐ ಕಾಂಗ್ರೆಸ್ ಬೆಂಬಲದಿಂದ ರಾಷ್ಟ್ರದ್ರೋಹಿ ಚಟುವಟಿಕೆ ನಡೆಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಪಿಎಫ್​ಐ ಬೇರೆ ಯಾವುದೇ ಹೆಸರಿನಲ್ಲಿ ಬಂದ್ರೆ ಅವರ ಸೊಂಟ ಮುರಿಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮಾಡಲಿದ್ದಾರೆ ಎಂದರು.

ಮೇಸ್ತಾ ಪ್ರಕರಣ ಮರು ತನಿಖೆಗೆ ಆಗ್ರಹ: ಪರೇಸ್ ಮೆಸ್ತಾ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ರಾಜ್ಯದ ಸಿಎಂ ಬೊಮ್ಮಾಯಿ ಅವರನ್ನು ಕೇಂದ್ರದ ನಾಯಕರಿಗೆ ಮನವಿ ಮಾಡುತ್ತೇವೆ. ಪರೇಸ್ ಮೇಸ್ತಾ ಕೊಲೆ ನಡೆಸಲಾಗಿದೆ ಎಂದು ಅವರ ಕುಟುಂಬ ಹೇಳುತ್ತಿರುವುದು ಸರಿಯಾಗಿದೆ. ಇದರಿಂದ ಮರು ತನಿಖೆಗೆ ಮನವಿ ಮಾಡುತ್ತೇವೆ ಎಂದರು.

ಕಲ್ಬುರ್ಗಿಯಲ್ಲಿ ಒಬಿಸಿ ಸಮಾವೇಶ: ಅಕ್ಟೋಬರ್​ 30 ರಂದು ಬಿಜೆಪಿಯಿಂದ ಒಬಿಸಿ ಅವರ ದೊಡ್ಡ ಸಮಾವೇಶ ನಡೆಸಲಾಗುತ್ತದೆ. ಸುಮಾರು 5 ಲಕ್ಷ ಒಬಿಸಿಯವರು ಸೇರಲಿದ್ದಾರೆ. ಇದಕ್ಕಾಗಿ ಐದು ತಂಡಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಖಂಡಿತಾ ಈ ಸಮಾವೇಶ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಓದಿ: ಪರೇಶ್ ಮೇಸ್ತ ಪ್ರಕರಣ: ಬಿಜೆಪಿ ನಾಯಕರು ಮೀನುಗಾರರ, ಸಾರ್ವಜನಿಕರ ಕ್ಷಮೆಯಾಚಿಸಲಿ-ಯುಟಿ‌ ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.