ETV Bharat / state

ಶಿವಮೊಗ್ಗದ ಇಬ್ಬರು ಮಾಜಿ ತಹಶೀಲ್ದಾರ್ ಸೇರಿ ಐವರ ವಿರುದ್ಧ ಎಫ್ಐಆರ್ - Shivamogga Tahsildars

ಜಾತಿ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸದೇ ಪ್ರಮಾಣ ಪತ್ರ ವಿತರಿಸಿದ ಆರೋಪದ ಮೇಲೆ ತಹಶೀಲ್ದಾರ್​ಗಳಾದ ಮಂಜುನಾಥ್ ಮತ್ತು ಕೊಟ್ರೇಶ್, ರೆವಿನ್ಯೂ ಇನ್​ಸ್ಪೆಕ್ಟರ್ ವಿಜಯಕುಮಾರ್, ಗ್ರಾಮ ಲೆಕ್ಕಿಗ ಸುರೇಶ್ ಅವರ ವಿರುದ್ಧ ಸಹ ಪ್ರಕರಣ ದಾಖಲು ಮಾಡಲಾಗಿದೆ.

shivamogga
ಜಯನಗರ ಪೊಲೀಸ್ ಠಾಣೆ
author img

By

Published : Sep 21, 2021, 7:22 AM IST

ಶಿವಮೊಗ್ಗ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸೂಚನೆ ಮೇರೆಗೆ ಶಿವಮೊಗ್ಗ ತಾಲೂಕಿನ ಇಬ್ಬರು ಮಾಜಿ ತಹಶೀಲ್ದಾರ್​ಗಳು, ರೆವಿನ್ಯೂ ಇನ್​ಸ್ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿ ಮತ್ತು ಓರ್ವ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಉದ್ಯೋಗಕ್ಕಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಪ್ರಕರಣ ದಾಖಲು ಮಾಡಲಾಗಿದೆ.

shivamogga
ತಹಶೀಲ್ದಾರ್ ಸೇರಿ ಐವರ ವಿರುದ್ಧ ಎಫ್ಐಆರ್

ಪ್ರಕರಣದ ವಿವರ: ಕೃಷ್ಣ ಎಂಬುವವರು ಕೆಎಸ್​ಆರ್​ಟಿಸಿ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತಾವು ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಇದರ ಸಿಂಧುತ್ವ ಪರಿಶೀಲನೆ ನಡೆಸಿದಾಗ ಜಾತಿ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಇರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಚಾಲಕ ಕೃಷ್ಣ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇನ್ನು, ಜಾತಿ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸದೇ ಪ್ರಮಾಣ ಪತ್ರ ವಿತರಿಸಿದ ಆರೋಪದ ಮೇಲೆ ತಹಶೀಲ್ದಾರ್​ಗಳಾದ ಮಂಜುನಾಥ್ ಮತ್ತು ಕೊಟ್ರೇಶ್, ರೆವಿನ್ಯೂ ಇನ್​ಸ್ಪೆಕ್ಟರ್ ವಿಜಯಕುಮಾರ್, ಗ್ರಾಮ ಲೆಕ್ಕಿಗ ಸುರೇಶ್ ಅವರ ವಿರುದ್ಧ ಸಹ ಪ್ರಕರಣ ದಾಖಲು ಮಾಡಲಾಗಿದೆ.

2013ರಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸೂಚನೆ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.