ETV Bharat / state

ಲಾಕ್​ಡೌನ್​​​​ನಲ್ಲಿ ಸಿಲುಕಿ ಒದ್ದಾಡಿ ತಾಯಿ ಮಡಿಲು ಸೇರಿದ ಕರುಳ ಬಳ್ಳಿ... ವಾರಿಯರ್ಸ್​​ಗೆ ಸೆಲ್ಯೂಟ್​​ - ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದ ಬಾಲಕಿ

ಹೃದಯ ಸಂಬಂಧಿ ಚಿಕಿತ್ಸೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದ 5 ವರ್ಷದ ಬಾಲಕಿಯೋರ್ವಳು ಲಾಕ್​ಡೌನ್​ ಮಧ್ಯೆ ಸಿಲುಕಿಕೊಂಡು ನಿತ್ಯ ತನ್ನ ತಾಯಿಗಾಗಿ ಹಂಬಲಿಸುತ್ತಿದ್ದಳು. ಬಾಲಕಿಯ ನೋವನ್ನು ಅರ್ಥೈಸಿಕೊಂಡ ಅಧಿಕಾರಿಗಳು ಇದೀಗ ಆಕೆಯನ್ನು ತಾಯಿ ಬಳಿ ಸೇರಿಸುವ ಕೆಲಸ ಮಾಡಿದ್ದಾರೆ

Finally, Baby girl reached the home
ವರಿಗೆ ಮರಳಿದ ಕರುಳ ಕುಡಿ
author img

By

Published : Apr 27, 2020, 9:05 PM IST

ಶಿವಮೊಗ್ಗ: ಕೊರೊನಾ ಲಾಕ್​ಡೌನ್​ನಿಂದಾಗಿ ಶಿವಮೊಗ್ಗದ 5 ವರ್ಷದ ಹೆಣ್ಣು ಮಗುವೊಂದು ಬೆಂಗಳೂರಿನಲ್ಲಿ ಸಿಲುಕಿಕೊಂಡು ತನ್ನ ತಾಯಿಯನ್ನು ನೋಡಲು ಪ್ರತಿ ನಿತ್ಯ ಹಂಬಲಿಸುತ್ತಿತ್ತು. ತನ್ನ ತಾಯಿ ನೋಡದೇ ಅಳುತ್ತಿದ್ದ ಮಗುವನ್ನು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳ ಸಹಾಯದಿಂದ ಶಿವಮೊಗ್ಗದಲ್ಲಿರುವ ತಾಯಿಯ ಬಳಿಗೆ ಸೇರಿಸಲಾಗಿದೆ.

5 ವರ್ಷದ ದರ್ಶಿನಿಯ ತಾಯಿ ನಳಿನಿ ಶಿವಮೊಗ್ಗದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಗಳು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿನ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಲಾಕ್​ಡೌನ್ ನಲ್ಲಿ ಸಿಲುಕಿ‌ಕೊಂಡಿದ್ದಳು. ತಾಯಿಯನ್ನು ನೋಡದೇ ಚಟಪಡಿಸುತ್ತಿದ್ದ ದರ್ಶಿನಿ, ನನಗೆ ಅಮ್ಮ ಬೇಕು ಎಂದು ನಿರಂತರವಾಗಿ ಪೋನ್ ಮಾಡಿ ಅಳುತ್ತಿದ್ದಳು. ಹೃದಯ ಸಂಬಂಧಿ ಕಾಯಿಲೆ ಇರುವ ಮಗು ಹೆಚ್ಚು ಅಳಬಾರದು, ಈ ರೀತಿ ಅಳತೊಡಗಿದೆರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವೈದ್ಯರು ತಿಳಿಸಿದ್ದರು.

ತವರಿಗೆ ಮರಳಿದ ಕರುಳ ಕುಡಿ

ಈ ವಿಷಯ ತಿಳಿದ ನಳಿನಿ, ಬೆಂಗಳೂರಿನ ಡಿಸಿ ಶಿವಮೂರ್ತಿರವರನ್ನು ಸಂಪರ್ಕಿಸಿ ತನ್ನ ಮಗುವಿನ ಅಳಲನ್ನು ತೋಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕೊರೊನಾ ವಾರಿಯರ್ಸ್ ಮುಖ್ಯಸ್ಥರಾದ ಮಣಿವಣ್ಣನ್ ಅವರ ಮೂಲಕ ಬಾಲಕಿಯನ್ನು ಆಕೆಯ ತಾಯಿಯ ಬಳಿ ಸೇರಿಸಲು ವ್ಯವಸ್ಥೆ ಕಲ್ಪಿಸಿದ್ದರು.

ಸಾರ್ವಜನಿಕ ಮತ್ತು ಸಂಪರ್ಕ ಇಲಾಖೆಯ ವಾರಿಯರ್ಸ್​ಗಳಾದ ಮಯೂರ್ ಹಾಗೂ ಭರತ್ ಅವರ ಜೊತೆ ಮಣಿವಣ್ಣನ್ ಸ್ವತಃ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ದರ್ಶಿನಿಯನ್ನು ಕರೆತಂದು ತಾಯಿ ಮಡಿಲಿಗೆ ಸೇರಿಸಿದ್ದಾರೆ.

ತಾಯಿಯನ್ನು ಕಂಡ ದರ್ಶಿನಿ ಗೂಡು‌‌ ಸೇರಿದ ಪಕ್ಷಿಯಂತೆ ಕುಣಿದು ಕುಪ್ಪಳಿಸಿದ್ದಾಳೆ. ವಾರಿಯರ್ಸ್ ಮಯೂರ್ ಹಾಗೂ ಭರತ್ ತಾಯಿ ಮಗಳನ್ನು ಒಂದು ಮಾಡಿದ ಖುಷಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.