ETV Bharat / state

ಶಿವಮೊಗ್ಗ ಚಾಕು ಇರಿತ ಪ್ರಕರಣ; 9 ಆರೋಪಿಗಳ ಬಂಧನ - ಪವನ್​ ಮತ್ತು ಕಿರಣ್​

ಶಿವಮೊಗ್ಗದಲ್ಲಿ ಸ್ನೇಹಿತರ ಗುಂಪಿನ ಜಗಳದಲ್ಲಿ ಐವರಿಗೆ ಚಾಕು ಇರಿದ ಪ್ರಕರಣದಲ್ಲಿ 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎಸ್ಪಿ ಕಚೇರಿ
ಎಸ್ಪಿ ಕಚೇರಿ
author img

By ETV Bharat Karnataka Team

Published : Sep 24, 2023, 10:27 AM IST

Updated : Sep 24, 2023, 12:56 PM IST

ಶಿವಮೊಗ್ಗ: ನಗರದ ಆಲ್ಕೋಳ ವೃತ್ತದ ಎಲ್​ಐಸಿ ಭವನದ ಹಿಂದಿನ ಜಾಗದಲ್ಲಿ ಎರಡು ಗುಂಪುಗಳ ನಡುವೆ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸೆಪ್ಟೆಂಬರ್​ 21ರ ರಾತ್ರಿ ಗಲಾಟೆ ನಡೆದು, ಐವರಿಗೆ ಚಾಕು ಇರಿಯಲಾಗಿತ್ತು. ಘಟನೆಯಲ್ಲಿ ಭಾಗಿಯಾಗಿದ್ದ 9 ಜನರ ವಿರುದ್ದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪವನ್​ ಮತ್ತು ಕಿರಣ್​ ಎಂಬ ಸ್ನೇಹಿತರ ಗುಂಪುಗಳ ನಡುವೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿತ್ತು. ಸೆ. 21ರಂದು ಮತ್ತೆ ಇಬ್ಬರ ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ. ಪವನ್ ಗ್ಯಾಂಗ್ ಕಿರಣ್ ಮತ್ತು ಆತನ ಸ್ನೇಹಿತರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದರು. ಇದೀಗ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಪವನ್ ಮತ್ತು ಗ್ಯಾಂಗ್ ಅ​ನ್ನು ಪೊಲೀಸರು ಬಂಧಿಸಿದ್ದಾರೆ. ಪವನ್, ಮಂಜುನಾಥ್, ರಂಗನಾಥ್, ಚಂದನ್, ಮನೋಜ್, ಶ್ರೀನಿವಾಸ, ರಾಜಶೇಖರ್, ವಿಶ್ಬನಂದನ್ ಹಾಗೂ ಶ್ಯಾನ್ ರಾಬಿನ್ ಬಂಧಿತರು.

ಚಾಕು ಇರಿತಕ್ಕೊಳಗಾದವರ ಪೈಕಿ ಓರ್ವನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಆತನನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಂಗಳೂರಿನಲ್ಲಿ ಚೂರಿ ಇರಿತ (ಇತ್ತೀಚಿನ ಘಟನೆಗಳು): ಮಂಗಳೂರು ನಗರದ ಹೊರವಲಯದ ಬಜ್ಪೆಯಲ್ಲಿ ಇಬ್ಬರು ಯುವಕರ ಮೇಲೆ ತಂಡವೊಂದು ದಾಳಿ ಮಾಡಿ ಓರ್ವನಿಗೆ ಚೂರಿ ಇರಿದಿದ್ದರು. ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು. ಕೈಕಂಬದ ಪುನೀತ್ , ಬಜ್ಪೆ ಕಳವಾರು ನಿವಾಸಿ ಪ್ರಶಾಂತ್ ಯಾನೆ ಪಚ್ಚು, ಧನರಾಜ್, ಯಜ್ಞೆಶ್ ಬಂಧಿತರು. ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ ಇರಿತಕ್ಕೊಳಗಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಬ್ದುಲ್ ಸಫ್ವಾನ್ ಮತ್ತು ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬವರು ಕರಂಬಾರಿನಿಂದ ಬಜ್ಪೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬಸ್ತಿ ಬಳಿ ಅಡ್ಡಗಟ್ಟಿದ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಿದ್ದರು.

ಧಾರವಾಡದಲ್ಲಿ ಮೂವರಿಗೆ ಚೂರಿ ಇರಿತ: ಮೂವರ ಮೇಲೆ ಏಕಕಾಲದಲ್ಲಿ ಚಾಕು ಇರಿದ ಘಟನೆ ಧಾರವಾಡ ನಗರದ ಎಲ್ಐಸಿ ಕಚೇರಿ ಬಳಿ ಆಗಸ್ಟ್​ 11 ರಂದು ನಡೆದಿತ್ತು. ಘಟನೆಯಲ್ಲಿ ಕಿರಣ, ಆಸೀಫ್ ಮತ್ತು ಶಾನವಾಜ್​ ಗಾಯಗೊಂಡಿದ್ದರು. ಮೂವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಯುವತಿ‌ ವಿಚಾರವಾಗಿ ಚಾಕು ಇರಿತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು. ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ನಿವೃತ್ತ ಎಸ್​ಬಿಐ ಮ್ಯಾನೇಜರ್​ಗೆ ಚಾಕು ಇರಿತ: ಇನ್ನೊಂದೆಡೆ, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ನಿವೃತ್ತ ಮ್ಯಾನೇಜರ್​ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಗರದ ಡಿಸಿ ಆಫೀಸ್ ರಸ್ತೆಯಲ್ಲಿ (ಆಗಸ್ಟ್​ 10-2023) ನಡೆದಿತ್ತು. ಜಯರಾಮ್ ಕೊಲ್ಲಾಪೂರ ಅವರು ಚಾಕು ಇರಿತಕ್ಕೊಳಗಾದ ನಿವೃತ್ತ ಬ್ಯಾಂಕ್​ ಮ್ಯಾನೇಜರ್. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ರಾಯಚೂರು: ಕುಡಿದ ಮತ್ತಿನಲ್ಲಿ ಪತ್ನಿ ಕೊಂದು ಪತಿ ಆತ್ಮಹತ್ಯೆ

Last Updated : Sep 24, 2023, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.