ETV Bharat / state

ಗೋ ಬ್ಯಾಕ್ ಟ್ರಂಪ್​..! ಶಿವಮೊಗ್ಗ ರೈತರಿಂದ ಪ್ರತಿಭಟನೆ - ಶಿವಮೊಗ್ಗ ರೈತರಿಂದ ಪ್ರತಿಭಟನೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗೋ ಬ್ಯಾಕ್ ಟ್ರಂಪ್ ಎಂದು ನಗರದ ಗಾಂಧಿ ಬಜಾರ್​ನಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.

farmers-protest
ಶಿವಮೊಗ್ಗ ರೈತರಿಂದ ಪ್ರತಿಭಟನೆ
author img

By

Published : Feb 24, 2020, 5:56 PM IST

ಶಿವಮೊಗ್ಗ: ಭಾರತದ ಆಹಾರ ಸಾರ್ವಭೌಮತ್ವ ಮತ್ತು ದೇಶಿಯ ಮಾರುಕಟ್ಟೆನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗೋ ಬ್ಯಾಕ್ ಟ್ರಂಪ್ ಎಂದು ನಗರದ ಗಾಂಧೀ ಬಜಾರ್​ನಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿ ದೇಶದ ರೈತರ ಜೀವನದ ಮೇಲೆ ಹೊಡೆತ ಕೊಡುವಂತಹ ಒಪ್ಪಂದ ಮಾಡಿ ಕೊಳ್ಳುತ್ತಾರೆ ಎಂಬ ಮಾಹಿತಿಯ ಮೇರೆಗೆ ರೈತ ಸಂಘ ಪ್ರತಿಭಟನೆ ಆರಂಭಿಸಿದೆ. ಟ್ರಂಪ್ ಆಗಮನಕ್ಕೂ ಮುನ್ನ ಅಮೆರಿಕ ದೇಶದ ವಸ್ತುಗಳ ಮೇಲೆ ಭಾರತ ಹೆಚ್ಚು ತೆರಿಗೆ ವಿಧಿಸುತ್ತಿರುವುದನ್ನು ಕಡಿಮೆ ಮಾಡಲು ಭಾರತಕ್ಕೆ ಹೋಗುತ್ತಿದ್ದೇನೆ ಎಂದು ಟ್ರಂಪ್​ ಹೇಳಿಕೆ ಕೊಟ್ಟಿದ್ದರು, ಇದರಿಂದ ಭಾರತದ ರೈತರು ಆಂತಕ ಪಡುವಂತಾಗಿದೆ.

ಶಿವಮೊಗ್ಗ ರೈತರಿಂದ ಪ್ರತಿಭಟನೆ

ದೇಶಿಯ ಉದ್ದಿಮೆಗಳು ಪ್ರಮುಖವಾಗಿ ಹೈನುಗಾರಿಕೆ ನೆಲ‌ ಕಚ್ಚುತ್ತದೆ ಇದರಿಂದ ಮುಂದಿನ ದಿನಗಳಲ್ಲಿ ರೈತರ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ನಮ್ಮ ಪ್ರಧಾನ ಮಂತ್ರಿಗಳು ದೇಶದ ರೈತರ ಹಿತದೃಷ್ಟಿಯಿಂದ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.