ETV Bharat / state

ಹಾಟ್ಸನ್‌ನಿಂದ ಹಾಲು ಉತ್ಪಾದಕರಿಗೆ ವಂಚನೆ ಆರೋಪ: ರೈತ ಸಂಘ ಪ್ರತಿಭಟನೆ - Hatsan milk dairy cheeting news

ಶಿಕಾರಿಪುರ ತಾಲೂಕು ಬೆಲವಂತನ ಕೊಪ್ಪ ಗ್ರಾಮದಲ್ಲಿ ಹಾಟ್ಸನ್‌ ಕಂಪನಿಯು ರೈತರಿಂದ ಹಾಲು ಪಡೆದು ಹಣ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಲಾಗಿದೆ.

protest
ರೈತ ಸಂಘ ಪ್ರತಿಭಟನೆ
author img

By

Published : Jan 15, 2020, 8:07 PM IST

ಶಿವಮೊಗ್ಗ: ಖಾಸಗಿ ಹಾಲು ಮಾರಾಟ ಕಂಪನಿ ಹಾಟ್ಸನ್ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಲಿನ ಡೈರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.

ರೈತ ಸಂಘ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಬೆಲವಂತನ ಕೊಪ್ಪ ಗ್ರಾಮದಲ್ಲಿ ಹಾಟ್ಸನ್‌ ಕಂಪನಿಯು ಈ ಭಾಗದ ರೈತರಿಂದ ಹಾಲು ಪಡೆದು ಹಣ ನೀಡದೆ ಮೋಸ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಈ ಕಂಪನಿಯು ಈ ಭಾಗದ ರೈತರಿಗೆ ಹೆಚ್ಚಿನ ದರ ನೀಡುವುದಾಗಿ ನಂಬಿಸಿ, ಹಾಲು ಹಾಕಿಸಿಕೊಳ್ತಿತ್ತು. ಕಳೆದ ಒಂದೂವರೆ ತಿಂಗಳಿನಿಂದ ರೈತರು ನೀಡುವ ಹಾಲಿನಲ್ಲಿ ಎಂಎಸ್ಪಿ ಕಡಿಮೆ ಇದೆ ಎಂದು ಹೇಳಿ ಲೀಟರ್ ಹಾಲಿಗೆ ಕೇವಲ‌ 4 ರೂ ನೀಡುತ್ತಿದ್ದು ಎಂದು ರೈತರು ಆರೋಪಿಸಿದ್ದಾರೆ.

ಈ ವಿಚಾರವನ್ನು ಹಾಟ್ಸನ್ ಕಂಪನಿಯ ಅಧಿಕಾರಿಗಳು ಮೇಲಧಿಕಾರಿಗಳಿಗೆ ತಿಳಿಸಿ, ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ‌ ಮೇರೆಗೆ ರೈತ ಸಂಘ ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆದಿದೆ.

Intro:ಹಾಟ್ಸನ್ ನಿಂದ ಹಾಲು ಉತ್ಪಾದಕರಿಗೆ ದೋಖಾ: ರೈತ ಸಂಘ ಪ್ರತಿಭಟನೆ.

ಶಿವಮೊಗ್ಗ: ಖಾಸಗಿ ಹಾಲು ಮಾರಾಟ ಕಂಪನಿ ಹಾಟ್ಸನ್ ನಿಂದ ರೈತರಿಗೆ ಭಾರಿ ದೋಖಾ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಲಿನ ಡೈರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಬೆಲವಂತನ ಕೊಪ್ಪ ಗ್ರಾಮದಲ್ಲಿ ಹಾಟ್ಸನ್‌ ಕಂಪನಿಯು ಈ ಭಾಗದ ರೈತರಿಂದ ಹಾಲು ಪಡೆದು ಹಣ ನೀಡದೆ ಮೋಸ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಹಾಟ್ಸನ್ ಖಾಸಗಿ ಕಂಪನಿಯು ಈ ಭಾಗದ ರೈತರಿಗೆ ಹೆಚ್ಚಿನ ದರ ನೀಡುವುದಾಗಿ ನಂಬಿಸಿ, ಹಾಲನ್ನು ಹಾಕಿಸಿ ಕೊಳ್ತಾ ಇತ್ತು. ಕಳೆದ ಒಂದೂವರೆ ತಿಂಗಳಿನಿಂದ ರೈತರು ನೀಡುವ ಹಾಲಿನಲ್ಲಿ ಎಂಎಸ್ ಪಿ ಕಡಿಮೆ ಇದೆ ಎಂದು ಹೇಳಿ ಲೀಟರ್ ಹಾಲಿಗೆ ಕೇವಲ‌ 4 ರೂ ನೀಡುತ್ತಿದೆ.Body:ಇದು ರೈತರನ್ನು ಕಂಗೆಡಿಸಿದೆ. ಶಿಮುಲ್ ರವರಿಗೆ ಪ್ರತಿ ಲೀಟರ್ ಹಾಲಿಗೆ 32 ರೂ ನೀಡುತ್ತಿದ್ದಾರೆ. ಆದರೆ ಹಾಟ್ಸನ್ ರವರು ಸರಿಯಾಗಿ ಹಣವನ್ನು ನೀಡದೆ, ಹಾಲನ್ನು ವಾಪಸ್ ಕಳುಹಿಸದೆ ಹಾಲನ್ನು ಪಡೆದು ಮಾರಾಟ ಮಾಡುತ್ತಿದ್ದಾರೆ. ಹಾಲು ಹಾಕಿದವರಿಗೆ ಮಾತ್ರ ಎಂಎಸ್ ಪಿ ಹೆಸರಿನಲ್ಲಿ ದೋಖಾ ಮಾಡಲಾಗುತ್ತಿದೆ. ಇದು ಹಾಲು ಉತ್ಪಾದಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ರೈತ ಸಂಘದ ನೆರವಿನಿಂದ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.Conclusion: ಇದು ಹಾಲು ಉತ್ಪಾದಕ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ರೈತ ಸಂಘದ ನೆರವಿನಿಂದ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಾಟ್ಸನ್ ಕಂಪನಿಯವ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಿಳಿಸಿ, ಸಮಸ್ಯೆ ಪರಿಹರಿಸಿವುದಾಗಿ ತಿಳಿಸಿದ‌ ಮೇರೆಗೆ ರೈತ ಸಂಗ ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆದಿದೆ. ತಕ್ಷಣ ಮೇಲಾಧಿಕಾರಿಗಳು ಸ್ಪಂದಿಸದೆ ಹೋದ್ರೆ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ಶಿರಾಳಕೊಪ್ಪ ರೈತ ಸಂಘ ನೀಡಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.