ಶಿವಮೊಗ್ಗ: ನಾಡಹಬ್ಬ ದಸರಾ ನಿಮಿತ್ತ ಇಂದು ನಗರದಲ್ಲಿ ರೈತ ದಸರಾ ಹಬ್ಬ ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ಖಾಸಗಿ ಬಸ್ ನಿಲ್ದಾಣದಿಂದ ಎತ್ತಿನಗಾಡಿ, ಟಿಲ್ಲರ್, ಟ್ರ್ಯಾಕ್ಟರ್ಗಳ ಮೆರವಣಿಗೆಯನ್ನು ರೈತರು ಅದ್ದೂರಿಯಾಗಿ ನಡೆಸಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತಕ್ಕೆ ಮಹಾನಗರ ಪಾಲಿಕೆ ಸದಸ್ಯರು ಕುಣಿದು ಕುಪ್ಪಳಿಸಿದರು.
ಮೆರವಣಿಗೆಯಲ್ಲಿ ರೈತರ ಒಡನಾಡಿ ಎತ್ತಿನಗಾಡಿಗಳ ಮೂಲಕ ನೂರಾರು ರೈತರು ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಯ ಅಂದ ಹೆಚ್ಚಿಸಿದರು. ನಂತರ ಕುವೆಂಪು ರಂಗ ಮಂದಿರದಲ್ಲಿ ರೈತ ದಸರಾದ ಸಭಾ ಕಾರ್ಯಕ್ರಮ ಹಾಗೂ ರೈತರ ಸಮಸ್ಯೆಗಳ ಕುರಿತು ಸಂವಾದ ಮಾಡಲಾಯಿತು.
ಕಳೆದೆರಡು ವರ್ಷಗಳಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಸೇರಿದಂತೆ ಯಾವುದೇ ಸಂಭ್ರಮಗಳು ನಡೆದಿರಲಿಲ್ಲ. ಹಾಗಾಗಿ, ಈ ಬಾರಿಯ ದಸರಾ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ರೈತ ವರಿಷ್ಠರಾದ ಕೆ. ಟಿ ಗಂಗಾಧರ್, ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ರೈತ ದಸರಾ ಸಮಿತಿ ಅಧ್ಯಕ್ಷರಾದ ರಮೇಶ್ ಹೆಗ್ಡೆ ಸೇರಿದಂತೆ ರೈತರು, ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಓದಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ರಿತುರಾಜ್ ಅವಸ್ಥಿ