ಶಿವಮೊಗ್ಗ: ಮನೆಯಲ್ಲಿ ಮಲಗಿದ್ದವರ ಮೇಲೆ ಏಕಾಏಕಿ ಗೋಡೆ ಕುಸಿದು ತಾಯಿ ಮತ್ತು ಮಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಾಲ್ಕನೇ ಕ್ರಾಸ್ನ ಯತಿರಾಜ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ ಉಮಾ ಹಾಗೂ ಮಗಳು ಕಾವ್ಯ ಎಂಬುವರ ಮೇಲೆ ಇಂದು ಬೆಳಿಗ್ಗೆ ಮನೆಯ ಗೋಡೆ ಕುಸಿದಿದೆ.
ಉಮಾ ಅವರ ಕಾಲು ಮುರಿದಿದ್ದು, ಕಾವ್ಯ ಅವರ ಬಲಗೈ ಮುರಿತವಾಗಿದೆ. ಗೋಡೆಯು ಯತಿರಾಜ್ ಅವರ ಕಡೆಯೂ ಬಿದ್ದಿದ್ದರಿಂದ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಗೊಂಡಿರುವ ಉಮಾ ಹಾಗೂ ಕಾವ್ಯ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ತಹಶೀಲ್ದಾರ್ ನಾಗರಾಜ್ ಹಾಗೂ ಪಾಲಿಕೆ ಆಯುಕ್ತ ಮಾಯಾಣ್ಣ ಗೌಡ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು. ಸರಿಯಾದ ದಾಖಲೆ ಪಡೆದು ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಓದಿ : ಮಳೆ ಹಿನ್ನೆಲೆ ಒಳಹರಿವು ಹೆಚ್ಚಳ.. ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ನೀರಿನ ಮಟ್ಟ