ಶಿವಮೊಗ್ಗ: ಕೇಂದ್ರ ಸರ್ಕಾರದ ಮೂರು ಕಾಯ್ದೆಗಳ ವಿರುದ್ದ ದೆಹಲಿಯಲ್ಲಿ ನಕಲಿ ರೈತರು ಹೋರಾಟ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಿಂದ ದೇಶದ ರಾಷ್ಟ್ರಭಕ್ತರು ತಲೆ ತಗ್ಗಿಸುವಂತಾಗಿದೆ. ಈ ಹೋರಾಟಲ್ಲಿ ವಿದೇಶಿ ವ್ಯಕ್ತಿಗಳ ಕೈವಾಡ ಇದೆ. ಇದು ಗೊತ್ತಿದ್ರು ಹೋರಾಟ ಮುಂದುವರಿಸಲಾಗುತ್ತಿದೆ. ಖಲಿಸ್ತಾನದ ಹೆಸರಿನಲ್ಲಿ ಹೋರಾಟ ನಡೆಸಲಾಗುತ್ತಿದೆ. ವಿದ್ವಂಸಕ ಕೃತ್ಯಗಳು ಇದರಲ್ಲಿ ಭಾಗಿಯಾದ ಮಾಹಿತಿಯನ್ನು ವಿರೋಧ ಪಕ್ಷದವರು ಗಮನಿಸಬೇಕೆಂದರು. ಈ ಕಾಯ್ದೆಯನ್ನು ಬಿಜೆಪಿ ಸರ್ಕಾರ ತಂದಿದೆ. ಇದಕ್ಕೆ ಕಾಯ್ದೆಗೆ ವಿರೋಧ ಮಾಡಬೇಕೆಂದು ವಿರೋಧ ಮಾಡುವುದು ಅಥವಾ ಸುಮ್ಮನಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.
ಮನಮೋಹನ್ ಸಿಂಗ್ರವರು ಪ್ರಧಾನ ಮಂತ್ರಿ ಆದಾಗ ಪ್ರಸ್ತಾಪ ಮಾಡಿದ ಕಾಯ್ದೆಯನ್ನೇ ಪ್ರಧಾನಿ ಮೋದಿಯವರು ತರಲು ಹೊರಟಿದ್ದಾರೆ. ದೇವೇಗೌಡ ರೈತರ ಬಗ್ಗೆ ಮಾತನಾಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ದೇವೇಗೌಡರು ಹೇಳಿಕೆ ನೀಡಿರುವ ಕುರಿತು ಚರ್ಚೆ ನಡೆಸಬೇಕಿದೆ ಎಂದರು.
ಈಗ ಕೃಷಿ ಕಾಯ್ದೆಯ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಬೆಂಬಲ ಬೆಲೆ ಬಗ್ಗೆ ಚರ್ಚೆ ಆಗ್ತಾ ಇದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯ ಬಗ್ಗೆ ಸಾಮಾನ್ಯ ರೈತ ಸ್ವಾಗತ ಮಾಡ್ತಾ ಇದ್ದಾನೆ. ತನ್ನ ಬೆಳೆಯನ್ನು ಎಲ್ಲಿಬೇಕಾದರೂ ಮಾರಾಟ ಮಾಡಬಹುದು, ಇದಕ್ಕೆ ಯಾಕೆ ವಿರೋಧ ಮಾಡ್ತಾ ಇದ್ದಾರೆ ಎಂದು ಆಶ್ವರ್ಯವ್ಯಕ್ತಪಡಿಸಿದರು. ಹೋರಾಟ ಮಾಡ್ತಾ ಇರುವವರ ಬಗ್ಗೆ ಪ್ರಧಾನಿಗಳು ಆಂದೋಲನ ಜೀವಿಗಳೆಂದು ಕರೆದಿದ್ದಾರೆ. ಕಾರಣ ಇವರು ಎಲ್ಲ ಹೋರಾಟದಲ್ಲೂ ಭಾಗಿಯಾಗುತ್ತಾರೆ. ಈ ಕಾಯ್ದೆಗಳು ದೇಶದ ರೈತರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ. ಇದರಿಂದ ಈ ಕಾಯ್ದೆಗೆ ವಿರೋಧ ಮಾಡದೇ ಎಲ್ಲರೂ ಸ್ವಾಗತ ಮಾಡಬೇಕು ಎಂದರು.
ಈ ಕಾಯ್ದೆಯು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪಾಸ್ ಆಗಿದೆ. ಚರ್ಚೆ ನಡೆಸಿದಾಗ ಎಲ್ಲರು ಸುಮ್ಮನಿದ್ದು, ಈಗ ವಿದ್ವಂಸಕ ವ್ಯಕ್ತಿಗಳ ಕುತಂತ್ರದಿಂದ ನಡೆಸುತ್ತಿರುವ ಹೋರಾಟ ದೇಶದ ಜನರ ಗಮನ ಸೆಳೆದಿದೆ. ದೇಶದಲ್ಲಿ ಶೇ 86 ರಷ್ಟು ರೈತರು ಎರಡು ಹೆಕ್ಟೇರ್ಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ಇವರೆಲ್ಲರ ಹಿತ ಕಾಯಬೇಕಿದೆ. ರೈತ ಬದ್ದತೆಯನ್ನು ಎತ್ತಿಹಿಡಿದಾಗ ಇದಕ್ಕೆ ರಾಜಕೀಯ ಬಣ್ಣ ಬೆರೆಸುವುದು ಸರಿಯಲ್ಲ. ರೈತರ ಹೆಸರಿನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಯಾರು ಬೆಂಬಲ ನೀಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.
ವಿದ್ವಂಸಕ ಕೃತ್ಯಗಳ ಬಗ್ಗೆ ವಿರೋಧ ಪಕ್ಷದವರು ಬಾಯಿ ಬಿಡಬೇಕಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಹಿಂದೆ ಹೇಳಿದ ಮಾತುಗಳನ್ನು ಮೋದಿ ವಾಕ್ಯದ ಸಮೇತ ಹೇಳಿದ್ದಾರೆ. ಇದರಿಂದ ವಿರೋಧ ಪಕ್ಷಗಳು ಬಾಯಿ ಬಿಡಬೇಕಿದೆ ಎಂದರು.