ETV Bharat / state

ಬರೆದಿಟ್ಟುಕೊಳ್ಳಿ ಪಾರ್ಲಿಮೆಂಟ್ ಚುನಾವಣೆ ಹಿಂದೆ-ಮುಂದೆ ಈ ಸರ್ಕಾರ ಇರಲ್ಲ: ಈಶ್ವರಪ್ಪ ಭವಿಷ್ಯ

ಪಕ್ಷ ಬಿಟ್ಟು ಹೋದವರನ್ನು ಭವಿಷ್ಯದಲ್ಲಿ ಮತ್ತ್ಯಾವತ್ತು ಕರೆದುಕೊಳ್ಳುವುದಿಲ್ಲ ಅಂತ ಹೇಳಿದವರು ನೀವೇ. ಹಾಗೆಂದ ಮೇಲೆ ಈಗೇಕೆ ಅವರ ಮನೆ ಕಾಯುತ್ತಿದ್ದೀರಿ ಎಂದು ಮಾಜಿ ಸಚಿವ ಕೆ​ ಎಸ್​ ಈಶ್ವರಪ್ಪ ಅವರು ಕಾಂಗ್ರೆಸ್​ ನಾಯಕರ ಹೇಳಿಕೆಗೆ ಕಿಡಿಕಾರಿದರು.

ex minister ks eshwarappa
ex minister ks eshwarappa
author img

By ETV Bharat Karnataka Team

Published : Sep 2, 2023, 8:57 PM IST

Updated : Sep 2, 2023, 9:39 PM IST

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಲೋಕಸಭಾ ಚುನಾವಣೆಯ ಹಿಂದೆ-ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲವೆಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಭಾರಿ ದೊಡ್ಡ ಸುದ್ದಿ ಮಾಡುತ್ತಿದೆ. ಪಕ್ಷ ಒಪ್ಪಿದರೆ ಅರ್ಧ ಬಿಜೆಪಿಗರು ಬಂದು ಕಾಂಗ್ರೆಸ್ ಸೇರಿಕೊಳ್ಳುತ್ತಾರೆಂದು ಅವರು ಹೇಳುತ್ತಿದ್ದಾರೆ. ಅವರ ಹಣೆಬರಹಕ್ಕೆ ಒಬ್ಬನೇ ಒಬ್ಬ ಶಾಸಕರನ್ನು ಈವರೆಗೂ ತೆಗೆದುಕೊಳ್ಳಲು ಆಗಿಲ್ಲ. ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ ಅಂತ ನಮಗೆ (ಬಿಜೆಪಿ) ಹೇಳುತ್ತಿದ್ದಾರೆ. ನಮ್ಮವರು ಎಲ್ಲಾದರು ಹೋಗಿದ್ರೆ ತಾನೆ ಹಿಡಿದಿಟ್ಟುಕೊಳ್ಳಲು? ಅವರ ಹಣೆಬರಹ ಗೊತ್ತಾಗಿದೆ. ಬರೆದಿಟ್ಟುಕೊಳ್ಳಿ, ಪಾರ್ಲಿಮೆಂಟ್ ಚುನಾವಣೆ ಹಿಂದೆ-ಮುಂದೆ ಈ ಸರ್ಕಾರ ಇರಲ್ಲ ಎಂದು ಈಶ್ವರಪ್ಪ ಭವಿಷ್ಯ ನುಡಿದರು.

ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ಈ ಹಿಂದೆ 17 ಜನ ಶಾಸಕರು ಕಾಂಗ್ರೆಸ್​ನಿಂದ ಬಿಜೆಪಿಗೆ ಬರುವಾಗ ಯಾರು ಬರುವುದಿಲ್ಲ‌ ಅಂದಿದ್ದರು. ಅದು ಮರೆತು ಹೋಯಿತಾ? ಎಂದು ವ್ಯಂಗ್ಯವಾಡಿದರು.

ಕೆಲ ಶಾಸಕರಿಗೆ ಸರ್ಕಾರದ ಮೇಲೆ ಅಸಮಾಧಾನ ಇರುವ ಬಗ್ಗೆ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದು ಸರಿಪಡಿಸುವ ಮಾತು ಕೂಡ ಆಡಿದ್ದಾರೆ. ಹಿಂದೆ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದಾಗಲೂ ಇದೇ ಪರಿಸ್ಥಿತಿ ಇತ್ತು. ಈಗಲೂ ಅದೇ ಪರಿಸ್ಥಿತಿ ಇದೆ. ಸೂರ್ಯ-ಚಂದ್ರ ಇರುವುದೆಷ್ಟು ಸತ್ಯವೋ ಅಷ್ಟೇ ಬಿಜೆಪಿಗೆ ಹೋದವರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೆ, ಈಗ ಅವರ ಮನೆ ಕಾಯುತ್ತಿದ್ದಾರೆ‌ ಎಂದು ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್​ ಪಕ್ಷಕ್ಕೆ ಬರುವುದಾರೆ ಬರಲಿ ಎಂಬ ಕೈ ನಾಯಕರ ಹೇಳಿಕೆಗೆ ಈಶ್ವರಪ್ಪ ಕಿಡಿಕಾರಿದರು.

ಮಂತ್ರಿಗಳು ಜಿಲ್ಲೆಗಳತ್ತ ಹೋಗುತ್ತಿಲ್ಲ: ರಾಜ್ಯದಲ್ಲಿ ಬರಗಾಲ ಆವರಿಸಿದೆ. ಹಲವೆಡೆ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಒಂದು ಟ್ಯಾಂಕರ್ ನೀರು ಕೊಡಲಾಗುತ್ತಿಲ್ಲ. ಬೋರ್​ವೆಲ್​ ತೆಗೆದಿಲ್ಲ. ಒಬ್ಬ ಮಂತ್ರಿ ಬರ ಪರಿಸ್ಥಿತಿ ನೋಡುತ್ತಿಲ್ಲ. ಇದನ್ನು ಸರ್ಕಾರ ಅಂತ ಕರೆಯುವುದಕ್ಕೆ ಆಗುತ್ತಾ? ಇಂತಹ ಭಂಡತನ ಸರ್ಕಾರವನ್ನು ಡಿಕೆ ಶಿವಕುಮಾರ್ ನಡೆಸುತ್ತಿದ್ದಾರೆ. ಅವರೇ ಇಂದು ಸಿಎಂ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್​ನ ಬಸವರಾಜ ರಾಯರೆಡ್ಡಿ, ಡಿಕೆ ಸುರೇಶ್ ಅವರು ನಡೆದುಕೊಳ್ಳುತ್ತಿರುವುದನ್ನು‌ ನೋಡಿದರೆ, ಈ ಸರ್ಕಾರವು ಲೋಕಸಭೆ ಚುನಾವಣೆ ತನಕ ಇರಲ್ಲ. ಡಿಕೆ ಶಿವಕುಮಾರ್ ಜನಪ್ರತಿನಿಧಿಗಳಿಗೆ ವೇದಾಂತ ಹೇಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ ಎಂದು ಡಿಸಿಎಂ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಲಾಲೂ ಪ್ರಸಾದ್ ಸಾಯುವುದು ಬೇಡ: ಇಂಡಿಯಾ ಒಕ್ಕೂಟದಲ್ಲಿ ಒಗ್ಗಟ್ಟು ಮೂಡುವುದಿಲ್ಲ. ಅವರಲ್ಲಿ ಯಾರು ನಾಯಕರು ಆಗಬೇಕು ಎಂದು ಅವರೆ ಇನ್ನೂ ನಿರ್ಧಿಸಿಲ್ಲ. ಅಲ್ಲದೇ ಲಾಲು ಪ್ರಸಾದ್ ಯಾದವ್ ಅವರು ನಾನು ಸಾಯುವುದರ ಒಳಗೆ ಮೋದಿ ಕೆಳಗೆ ಇಳಿಯುವುದನ್ನು ನೋಡಬೇಕು ಎಂದಿದ್ದಾರೆ. ನಾನು ಅವರು ಸಾಯುವುದನ್ನು ಬಯಸುವುದಿಲ್ಲ. ಆದರೆ, ಸೂರ್ಯ-ಚಂದ್ರ ಇರುವುದೆಷ್ಟು ಸತ್ಯವೋ ಅಷ್ಟೇ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದಷ್ಟೇ ಹೇಳಬಲ್ಲೆ ಎಂದರು.

ಮುಂದೆ ಆಪರೇಷನ್ ಕಮಲ‌ ನಡೆಯುತ್ತದೆ. ಗೋವಾ, ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಬಿಟ್ಟು ಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ರಾಜ್ಯದಲ್ಲಿಯೂ ಆಪರೇಷನ್ ನಡೆಯಬಹುದು ಎಂಬ ಅರ್ಥದಲ್ಲಿ ಈಶ್ವರಪ್ಪ ಆಪರೇಷನ್ ಕಮಲ ನಡೆಯುವ ಸುಳಿವು ನೀಡಿದರು.

ಇದನ್ನೂ ಓದಿ: ಬಿ.ಎಲ್.ಸಂತೋಷ್ ಹೇಳಿದ್ದಕ್ಕಿಂತ ಹೆಚ್ಚಿನವರು ನಮ್ಮ ಸಂಪರ್ಕದಲ್ಲಿದ್ದಾರೆ: ಸಂಸದ ಡಿ.ಕೆ.ಸುರೇಶ್

Last Updated : Sep 2, 2023, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.