ETV Bharat / state

ಶಿವಮೊಗ್ಗ: ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯ ಅಡಿ 'ಸಖಿ' ಸಾಂತ್ವನ ಕೇಂದ್ರ ಆರಂಭ.. - Establishment of Sakhi Comfort Center in Shimoga

ಕೇಂದ್ರ ಸರ್ಕಾರ ಪೋಕ್ಸೋ ಕೇಸ್, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನಿರ್ಭಯಾ ಅಡಿ ಹಣದ ಸಹಾಯ ಒದಗಿಸುತ್ತದೆ. ಪ್ರತಿ ಜಿಲ್ಲೆಯ ಸಖಿ‌ ಕೇಂದ್ರದಲ್ಲಿ‌ ಕಾರ್ಯನಿರ್ವಹಿಸುವ ಎಲ್ಲರಿಗೂ ಕೇಂದ್ರ ಸರ್ಕಾರ ಗೌರವಧನ ನೀಡುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಖಿ ಕೇಂದ್ರ ಸದ್ಯ‌ ಜಿಲ್ಲಾ ಮೆಗ್ಗಾನ್ ಬೋಧಾನಾಸ್ಪತ್ರೆಯ ಸಣ್ಣ ಕೂಠಡಿಯಲ್ಲಿ ಕಾರ್ಯನಿರ್ವಹಿಸುತ್ತದೆ..

Establishment of Sakhi Center in Shimoga
ಸಖಿ ಸಾಂತ್ವಾನ ಕೇಂದ್ರ
author img

By

Published : Nov 25, 2020, 9:39 PM IST

ಶಿವಮೊಗ್ಗ : ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ದೌರ್ಜನ್ಯ ಹಾಗೂ ಕೊಲೆಯ ನಂತರ ಕೇಂದ್ರ ಸರ್ಕಾರ ಪ್ರತಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಹಾಗೂ ತಪ್ಪಿರಸ್ಥರಿಗೆ ಶಿಕ್ಷೆ ನೀಡುವ ಸಲುವಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸಖಿ ಎಂಬ ಸಾಂತ್ವನ‌ ಕೇಂದ್ರ ರೂಪಿಸಿದೆ.

ಇದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಹಣ ನೀಡುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಕಾನೂನು, ವೈದ್ಯಕೀಯ, ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸೇವೆಗಳು ದೂರಕುವ ಅವಕಾಶವನ್ನು ಸಖಿಯ ಮೂಲಕ ಮಾಡಿ ಕೊಟ್ಟಿದೆ. ನೊಂದ ಮಹಿಳೆಯು ತನ್ನ ನ್ಯಾಯಕ್ಕಾಗಿ ಎಲ್ಲ ಕಡೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಈ ಸೇವೆ ಒದಗಿಸುತ್ತಿದೆ.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಮಾತನಾಡಿದರು

ಕೇಂದ್ರ ಸರ್ಕಾರ ಪೋಕ್ಸೋ ಕೇಸ್, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನಿರ್ಭಯಾ ಅಡಿ ಹಣದ ಸಹಾಯ ಒದಗಿಸುತ್ತದೆ. ಪ್ರತಿ ಜಿಲ್ಲೆಯ ಸಖಿ‌ ಕೇಂದ್ರದಲ್ಲಿ‌ ಕಾರ್ಯನಿರ್ವಹಿಸುವ ಎಲ್ಲರಿಗೂ ಕೇಂದ್ರ ಸರ್ಕಾರ ಗೌರವಧನ ನೀಡುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಖಿ ಕೇಂದ್ರ ಸದ್ಯ‌ ಜಿಲ್ಲಾ ಮೆಗ್ಗಾನ್ ಬೋಧಾನಾಸ್ಪತ್ರೆಯ ಸಣ್ಣ ಕೂಠಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಸಖಿ ಕಾರ್ಯ‌ನಿರ್ವಹಣೆ ಹೇಗೆ: ಸಖಿ‌ ಕೇಂದ್ರ ಪ್ರತಿ ಜಿಲ್ಲಾ‌ ಕೇಂದ್ರದಲ್ಲಿ‌ ಇರುತ್ತದೆ. ಅದೇ ರೀತಿ ಪ್ರತಿ ತಾಲೂಕು ಕೇಂದ್ರದಲ್ಲಿ ಗೆಳತಿ ಕೇಂದ್ರಗಳಿರುತ್ತವೆ. ಯಾವುದೇ ದೌರ್ಜನ್ಯಕ್ಕೊಳಗಾದ ಮಹಿಳೆ, ‌ಅಪ್ರಾಪ್ತರು ತಾವೇ ಅಥವಾ ಇತರರ ನೆರವಿನಿಂದ ಸಖಿ ಕೇಂದ್ರಕ್ಕೆ ಆಗಮಿಸಬಹುದು.

ಇಲ್ಲಿ ತಮಗೆ ಉಂಟಾಗಿರುವ ದೌರ್ಜನ್ಯದ ಬಗ್ಗೆ ಮಾಹಿತಿ ಪಡೆಯಬಹುದು. ಇಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೂಲಕ ಕಾನೂನು, ವೈದ್ಯಕೀಯ ಸೇವೆ, ಪೊಲೀಸ್ ನೆರವು ಲಭ್ಯವಾಗುತ್ತದೆ.

ಈ ಕೇಂದ್ರದಲ್ಲಿ ಕುಟುಂಬ, ಲೈಂಗಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿನ ದೌರ್ಜನ್ಯದ ಕುರಿತು ದೂರು ನೀಡಬಹುದು. ಇಲ್ಲಿಗೆ ಬಂದವರನ್ನು ಸಖಿ ಕೇಂದ್ರದಲ್ಲಿ‌ ಗರಿಷ್ಟ 5 ದಿನ ತಂಗಲು ಅವಕಾಶ ಮಾಡಿ‌ ಕೊಡಲಾಗುತ್ತದೆ.

ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವಾಧಾರ ಕೇಂದ್ರದಲ್ಲಿ ಇರಲು ಅವಕಾಶ ಮಾಡಿ ಕೊಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರನ್ನು ಸ್ವಾಧಾರ ಕೇಂದ್ರಗಳಲ್ಲಿ ಇರಲು ಅವಕಾಶ ಮಾಡಿಕೊಡಲಾಗುತ್ತದೆ. 18 ವರ್ಷಕ್ಕಿಂತ ಕಡಿಮೆ ಇರುವವರನ್ನು ಬಾಲಕಿಯ ಬಾಲ ಮಂದಿರದಲ್ಲಿ ಇರಲು ಅವಕಾಶ ಮಾಡಿ ಕೊಡಲಾಗುತ್ತದೆ.

181 ಇದು ಮಕ್ಕಳ ಸಹಾಯವಾಣಿಯಾಗಿದ್ದು, ಇದಕ್ಕೂ ಸಹ ದೂರು‌ ನೀಡಬಹುದಾಗಿದೆ. 1091 ಈ ದೂರವಾಣಿಯ ಆಯಾ ಜಿಲ್ಲೆಯ ಪೊಲೀಸ್ ಅಧಿಕ್ಷಕರ ಕಚೇರಿಗೆ ದೂರು ಹೋಗುತ್ತದೆ.‌

ಸಖಿ ಕೇಂದ್ರದ ಮೂಲಕ ಈ ವರ್ಷ ನೆರವು ಪಡೆದವರ ಸಂಖ್ಯೆ: ಜನವರಿ- ಅಕ್ಟೋಬರ್‌ವರೆಗೆ 30 ಜನ ಮಹಿಳಾ ಹಾಗೂ ಮಕ್ಕಳು ಒಳ ರೋಗಿಗಳಾಗಿ ನೆರವು ಪಡೆದಿದ್ದಾರೆ. ಅದೇ ರೀತಿ ಜನವರಿಯಿಂದ ಅಕ್ಟೋಬರ್‌ವರೆಗೆ 59 ಜನ ಹೊರ ರೋಗಿಗಳಾಗಿ ನೆರವು ಪಡೆದುಕೊಂಡಿದ್ದಾರೆ.

ಕೋವಿಡ್ ಸಂದರ್ಭದಲ್ಲಿ 45 ಮಕ್ಕಳ ದೌರ್ಜನ್ಯ ಪ್ರಕರಣ ನಡೆದಿವೆ. ಇವರೆಲ್ಲ ಸರ್ಕಾರದ ನೆರವು ಪಡೆದಿದ್ದಾರೆ. ಕೆಲ ಪ್ರಕರಣದಲ್ಲಿ ನಿರ್ಭಯಾದಿಂದ ಧನ ಸಹಾಯವನ್ನು ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ 32 ಪೋಕ್ಸೋ ಕೇಸುಗಳಾಗಿವೆ. ‌ಇದು ಪ್ರಥಮ ತ್ರೈಮಾಸಿಕದ ವರದಿಯಾಗಿದೆ. ದ್ವಿತೀಯ ತ್ರೈಮಾಸಿಕ ಜೂನ್‌ನಿಂದ ಈವರೆಗೂ 20 ಪೋಕ್ಸೋ ಪ್ರಕರಣ ದಾಖಲಾಗಿವೆ.

ಅದೇ ರೀತಿ ಏಪ್ರಿಲ್‌ನಿಂದ ಜೂನ್‌ನಲ್ಲಿ 40 ಬಾಲ್ಯ ವಿವಾಹ ಪ್ರಕರಣ ನಡೆದಿವೆ. ಇದರಲ್ಲಿ 7 ಎಫ್‌ಐಆರ್ ದಾಖಲಾಗಿವೆ. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ 21 ಬಾಲ್ಯ ವಿವಾಹಗಳು ನಡೆದಿವೆ. ಇದರಲ್ಲಿ 5 ಎಫ್‌ಐಆರ್ ದಾಖಲಾಗಿವೆ.

ನಿರ್ಭಯಾ ಇದು‌ ಒಂದು ಧನ ಸಹಾಯದ ಸ್ಕೀಂ ಆಗಿದೆ. ಇದರಲ್ಲಿ ಮಹಿಳಾ‌ ಸಾಂತ್ವನ ಕೇಂದ್ರಗಳು, ಸೈಬರ್ ಕ್ರೈಂನವರಿಗೆ, ನೋಡಲ್ ಏಜೆನ್ಸಿಗಳಿಗೆ ಹಣ ಹೋಗುತ್ತದೆ. ಸಖಿಯಲ್ಲಿ ನೊಂದ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವು ನೀಡುವುದೇ ಮುಖ್ಯ ಉದ್ದೇಶ ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರೇಖಾ ಅವರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.