ಶಿವಮೊಗ್ಗ: ಪ್ರತೀ ವರ್ಷ ಮೈಸೂರಿನಂತೆ ಶಿವಮೊಗ್ಗದಲ್ಲೂ ಜಂಬೂ ಸವಾರಿ ನಡೆಸಲಾಗುತ್ತಿದ್ದು, ಮಹಾನಗರ ಪಾಲಿಕೆ ವತಿಯಿಂದ ದಸರಾ ಉತ್ಸವಕ್ಕೆ ಆನೆಗಳಿಗೆ ಸಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.
ದಸರಾ ಜಂಬೂ ಸವಾರಿಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಬಂದ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಈ ಬಾರಿ ಪಾಲಿಕೆಯಿಂದಲೇ ಸರಳ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹೆಚ್ಚಿನ ಜನ ಸೇರುವಂತಿಲ್ಲವಾದ ಕಾರಣ ಮೆರವಣಿಗೆ ನಡೆಸದಿರಲು ನಿರ್ಧರಿಸಲಾಗಿದೆ.
ಪ್ರತೀ ವರ್ಷದ ಸಂಪ್ರದಾಯ ಬಿಡಬಾರದು ಎಂಬ ಕಾರಣದಿಂದ ಸಕ್ರೆಬೈಲಿನ ಸಾಗರ, ಬಾಲಣ್ಣ ಹಾಗೂ ಭಾನುಮತಿ ಆನೆಗಳಿಗೆ ಪೂಜೆ ಸಲ್ಲಿಸಿ, ಆಹ್ವಾನ ನೀಡಲಾಗಿದೆ. ಆನೆಗಳು ನಾಳೆ ಶಿವಮೊಗ್ಗ ನಗರಕ್ಕೆ ಬಂದು ಸೋಮವಾರ ವಾಪಸ್ ಆಗಲಿವೆ.
ಈ ವೇಳೆ ಉಪಮೇಯರ್ ಸುರೇಖಾ ಮುರುಳೀಧರ್, ಸದಸ್ಯರುಗಳಾದ ವಿಶ್ವಾಸ್, ರಾಹುಲ್, ಪ್ರಭಾಕರ್ ಸೇರಿದಂತೆ ಇತರರಿದ್ದರು.