ಶಿವಮೊಗ್ಗ: ಸಕ್ರೆಬೈಲು ಆನೆ ಶಿಬಿರದ ಹಿರಿಯ ಆನೆ ಗೀತಾ (85) ಇಂದು ಸಾವಿಗೀಡಾಗಿದ್ದಾಳೆ. ಸಕ್ರೆಬೈಲು ಆನೆ ಬಿಡಾರ ಪ್ರಾರಂಭ ಮಾಡಿದಾಗ ಈ ಆನೆಯನ್ನು 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದು ಕರೆ ತರಲಾಗಿತ್ತು.
ಸಕ್ರೆಬೈಲಿನ ಹಿರಿಯ ಆನೆ ಗೀತಾ
ಗೀತಾ ಸಕ್ರೆಬೈಲಿನ ಆನೆ ಶಿಬಿರದಲ್ಲಿ ಹಿರಿಯ ಆನೆಯಾಗಿತ್ತು. ರಂಗ, ನೇತ್ರಾ, ಆಲೆ ಇದರ ಮರಿಗಳು. ಇತ್ತೀಚೆಗೆ ಈಕೆಯ ಮಗ ರಂಗ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿತ್ತು. ಶಿವಮೊಗ್ಗದ ದಸರಾ ಜಂಬೂ ಸವಾರಿಯಲ್ಲಿ ಗೀತಾ ಅನೇಕ ಬಾರಿ ಭಾಗಿದ್ದಳು. ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಆನೆ, ಒಂದು ವಾರದಿಂದ ಆಹಾರ ಸೇವಿಸುತ್ತಿರಲಿಲ್ಲ. ಇಂದು ಗೀತಾ ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಓದಿ: ಕಾಡಾನೆ ದಾಳಿಗೆ ಸಕ್ರೆಬೈಲಿನ ಸಾಕಾನೆ ರಂಗ ಸಾವು
ಗೀತಾ ಸಾವಿನಿಂದ ಸಕ್ರೆಬೈಲಿನ ಶಿಬಿರದಲ್ಲಿ ಆನೆಗಳ ಸಂಖ್ಯೆ 22ಕ್ಕೆ ಇಳಿಕೆಯಾಗಿದೆ. ಸಂಜೆ ವೇಳೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.