ಶಿವಮೊಗ್ಗ: ಸಕ್ರೆಬೈಲಿನ ಆನೆ ಬಿಡಾರದಲ್ಲಿ ಕಾಲಿಗೆ ಹಾಕಿದ ಸರಪಳಿಯಿಂದ ಆನೆ ಮುಗ್ಗರಿಸಿ ಬಿದ್ದು ಗಾಯಗೊಂಡಿದೆ.
ಆನೆ ಬಹದ್ದೂರ್ ತನ್ನ ಕಾಲಿಗೆ ಹಾಕಿದ ಸರಪಳಿಯಿಂದ ನಡೆಯುವಾಗ ಕುಸಿದು ಬಿದ್ದ ಪರಿಣಾಮ, ದಂತದಿಂದ ಸೊಂಡಿಲು ಸೀಳಿ ಹೋಗಿದೆ.
ತಕ್ಷಣ ಬಿಡಾರದ ವೈದ್ಯ ಡಾ.ವಿನಯ್, ಡಾ.ರವಿರಾಯ್ ಹಾಗೂ ದುರ್ಗಾ ತಂಡದಿಂದ ಶಸ್ತ್ರ ಚಕಿತ್ಸೆ ಮಾಡಲಾಗಿದೆ. ಬಹದ್ದೂರ್ ಆನೆಗೆ ಅರಿವಳಿಕೆ ಮದ್ದು ನೀಡಿ ಚಿಕಿತ್ಸೆಗೊಳಪಡಿಸಲಾಗಿದ್ದು, ಸದ್ಯ ಚೇತರಿಕೆ ಕಾಣುತ್ತಿದೆ.