ಶಿವಮೊಗ್ಗ: ಅಸೂಯೆಗೆ ಮದ್ದಿಲ್ಲ. ಬಿಜೆಪಿಯವರು ಮಾತನಾಡಿಕೊಂಡು ಇರಲಿ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸಾಗರ ತಾಲೂಕು ಹುತ್ತದಿಂಬ ಗ್ರಾಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಬಿಜೆಪಿ ಕೊಡುಗೆ ಏನು?, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರಾ?, ದೇಶಕ್ಕೆ ಸ್ವಾತಂತ್ರ್ಯ ತಂದಿದ್ದಾರಾ?, ಅವರೇನು ಬಡವರಿಗೆ ಮನೆ, ಸೈಟು, ರೈತರಿಗೆ ಭೂಮಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು. ನಾವು ಮಾಡಿದ ಪ್ರಜಾಪ್ರಭುತ್ವದಲ್ಲಿ ಅವರಿಗೆ ಶಕ್ತಿ ಬಂದಿದೆ. ಇದರಿಂದ ಅವರು ಮಾತನಾಡುತ್ತಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದಕ್ಕೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಭಯ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಲಿ. ತುಂಬಾ ಸಂತೋಷ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಗರು ಆದಷ್ಟು ಬೇಗ ಮುಹೂರ್ತ ಪಿಕ್ಸ್ ಮಾಡಲಿ, ಯಾರು ಎಲ್ಲಿಗೆ ಹೋಗುತ್ತಾರೆ ಗೊತ್ತಾಗುತ್ತದೆ: ಡಿ.ಕೆ ಶಿವಕುಮಾರ್