ಶಿವಮೊಗ್ಗ: ಕೊರೊನ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಶಾಲೆಗಳನ್ನು ತೆರೆಯಬೇಡಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರನ್ನು ಒತ್ತಾಯಿಸಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ ಇತ್ತಿಚೆಗೆ ಕೊರೊನಾ ಹೊತ್ತಿನಲ್ಲಿ ಶೈಕ್ಷಣಿಕ ಆತಂಕಗಳು ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ಆನ್ಲೈನ್ ಮೂಲಕ ಏರ್ಪಡಿಸಿತ್ತು. ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳು, ಪೋಷಕರು, ವೈದ್ಯರು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಹಲವರು ಭಾಗವಹಿಸಿ ತಮ್ಮ ಆತಂಕ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಕೊರೊನಾ ವೈರಸ್ ನಿಯಂತ್ರಕ್ಕೆ ಬರುವರೆಗೂ ಶಾಲೆಗಳನ್ನು ತೇರೆಯುವುದು ಬೇಡ. ಅಕ್ಟೋಬರ್ ನಂತರದಲ್ಲಿ ಶಾಲೆಗಳನ್ನು ತೇರೆದರೆ ಶೈಕ್ಷಣಿಕ ರಜೆಗಳನ್ನು ಮೋಟಕುಗೋಳಿಸಿ ಶಾಲೆಗಳನ್ನು ಪ್ರಾರಂಬಿಸಬಹುದು. ಹಾಗಾಗಿ ತುರ್ತಾಗಿ ಶಾಲೆಗಳನ್ನು ತೇರೆಯುವುದು ಬೇಡ ಎಂದು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.