ಶಿವಮೊಗ್ಗ: ಪಡಿತರ ವಿತರಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಪಡಿತರ ಇಲಾಖೆಯ ಮಾಹಿತಿ ನೀಡಲು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಫೇಸ್ಬುಕ್ ಪೇಜ್ ಕ್ರಿಯೆಟ್ ಮಾಡಿದ್ದು, ಅದನ್ನು ಜಿಲ್ಲಾಧಿಕಾರಿಗಳು ಇಂದು ಬಿಡುಗಡೆ ಮಾಡಿದರು.
ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಪ್ರತಿಯೊಬ್ಬ ಗ್ರಾಹಕರಿಗೂ ಎಷ್ಟು ಪ್ರಮಾಣದ ಪಡಿತರ ಆಹಾರ ಪದಾರ್ಥಗಳು ಸೇರಬೇಕು. ಅವರಿಗೆ ಲಭ್ಯವಿರುವ ಸಾಮಾಗ್ರಿಗಳು ಕುರಿತಾದ ಮಾಹಿತಿಯನ್ನು ಪೇಜ್ನಲ್ಲಿ ನೀಡಲಾಗಿರುತ್ತದೆ. ಪಡಿತರ ಚೀಟಿದಾರ ವಿತರಣಾ ಕೇಂದ್ರದಲ್ಲಿ ಬಯೋ ಮೆಟ್ರೀಕ್ ನೀಡುವಾಗ ಒಬ್ಬ ವ್ಯಕ್ತಿಗೆ ಎಷ್ಟು ಅಕ್ಕಿ , ಬೇಳೆ ಬಂದಿದೆ ಎಂಬುದನ್ನು ನೋಡಬಹುದಾಗಿದೆ.
ಫೇಸ್ಬುಕ್ ಪೇಜ್ನಲ್ಲಿ ನಿಮಗೆ ಯಾವುದೇ ದೂರುಗಳಿದ್ದರೆ, ಅಂಗಡಿಯವರು ಮೋಸ ಮಾಡುತ್ತಿದ್ದರೆ, ನಿಗದಿತ ಸಮಯಕ್ಕೆ ಪಡಿತರ ವಿತರಣೆ ಮಾಡದೆ ಹೋದರೆ ಹೀಗೆ ಯಾವುದೇ ಸಮಸ್ಯೆಗಳಿದ್ದರೂ ಫೇಸ್ಬುಕ್ನಲ್ಲಿ ಸಾಕ್ಷಿ ಸಮೇತ ದೂರು ನೀಡಬಹುದಾಗಿದೆ.
ಅಲ್ಲದೆ Shivamoga-IRA- dept of food and civil supplies ಪೇಜ್ಗೆ ಹೋಗಿ ಲಾಗಿನ್ ಆದರೆ ನೀವು ಇಲಾಖೆಯ ಮಾಹಿತಿ ಹಾಗೂ ಲೋಪದೋಷಗಳನ್ನು ತಿಳಿಸಬಹುದುದಾಗಿದೆ ಎಂದು ಇಲಾಖೆಯ ಜಿಲ್ಲಾ ನಿರ್ದೇಶಕಿ ರಮ್ಯಾರವರು ತಿಳಿಸಿದರು.