ಶಿವಮೊಗ್ಗ: ಜಿಲ್ಲಾ ಒಕ್ಕಲಿಗ ಯುವ ವೇದಿಕೆ ವತಿಯಿಂದ ಶಿವಮೊಗ್ಗದಲ್ಲಿ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಶಿವಮೊಗ್ಗ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಇರುವ ಅಲೆಮಾರಿ ಕುಟುಂಬಗಳು ಟೆಂಟ್ ಹಾಕಿಕೊಂಡು ವಾಸವಾಗಿದ್ದಾರೆ. ಇವರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ತಿನ್ನುವ ಅನ್ನಕ್ಕೂ ಪರದಾಡುವಂತೆ ಆಗಿದೆ. ಇದರಿಂದ ಅವಶ್ಯಕವಿರುವ ಅಲೆಮಾರಿ ಕುಟುಂಬಗಳಿಗೆ ಜಿಲ್ಲಾ ಒಕ್ಕಲಿಗ ಯುವ ವೇದಿಕೆ ಸುಮಾರು 15 ದಿನಕ್ಕೆ ಆಗುವಷ್ಟು ದಿನಸಿ ಕಿಟ್ ವಿತರಿಸಿದೆ.
ಇದೇ ರೀತಿ ಗುರುಪುರದ ಬಳಿ ಟೆಂಟ್ನಲ್ಲಿ ಜೀವನ ನಡೆಸುತ್ತಿರುವವರಿಗೂ ಸೇರಿ ಒಟ್ಟು 160 ಕುಟುಂಬಗಳಿಗೆ ದಿನಸಿ ಕಿಟ್ ನೀಡಲಾಯಿತು.
ಜಿಲ್ಲಾ ಯುವ ವೇದಿಕೆಗೆ ಜಿಲ್ಲಾ ಒಕ್ಕಲಿಗ ಸಂಘ ಬೆಂಬಲ ವ್ಯಕ್ತಪಡಿಸಿದೆ. ಇದೇ ರೀತಿ ಅವಶ್ಯಕವಿದ್ದವರಿಗೆ ಸಹಾಯಕ್ಕೆ ಮುಂದಾಗಬೇಕು ಎಂದು ಕರೆ ನೀಡಲಾಯಿತು. ಈ ವೇಳೆ ವೇದಿಕೆಯ ಚೇತನ್, ರಘು, ರಮೇಶ್ ಹೆಗಡೆ ಸೇರಿ ಇತರರು ಹಾಜರಿದ್ದರು.