ETV Bharat / state

ಶಿವಮೊಗ್ಗದಲ್ಲಿ ಡಿಜಿಟಲ್‌ ಪಾವತಿಗೆ ಕೆ ಎಸ್‌ ಈಶ್ವರಪ್ಪರಿಂದ ಚಾಲನೆ.. - Digital payment in Shimoga

'ಡಿಜಿಟಲ್‌ ಇಂಡಿಯಾ'ದ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಕಟ್ಟಿಸಿ ಕೊಳ್ಳಲು ಡಿಜಿಟಲ್ ಪಾವತಿಯನ್ನು ಜಾರಿಗೆ ತಂದಿದೆ. ಇದನ್ನು ಶಾಸಕ ಕೆ ಎಸ್ ಈಶ್ವರಪ್ಪನವರು ಎಲೆಕ್ಟ್ರಾನಿಕ್ ಡೆಬಿಟ್ ಕಲೆಕ್ಷನ್​ಗೆ ಚಾಲನೆ ನೀಡಿದರು.

digital-payment-in-shimoga
author img

By

Published : Aug 5, 2019, 11:11 PM IST

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ ಕನಸು ಭಾರತ 'ಡಿಜಿಟಲ್‌ ಇಂಡಿಯಾ' ಆಗಬೇಕು ಎಂಬುದು. ಈ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಥಮ ಹೆಜ್ಜೆಯನ್ನಿಟ್ಟಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಕಟ್ಟಿಸಿ ಕೊಳ್ಳಲು ಡಿಜಿಟಲ್ ಪಾವತಿಯನ್ನು ಜಾರಿಗೆ ತಂದಿದೆ.

ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ ಎಸ್ ಈಶ್ವರಪ್ಪನವರು ಎಲೆಕ್ಟ್ರಾನಿಕ್ ಡೆಬಿಟ್ ಕಲೆಕ್ಷನ್​ಗೆ ಚಾಲನೆ ನೀಡಿದರು. ಸುಕುಮಾರ್ ಎಂಬುವರಿಗೆ ಕಾರ್ಡ್ ಹಾಕಿ ಆಸ್ತಿ ತೆರಿಗೆ ಚೀಟಿಯನ್ನು ನೀಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಮಾಲ್ ಅಥವಾ ಹೋಟೆಲ್​ಗಳಲ್ಲಿ ನಮ್ಮ ಕಾರ್ಡ್ ಸ್ವೈಪ್​ ಮಾಡುವ ಯಂತ್ರದಂತಯೇ ಇರುವ ಇಡಿಸಿ ಇದೆ.

ಶಿವಮೊಗ್ಗದಲ್ಲಿ ಡಿಜಿಟಲ್ ಪಾವತಿಗೆ ಕೆ ಎಸ್ ಈಶ್ವರಪ್ಪರಿಂದ ಚಾಲನೆ..

ಎನಿದು ಎಲೆಕ್ಟ್ರಾನಿಕ್ ಡೆಬಿಟ್ ಕಲೆಕ್ಷನ್​(ಇಡಿಸಿ)?

ಈ ಯಂತ್ರವು ಆಂಡ್ರಾಯ್ಡ್ ಆಧಾರಿತವಾಗಿದೆ. ಆಸ್ತಿ ಐಡಿ ಆಧಾರದಲ್ಲಿ ಡಿಮಾಂಡ್ ನೋಟ್ ಇದರಲ್ಲಿ ಸಿದ್ದಪಡಿಸಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಆಯುಕ್ತರಿಗೆ ತೆರಿಗೆ ಸಂಗ್ರಹದ ರಿಯಲ್ ಟೈಮ್ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ. ಈ ಇಡಿಸಿಯಿಂದ ತೆರಿಗೆ ಪಾವತಿಯನ್ನು ಕ್ಯಾಶ್‌ಲೆಸ್ ಮಾಡಬಹುದಾಗಿದೆ. ಇದರಿಂದ ಆದಾಯ ತೆರಿಗೆ ಸೋರಿಕೆ ತಡೆಯುವ ಜೊತೆಯಲ್ಲಿ ಪಾಲಿಕೆಯ ಆದಾಯವನ್ನು ವೃದ್ದಿಸಿ‌ಕೊಂಡಂತೆ ಆಗುತ್ತದೆ. ಇದರಿಂದ ಇಡಿಸಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇದನ್ನು ಮುಂದಿನ ದಿನಗಳಲ್ಲಿ ಇ-ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಲ್ತ್ ಇನ್ಸ್‌ಪೆಕ್ಟರ್​ಗಳಿಗೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ, ನೈರ್ಮಲ್ಯ ಕಾಪಾಡದಿರುವುದು ಇತರೆ ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ದಂಡ ವಸೂಲಿ ಮಾಡಲು ಹಾಗೂ ಬಾಡಿಗೆ ಸಂಗ್ರಹಕ್ಕೂ ಸಹ ಬಳಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ. ಈ ವೇಳೆ ಪಾಲಿಕೆ ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ ಆಡಳಿತ ಪಕ್ಷದ ಜ್ಞಾನೇಶ್ವರ್ ಸೇರಿದಂತೆ ಪಾಲಿಕೆ ಸದಸ್ಯರು ಹಾಜರಿದ್ದರು.

Intro:ಪ್ರಧಾನಿ ನರೇಂದ್ರ ಮೋದಿರವರ ಕನಸು ಡಿಜಿಟಲ್‌ ಇಂಡಿಯಾ ಆಗಬೇಕು ಎಂಬುದು. ಈ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಥಮ ಹೆಜ್ಜೆಯನ್ನಿಟ್ಟಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಕಟ್ಟಿಸಿ ಕೊಳ್ಳಲು ಡಿಜಿಟಲ್ ಪಾವತಿಯನ್ನು ಜಾರಿಗೆ ತಂದಿದೆ. ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ನವರು ಎಲೆಕ್ಟ್ರಾನಿಕ್ ಡೆಬಿಟ್ ಕಲೆಕ್ಷನ್ ಗೆ ಚಾಲನೆ ನೀಡಿದರು. ಸುಕುಮಾರ್ ಎಂಬುವರಿಗೆ ಕಾರ್ಡ್ ಹಾಕಿ ಆಸ್ತಿ ತೆರಿಗೆ ಚೀಟಿಯನ್ನು ನೀಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಮಾಲ್ ಅಥವಾ ಹೋಟೆಲ್ ಗಳಲ್ಲಿ ನಮ್ಮ ಕಾರ್ಡ್ ಸ್ವೇಪ್ ಮಾಡುವ ಯಂತ್ರದಂತಯೇ ಇರುವ ಇಡಿಸಿ ಇದೆ.

Body:ಈ ಯಂತ್ರವು ಅಂಡ್ರಾಯಿಡ್ ಆಧಾರಿತವಾಗಿದೆ. ಆಸ್ತಿ ಐಡಿ ಆಧಾರದಲ್ಲಿ ಡಿಮಾಂಡ್ ನೋಟ್ ಇದರಲ್ಲಿ ಸಿದ್ದಪಡಿಸಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಆಯುಕ್ತರಿಗೆ ತೆರಿಗೆ ಸಂಗ್ರಹದ ರಿಯಲ್ ಟೈಮ್ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ. ಈ ಇಡಿಸಿಯಿಂದ ತೆರಿಗೆ ಪಾವತಿಯನ್ನು ಕ್ಯಾಶ್ ಲೆಸ್ ಮಾಡಬಹುದಾಗಿದೆ. ಇದರಿಂದ ಆದಾಯ ತೆರಿಗೆ ಸೋರಿಕೆ ತಡೆಯುವ ಜೊತೆಯಲ್ಲಿ ಪಾಲಿಕೆಯ ಆದಾಯವನ್ನು ವೃದ್ದಿಸಿ‌ಕೊಂಡಂತೆ ಆಗುತ್ತದೆ. ಇದರಿಂದ ಇಡಿಸಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Conclusion:ಇದನ್ನು ಮುಂದಿನ ದಿನಗಳಲ್ಲಿ ಇ- ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಲ್ತ್ ಇನ್ಸ್ಪೆಕ್ಟರ್ ಗಳಿಗೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ, ನೈರ್ಮಲ್ಯ ಕಾಪಾಡದಿರುವುದು ಇತರೆ ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ದಂಡ ವಸೂಲಿ ಮಾಡಲು ಹಾಗೂ ಬಾಡಿಗೆ ಸಂಗ್ರಹಕ್ಕೂ ಸಹ ಬಳಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ. ಈ ವೇಳೆ ಪಾಲಿಕೆ ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ ಆಡಳಿತ ಪಕ್ಷದ ಜ್ಞಾನೇಶ್ವರ್ ಸೇರಿದಂತೆ ಪಾಲಿಕೆ ಸದಸ್ಯರು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.