ಶಿವಮೊಗ್ಗ: ನಗರದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಶಾಂತಲಾ ಸ್ಪೇರ್ ಕಾಸ್ಟಿಂಗ್ ಕಾರ್ಖಾನೆಯಲ್ಲಿ ಸೋಮವಾರ ರಾತ್ರಿ ಕಾರ್ಮಿಕನೋರ್ವ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.
ಮೃತ ಕಾರ್ಮಿಕನನ್ನು ಚೇತನ್ ಎಂದು ಗುರುತಿಸಲಾಗಿದೆ. ಈತ ಶಿವಮೊಗ್ಗ ತಾಲೂಕು ವೀರಣ್ಣನ ಬೆನವಳ್ಳಿಯ ನಿವಾಸಿ. ಕಳೆದ ಐದಾರು ವರ್ಷಗಳಿಂದ ಶಾಂತಲಾ ಸ್ಪೇರ್ ಕಾಸ್ಟಿಂಗ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದ. ನಿನ್ನೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವಾಗ ಮಿಷನ್ಗೆ ಸಿಲುಕಿದ್ದು, ತಕ್ಷಣ ತೀವ್ರ ರಕ್ತಸ್ರಾವವಾಗಿದೆ. ನಂತರ ಅಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದು, ದುರದೃಷ್ಟವಷಾತ್ ಆತ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.