ETV Bharat / state

ಭದ್ರಾವತಿಯಲ್ಲಿ ಮೂವರು ಮನೆಗಳ್ಳರ ಬಂಧನ: 39 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ವಶ - Bhadra traffic patrol two wheeler

ಭದ್ರಾವತಿ ನ್ಯೂ ಟೌನ್ ಪೊಲೀಸರು ಬಂಧಿಸಿದ್ದ ಆರೋಪಿಗಳು ಕಳ್ಳತನ ಕೃತ್ಯ ಒಪ್ಪಿಕೊಂಡಿದ್ದಾರೆ.

ಮೂವರು ಮನೆಗಳ್ಳರ ಬಂಧನ
ಮೂವರು ಮನೆಗಳ್ಳರ ಬಂಧನ
author img

By

Published : Jun 7, 2023, 10:05 PM IST

ಶಿವಮೊಗ್ಗ : ಭದ್ರಾವತಿ ನ್ಯೂ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬಂಧಿತರಿಂದ 39 ಗ್ರಾಂ ಬಂಗಾರ ಹಾಗೂ 17 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಎರಡು ಮನೆಗಳಲ್ಲಿ ಕಳ್ಳತನ ನಡೆದಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಗಂಜಿಕೆರೆ ಗ್ರಾಮದ ಲೋಕೇಶ್ (50) ಹಾಗೂ ರಂಗನಾಥ್ (45) ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿಯ ವಿಜಯ್ (33) ಎಂಬವರನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮ ಕೃತ್ಯ ಒಪ್ಪಿಕೊಂಡಿದ್ದಾರೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ನೇತೃತ್ವದಲ್ಲಿ ನ್ಯೂ ಟೌನ್ ಪೊಲೀಸ್ ಠಾಣೆಯ ಎಎಸ್ಐ ವೆಂಕಟೇಶ್, ಮಂಜಪ್ಪ, ರಂಗನಾಥ, ತೀರ್ಥಲಿಂಗಪ್ಪ, ಪ್ರವೀಣ್ ಕುಮಾರ್, ಸುನೀಲ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

ರಾಜ್ಯದಲ್ಲಿಯೇ ಉತ್ತಮವಾದ ಪೊಲೀಸ್ ವ್ಯವಸ್ಥೆಯನ್ನು ಶಿವಮೊಗ್ಗ ಜಿಲ್ಲೆ ಹೊಂದಿದೆ. ಇದರಿಂದ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 12 ಆರೋಪಿಗಳಿಗೆ ಶಿಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್​ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಎಸ್ಪಿ ಮಿಥುನ್ ಕುಮಾರ್ ಹಾರ, ಶಾಲು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

ಪೊಲೀಸ್​ ಅಧಿಕಾರಿಗಳಿಗೆ ಎಸ್ಪಿಯಿಂದ ಅಭಿನಂದನೆ
ಪೊಲೀಸ್​ ಅಧಿಕಾರಿಗಳಿಗೆ ಎಸ್ಪಿಯಿಂದ ಅಭಿನಂದನೆ

ಮಾಳೂರು ಪೊಲೀಸ್ ಠಾಣೆಯ ಸಿಪಿಐ ಪ್ರವೀಣ್ ನೀಲಮ್ಮನವರ್, ಹೊಸನಗರದ ಸಿಪಿಐ ಗಿರೀಶ್, ಮಾಳೂರು ಪೊಲೀಸ್ ಠಾಣೆಯ ಪಿಎಸ್ಐ ನವೀನ ಕುಮಾರ್ ಮಠಪತಿ, ದೊಡ್ಡಪೇಟೆಯ ಎಎಸ್ಐ ಅಂತೋನಿ ಆನಂದ್, ಕೋಟೆ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್, ಆನಂದಪುರಂ ಪೊಲೀಸ್ ಠಾಣೆ ಎಎಸ್ಐ ಸಿದ್ದರಾಮಪ್ಪ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ದಿವಾಕರ ರಾವ್, ಜಯನಗರ ಪೊಲೀಸ್ ಠಾಣೆಯ ಎಎಸ್ಐ ಕರಿಬಸಪ್ಪ, ಹೊಳೆಹೊನ್ನೂರು ಠಾಣೆಯ ಹೆಚ್ ಸಿ ಶ್ರೀಮತಿ ವನಿತಾ, ಭದ್ರವತಿಯ ಹೆಚ್ ಸಿ ವಿಶಾಲಾಕ್ಷಿ, ಡಿಸಿಆರ್ ಬಿ ಹೆಚ್​ ಸಿ ಮಹೇಶ್, ರಿಪ್ಪನಪೇಟೆಯ ಹೆಚ್ ಸಿ ಪರಮೇಶ್, ಮಾಳೂರು ಹೆಚ್ ಸಿ ಲೋಕೇಶ್, ಜಯನಗರ ಠಾಣೆಯ ಹೆಚ್ ಸಿ ಸರೋಜಮ್ಮ, ಭದ್ರಾವತಿಯ ಹೆಚ್ ಸಿ ವಿಜಯ ಕಲಾ, ಶಿಕಾರಿಪುರ ಗ್ರಾಮಾಂತರ ಠಾಣೆಯ ಹೆಚ್ ಸಿ ಪರಶುರಾಮ್ ಹಾಗೂ ಹೊಸನಗರ ಠಾಣೆಯ ಮಕ್ಸೂದ್ ಖಾನ್ ಗೌರವ ಸ್ವೀಕರಿಸಿದರು.

ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ
ಗಸ್ತು ದ್ವಿ ಚಕ್ರ ವಾಹನಗಳಿಗೆ ಚಾಲನೆ

ಸಂಚಾರ ಗಸ್ತು ದ್ವಿಚಕ್ರ ವಾಹನಗಳಿಗೆ ಚಾಲನೆ : ಶಿವಮೊಗ್ಗ ನಗರದಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿ‌ಕೊಡುವ ದೃಷ್ಟಿಯಿಂದ ಬುಧವಾರ ಎಸ್ಪಿ‌ ಮಿಥುನ್ ಕುಮಾರ್ 4 ಭದ್ರಾ ಸಂಚಾರ ಗಸ್ತು ದ್ವಿಚಕ್ರ ವಾಹನಗಳಿಗೆ ಚಾಲನೆ ನೀಡಿದರು. ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪಿಎಎಸ್ (ಪಬ್ಲಿಕ್ ಅಡ್ರೆಸ್ ಸಿಸ್ಟಮ್), ಸೈರನ್, ಲೈಟಿಂಗ್, ವಾಕಿ ಟಾಕಿ ಹಾಗೂ ಇತರೆ ಉಪಕರಣಗಳನ್ನು ವಾಹನ ಒಳಗೊಂಡಿದೆ.

ಇದನ್ನೂ ಓದಿ : ಬಾರ್​ ಮುಚ್ಚುವ ಸಮಯವಾಯ್ತು ಅಂದದಷ್ಟೇ.. ಶಿವಮೊಗ್ಗದಲ್ಲಿ ಪೊಲೀಸರ ಮುಂದೆಯೇ ಕ್ಯಾಷಿಯರ್ ಕೊಲೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.